ಬುಧವಾರ ರಾತ್ರಿ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ವೇದಿಕೆಯಲ್ಲಿದ್ದ ಭದ್ರತಾ ಅಧಿಕಾರಿಗಳನ್ನು ದಾಟಿ ಅಭಿಮಾನಿ ಭೇಟಿ ಮಾಡಿದನು.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ಷಣಕಾಲ ದಿಗ್ಭ್ರಮೆಗೊಂಡರು. ಆದರೆ ತಕ್ಷಣವೇ ಚೇತರಿಸಿಕೊಂಡು, ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಒರಟಾಗಿ ನಡೆಸಿಕೊಳ್ಳಬೇಡಿ ಮತ್ತು ಆತನ ಮೇಲೆ ಬಲಪ್ರಯೋಗ ಮಾಡಬೇಡಿ ಎಂದು ಅಧಿಕಾರಿಗಳಲ್ಲಿ ವಿನಂತಿಸಿದರು.
ಆದರೆ ಕೊಹ್ಲಿಯ ಈ ಮನವಿ ಅಧಿಕಾರಿಗಳ ಕಿವಿಗೇ ಬೀಳಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಸೋಲನ್ನು ಅನುಭವಿಸಿದೆ. ಈ ಗೆಲುವಿನೊಂದಿಗೆ ಪ್ರವಾಸಿ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯವು ಭಾನುವಾರ ಇಂದೋರ್ನಲ್ಲಿ ನಡೆಯಲಿದೆ.
ಉತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಆಕರ್ಷಕ ಬೌಂಡರಿಯೊಂದಿಗೆ ಇನಿಂಗ್ಸ್ ಆರಂಭಿಸಿ ಭರವಸೆ ಮೂಡಿಸಿದರೂ, 23 ರನ್ ಗಳಿಸಿ ಔಟಾದರು. ಬ್ಯಾಟಿಂಗ್ಗೆ ಕಠಿಣವಾಗಿದ್ದ ಪಿಚ್ನಲ್ಲಿ ನ್ಯೂಜಿಲೆಂಡ್ ಬೌಲರ್ಗಳು ಭಾರತದ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಆದರೆ, ಕನ್ನಡಿಗ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಆಕರ್ಷಕ ಶತಕ ಸಿಡಿಸಿದರು. ಇದು ಅವರ ಏಕದಿನ ವೃತ್ತಿಜೀವನದ 8ನೇ ಶತಕವಾಗಿದೆ. ರಾಹುಲ್ ಅವರ ಈ ಸಾಹಸದಿಂದ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು. ಭಾರತದ ನಾಯಕ ಶುಭಮನ್ ಗಿಲ್ ಕೂಡ ಸತತ ಎರಡನೇ ಅರ್ಧಶತಕ ಸಿಡಿಸುವ ಮೂಲಕ ಪ್ರಮುಖ ಕೊಡುಗೆ ನೀಡಿದರು.
ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಭಾರತಕ್ಕೆ ತಕ್ಕ ಪ್ರತಿರೋಧ ಒಡ್ಡಿತು. ಭಾರತದ ವಿರುದ್ಧ ಅಮೋಘ ಫಾರ್ಮ್ ಮುಂದುವರಿಸಿದ ಡೇರಿಲ್ ಮಿಚೆಲ್ ಪಂದ್ಯ ಗೆಲ್ಲಿಸಿಕೊಡುವ ಶತಕ ಸಿಡಿಸಿದರು. ಅವರು 117 ಎಸೆತಗಳಲ್ಲಿ ಅಜೇಯ 131 ರನ್ ಗಳಿಸಿದರು. ಮಿಚೆಲ್ ಸಾಹಸದಿಂದ ಕಿವೀಸ್ ಪಡೆ 47.3 ಓವರ್ಗಳಲ್ಲಿ ಗುರಿಯನ್ನು ತಲುಪಿತು.
During the India vs New Zealand 2nd ODI, a fan of Virat Kohli jumped the fence at the Rajkot Stadium to meet him.
The security personnels caught the fan and beat him badly. 😅😭 pic.twitter.com/QrdnJeHo7e
— Jara (@JARA_Memer) January 14, 2026








