ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರೀತಿಸಿ ವಿವಾಹವಾಗಿ 2 ಮಕ್ಕಳಾದ ನಂತ್ರ ಪತ್ನಿಯನ್ನು ಉಸಿರುಗಟ್ಟಿಸಿ ಪಾಪಿ ಪತಿಯೊಬ್ಬ ಕೊಲೆಗೈದ ಘಟನೆ ಭದ್ರಾವತಿಯ ಬೊಮ್ಮನಕಟ್ಟೆಯ ಪಂಡರಹಳ್ಳಿ ಕ್ಯಾಂಪ್ ನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಪಂಡರಹಳ್ಳಿ ಕ್ಯಾಂಪ್ ನಲ್ಲಿ ಜನವರಿ.11ರಂದು ಮನೆಯಲ್ಲಿ ಉಸಿರುಗಟ್ಟಿಸಿ ಚಂದನಾಬಾಯಿ ಕೊಲೆಯನ್ನು ಪತಿ ಮಾಡಿದ್ದಾನೆ. ಪತ್ನಿ ಕೊಂದು ತನಗೇನು ಗೊತ್ತಿಲ್ಲದಂತೆ ಪತಿ ಗೋಪಿ ವರ್ತಿಸುತ್ತಿದ್ದನಂತೆ.
ಡಿ.ಬಿ ಹಳ್ಳಿ ಲಂಬಾಣಿ ಸಮುದಾಯದ ಚಂದನಾಬಾಯಿ, ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪ್ರೀತಿಸಿ ವಿವಾಹವಾಗಿದ್ದರು. 2 ಗಂಡು ಮಕ್ಕಳು ಕೂಡ ಆಗಿದ್ದರು. ಹೀಗಿದ್ದರೂ ಮತ್ತೊಬ್ಬಳ ಜೊತೆಗೆ ಗೋಪಿ ಲವ್ ನಲ್ಲಿ ಬಿದ್ದಿದ್ದನಂತೆ. ಹೀಗಾಗಿ ಮೊದಲ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.








