ಉಳ್ಳಾಲ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಶಬರಿಮಲೆ ಯಾತ್ರೆ ಕೈಗೊಂಡಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೇರಳದ ಎರಿಮಲೆ ಬೆಟ್ಟವನ್ನು ಸೋಮವಾರ ಏರುತ್ತಿದ್ದಾಗ ಹೃದಯಾಘಾತದಿಂದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ನಿಧನರಾಗಿದ್ದಾರೆ.ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಕಾಡಿನ ದಾರಿಯಾಗಿ ಪಂಪೆಗೆ ಸಾಗುತ್ತಿದ್ದಾಗ ಕುಸಿದು ಬಿದ್ದರು.
ಚಂದ್ರಹಾಸ್ ಅವರು ಮೂಲತಃ ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು.








