ಶಿವಮೊಗ್ಗ: ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಪತಿ, ಮಕ್ಕಳು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಡಗೆರೆ ಬಳಿಯಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿ ತೆರಳುತ್ತಿದ್ದಂತ ಶಿಕಾರಿಪುರ ಮೂಲದ ಅಮೃತಾ ದುರ್ಮರಣ ಹೊಂದಿದ್ದಾರೆ.
ಪಲ್ಸರ್ ಬೈಕ್ ನಲ್ಲಿ ಶಿಕಾರಿಪುರದಿಂದ ರಿಪ್ಪನ್ ಪೇಟೆಗೆ ಪತಿ, ಪತ್ನಿ ಮಕ್ಕಳು ತೆರಳುತ್ತಿದ್ರು. ಇವರ ಬೈಕ್ ಗೆ ಹಿಂಬದಿಯಿಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪತ್ನಿ ಅಮೃತಾ ಸಾವನ್ನಪ್ಪಿದ್ದರೇ, ಪತಿ, ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಜ್ಯದ ‘ಗಿಲೆನ್-ಬಾರಿ ಸಿಂಡ್ರೋಮ್’ ಪೀಡಿತರಿಗೆ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಅವಕಾಶ
ಶಿವಮೊಗ್ಗ: ಸಾಗರದ ಉಳ್ಳೂರಲ್ಲಿ ಅಕ್ರಮವಾಗಿ ‘ಮರ ಕಡಿತಲೆ’ ಮಾಡಿದವರ ವಿರುದ್ಧ ಕೇಸ್ ದಾಖಲು








