ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಜಮೀನಿನಲ್ಲಿ ಬೆಳೆದಿದ್ದಂತ ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿತ್ತು. ಈ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌ ಸಾಗರದ ಉಳ್ಳೂರಲ್ಲಿ ‘ಮರಗಳ ಮಾರಣಹೋಮ’: ಕಣ್ಣುಚ್ಚಿ ಕುಳಿತ ‘ಅರಣ್ಯ ಇಲಾಖೆ’ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ಅಕ್ರಮವಾಗಿ ಕಡಿದ ಮರಗಳನ್ನು ಜಪ್ತಿ ಮಾಡಿದ್ದಲ್ಲದೇ, ಇಬ್ಬರ ವಿರುದ್ಧ ಅರಣ್ಯಾಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.
ಈ ಕುರಿತಂತೆ ಅರಣ್ಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನ ಸರ್ವೆ ನಂಬರ್.25ರಲ್ಲಿ ಖಾಸಗಿ ಜಮೀನಿನಲ್ಲಿ ಇದ್ದಂತ ಮರಗಳನ್ನು ಅಕ್ರಮವಾಗಿ ರಿಯಾಜ್ ಅಹ್ಮದ್ ಹಾಗೂ ಖಲೀಮುಲ್ಲಾ ಎಂಬುವರು ಕಡಿತಲೆ ಮಾಡಿದ್ದರು. ಜೆಸಿಬಿ ಬಳಸಿ ಕಡಿತಲೆ ಮಾಡಿದಂತ ಮರಗಳ ಬುಡಗಳನ್ನು ಕಿತ್ತು ಹಾಕಿದ್ದರು. ಕಡಿತಲೆ ಮಾಡಿದ್ದಂತ 20 ಮೀಟರ್ ನಷ್ಟು ನಾಟವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ಕೆಟಿಪಿಪಿ ಕಾಯ್ದೆ 1976ರ 8, 15, 22 ಹಾಗೂ ಕೆಎಫ್ ಸಿಯ 1963 ಸೆಕ್ಷನ್ 62ರಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದೆ.
ಅಕ್ರಮವಾಗಿ ಉಳ್ಳೂರಿನ ಸರ್ವೆ ನಂಬರ್.25ರಲ್ಲಿ ಮರ ಕಡಿತಲೆ ಮಾಡಿದ ಸಂಬಂಧ ತನಿಖಾ ವರದಿಯನ್ನು ಡಿಎಫ್ಓಗೆ ಸಲ್ಲಿಸಲಾಗುತ್ತದೆ. ಅವರ ನಿರ್ದೇಶನದಂತೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದೆ.
ಅಂದಹಾಗೇ ಸಾಗರದ ಉಳ್ಳೂರಿನ ಸರ್ವೆ ನಂಬರ್.25ರ ಖಾಸಗಿ ಜಮೀನಿನಲ್ಲಿ ಬೆಳೆದಿದ್ದಂತ ಸುಮಾರು 17 ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ. ಇದರಲ್ಲಿ 10 ಮೀಟರ್ ನಷ್ಟು ನಾಟವನ್ನು ವಶಕ್ಕೆ ಪಡೆದಿದ್ದರೇ, 20 ಮೀಟರ್ ನಷ್ಟು ನಾಶ ಪಡಿಸಲಾಗಿದೆ ಎಂಬುದಾಗಿ ಅಂದಾಜಿಸಲಾಗಿದೆ.
ಶಿವಮೊಗ್ಗ ಸಿಸಿಎಫ್ ಹನುಂತಪ್ಪ ಕೆ.ಟಿ ನಿರ್ದೇಶನದಂತೆ, ಸಾಗರ ಡಿಎಫ್ ಓ ಮೊಹಮ್ಮದ್ ಫಯಾಸುದ್ದೀನ್, ಎಸಿಎಫ್ ರವಿ.ಕೆ ಮಾರ್ಗದರ್ಶನದಲ್ಲಿ, ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ನೇತೃತ್ವದಲ್ಲಿ ಉಳ್ಳೂರು ಡಿಆರ್ ಎಫ್ ಓ ಶಿವರಾಜ್, ವಾಚರ್ ಯಮನೂರಪ್ಪ, ಅರಣ್ಯ ರಕ್ಷಕ ಉಮೇಶ್ ಪಾಟೀಲ್ ನಾಟ ವಶ ಪಡೆಸಿಕೊಂಡು, ಕೇಸ್ ದಾಖಲಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡನನ್ನು ಬಂಧಿಸುವಂತೆ HDK ಆಗ್ರಹ
BREAKING: ‘ಶಬರಿಮಲೆ’ಯಲ್ಲಿ ‘ಮಕರ ಜ್ಯೋತಿ’ ದರ್ಶನ; ಭಾವಪರವಶರಾದ ‘ಅಯ್ಯಪ್ಪನ ಭಕ್ತ ಗಣ’ | Makaravilakku 2026








