19 ವರ್ಷದೊಳಗಿನವರ ವಿಶ್ವಕಪ್ 2026 ರಲ್ಲಿ ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಪ್ರಮುಖ ಮೈಲಿಗಲ್ಲಿಗೆ ಹತ್ತಿರದಲ್ಲಿದ್ದಾರೆ. ಯುವ ಏಕದಿನ ಕ್ರಿಕೆಟ್ನಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಲು ಕೇವಲ ಆರು ರನ್ ಗಳ ಅಗತ್ಯವಿದೆ.
ಕೊಹ್ಲಿ 28 ಪಂದ್ಯಗಳಲ್ಲಿ 46.57ರ ಸರಾಸರಿಯಲ್ಲಿ 978 ರನ್ ಗಳಿಸಿದ್ದರು.
ವೈಭವ್ ಈಗಾಗಲೇ ಕೇವಲ 18 ಯುವ ಏಕದಿನ ಪಂದ್ಯಗಳಲ್ಲಿ 54.05 ಸರಾಸರಿಯಲ್ಲಿ 973 ರನ್ ಗಳಿಸಿದ್ದಾರೆ. ಅವರು 164.08 ಸ್ಟ್ರೈಕ್ ರೇಟ್ ನೊಂದಿಗೆ ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಯೂತ್ ಏಕದಿನ ಕ್ರಿಕೆಟ್ನಲ್ಲಿ 1,000 ರನ್ ಪೂರೈಸಲು ಅವರಿಗೆ ಕೇವಲ 27 ರನ್ ಅಗತ್ಯವಿದೆ ಮತ್ತು ಈ ಸಾಧನೆ ಮಾಡಿದ ಏಳನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು.
ಕಳೆದ ಒಂದು ವರ್ಷದಿಂದ, ವೈಭವ್ ವಯೋಮಾನದ ಕ್ರಿಕೆಟ್ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸುದ್ದಿ ಮಾಡಿದ್ದಾರೆ. ಅವರು ಐಪಿಎಲ್, ಇಂಡಿಯಾ ಎ ಮತ್ತು ಭಾರತ ಅಂಡರ್ -19 ತಂಡದಲ್ಲಿ ಪ್ರಭಾವ ಬೀರಿದ್ದಾರೆ. ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಇಂದು ಪ್ರಾರಂಭವಾಗುವ ಅಂಡರ್ -19 ವಿಶ್ವಕಪ್ ಅವರಿಗೆ, ಮತ್ತೊಂದು ಪ್ರಮುಖ ದಾಖಲೆಯನ್ನು ಮುರಿಯಲು ಅವರಿಗೆ ಮೊದಲ ದಿನದಂದು ದೊಡ್ಡ ಅವಕಾಶವಿದೆ.








