ಶಿವಮೊಗ್ಗ : ಅಂಗವಿಕಲ ಮಹಿಳೆಗೆ ಸ್ವಯಂ ಉದ್ಯೋಗಕ್ಕಾಗಿ ಕಿರಾಣಿ ಅಂಗಡಿ ಹಾಗೂ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿ ಸ್ವಯಂ ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸುವ ಮಾದರಿ ಕಾರ್ಯವನ್ನು ಸಾಗರದ ಸಫಾ ಬೈತುಲ್ ಮಾಲ್ ಸಂಸ್ಥೆ ಮಾಡಿದೆ. ಈ ಮೂಲಕ ಸಫಾ ಸಂಸ್ಥೆ ಸಾಮಾಜಿಕ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಜಂಬಗಾರು ಆಶ್ರಯ ಬಡಾವಣೆ ನಿವಾಸಿ ಮಮ್ತಾಜ್ ತನ್ನ ವೃದ್ಧ ತಾಯಿಯೊಂದಿಗೆ ವಾಸಿಸುತ್ತಿದ್ದರು. ಈಗಾಗಲೇ ಈ ಮಹಿಳೆಗೆ ಸಫಾ ಸಂಸ್ಥೆಯ ಮೂಲಕ ಮಾಸಿಕ ಪಿಂಚಣೆ ವ್ಯವಸ್ಥೆ ನೀಡಲಾಗುತ್ತಿದೆ. ಮಹಿಳೆಯ ಸಮಸ್ಯೆಯನ್ನರಿತು ಸಫಾ ಸಂಸ್ಥೆಯ ಅಧ್ಯಕ್ಷ ಮೌಲಾನಾ ಕಲೀಮುಲ್ಲಾ ,ಹಾಫಿಜ್ ಷಫೀವುಲ್ಲಾ ಹಾಗೂ ಇನ್ನಿತರ ಪ್ರಮುಖರು ಮುಮ್ತಾಜ್ ಅವರ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ದಾನಿಗಳ ನೆರವಿನಿಂದ ಸುಸಜ್ಜಿತವಾದ ಕಿರಾಣಿ ಅಂಗಡಿ ಹಾಗೂ ಅಂಗಡಿಗೆ ಬೇಕಾದ ವಸ್ತುಗಳನ್ನು ನೀಡಿದ್ದಾರೆ.
ಈಚೆಗೆ ಸಫಾ ಬೈತುಲ್ ಮಾಲ್ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಮೌಲಾನಾ ಗಯಾಸ್ ಅಹಮದ್ ರಶಾದಿ ಕಿರಾಣಿ ಅಂಗಡಿಯನ್ನು ಉದ್ಘಾಟಿಸಿದರು. ಇದೇ ವೇಳೆ ಸಾಗರದ ಸಫಾ ಬೈತುಲ್ ಮಾಲ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಸಹಾಯ ಪಡೆದುಕೊಂಡ ಮಮ್ತಾಜ್ ಮಾತನಾಡಿ, ಸಂಸ್ಥೆಯ ಋಣ ಎಂದಿಗೂ ತೀರಿಸಲಾಗದು ನನ್ನ ಜೀವನಕ್ಕೆ ಒಂದು ಹೊಸ ಉದ್ಯೋಗ ಸೃಷ್ಟಿ ಮಾಡಿಕೊಟ್ಟು ಜೀವನ ಸಾಗಿಸಲು ನೆರವಾಗಿದ್ದಕ್ಕೆ ಸಂಸ್ಥೆಯ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದರು. ಇನ್ನು ಮುಂದೆ ಸಾಧ್ಯವಾದಷ್ಟು ದುಡಿದು ಸಮಾಜಕ್ಕೆ ನಾನು ಕೂಡ ನನ್ನಂತೆ ಇರುವ ಅಂಗವಿಕಲರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಜ್ಲಿಸೆ ಸಮಿತಿ ಅಧ್ಯಕ್ಷ ಆರ್ ಎ ಕೆ ಫಯಾಜ್,ಅಂಜುಮನ್ ಸಮಿತಿಯ ಮಹಮ್ಮದ್ ಇಕ್ಬಾಲ್, ಪ್ರಮುಖರಾದ ಮಕ್ಬೂಲ್ ಅಹಮದ್, ರಹೀಂ ಸಾಬ್, ಷಫೀವುಲ್ಲಾ, ಹಸೈನಾರ್, ಶೇಖ್ ಅಲ್ತಾಫ್, ಸಫಾ ಸಂಸ್ಥೆಯ ಇರ್ಷಾದ್ ಆಲಿಖಾನ್, ಕೆ.ಭಾಷಾ ಸಾಬ್, ಹನೀಫ್ ಶೇಖ್, ಜಹೀರ್ ಅಹಮದ್, ಇಮ್ತಿಯಾಜ್ ಭಾಷಾ, ಜಫರುಲ್ಲಾ ಖಾನ್, ರಹಮತ್, ಅಂಜುಂ ಆಲಿಖಾನ್, ಅಸದುಲ್ಲಾ ಸೇರಿದಂತೆ ಇತರರು ಹಾಜರಿದ್ದರು.
ಶಿವಮೊಗ್ಗ: ಸಾಗರದ ಉಳ್ಳೂರಲ್ಲಿ ಅಕ್ರಮವಾಗಿ ‘ಮರ ಕಡಿತಲೆ’ ಮಾಡಿದವರ ವಿರುದ್ಧ ಕೇಸ್ ದಾಖಲು
BIG Alert: ನಿಮಗೂ ಈ ರೀತಿಯಾಗಿ ‘WhatsApp ಮೆಸೇಜ್’ ಬಂದಿದ್ಯಾ? ಕ್ಲಿಕ್ ಮಾಡಿದ್ರೆ ‘ಬ್ಯಾಂಕ್ ಖಾತೆ’ಯೇ ಖಾಲಿ ಎಚ್ಚರ!








