ಮಂಡ್ಯ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯದಲ್ಲಿ ಜ.13 ರಂದು ನಡೆದ ಜಿಲ್ಲಾ ಮಟ್ಟದ 2025-26 ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದ್ದೂರು ನಗರದ ಶಿವಪುರದ ಪೂರ್ಣಪ್ರಜ್ಞಾ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷಣದಲ್ಲಿ ಎಸ್.ಪಿ.ಚಂದನ, ಹಿಂದಿ ಭಾಷಣದಲ್ಲಿ ಕುಲ್ಸಮ್ ನಿದಾ, ಗಜಲ್ ನಲ್ಲಿ ಸಾರಾ ಅಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆಂದು ಬಿಇಒ ಎಸ್.ಬಿ.ಧನಂಜಯ, ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಜಮೀನು ಕಬಳಿಕೆ : ಮಂಡ್ಯದ ನಾಗಮಂಗಲ ತಾಲೂಕು ಕಛೇರಿಯ ನಾಲ್ವರು ಸರ್ಕಾರಿ ನೌಕರರು ಅಮಾನತು








