Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM

ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕರೆಂಟ್ ಇರಲ್ಲ | Power Cut

12/01/2026 7:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!
KARNATAKA

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5712/01/2026 8:00 PM

ಬೆಂಗಳೂರು : ರಾಜ್ಯದ ರೈತರೇ ಗಮನಿಸಿ, ಕೃಷಿ ಇಲಾಖೆಯಿಂದ ನಿಮಗೆ ಕೃಷಿ ಯಂತ್ರೋಪಕರಣ, ಬೆಳೆ ವಿಮೆ, ನೀರಾವರಿ, ಮಣ್ಣು ಪರೀಕ್ಷೆ, ಆದಾಯ ಬೆಂಬಲ ಮತ್ತು ಮಾರುಕಟ್ಟೆ ಸಂಪರ್ಕದಂತಹ ವಿವಿಧ 21 ಸೌಲಭ್ಯಗಳು ಸಿಗಲಿವೆ.

ರಾಜ್ಯದ ರೈತರಿಗೆ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

1. ಬೀಜಗಳ ಪೂರೈಕೆ: ಕೃಷಿ ಇಲಾಖೆಯ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ

ಯೋಜನೆಯಡಿ ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ (ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೊಗರಿ, ಕಡಲೆ, ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಸೋಯಾ ಅವರೆ, ಹತ್ತಿ ಇತ್ಯಾದಿ) ಪ್ರಮಾಣಿತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.75 ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್ ಅಥವಾ ಅವರ ವಾಸ್ತವಿಕ ಹಿಡುವಳಿ (Actual holding) ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ ವಿತರಣೆಯಲ್ಲಿ ರೈತರ ಪಹಣಿಯಲ್ಲಿನ ವಿವರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಜಾತಿ ಪ್ರಮಾಣ ಪತ್ರವನ್ನು ជជ໖. ผู้ส่ง Farmer Registration & Unified Beneficiary Information System – FRUITS , Farmers Identification number(FID) ಪಡೆದಿರಬೇಕು.

2. ಸಸ್ಯ ಸಂರಕ್ಷಣೆ: ಶೇ.50ರ ಸಹಾಯಧನದಡಿ ಪೀಡೆನಾಶಕ/ ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳ ವಿತರಣೆ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ತರಬೇತಿಗಾಗಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ರೈತರು Farmer Registration & Unified Beneficiary Information System FRUITS Fe ನಲ್ಲಿ ನೋಂದಣಿಯಾಗಿ Farmers Identification number(FID) ಪಡೆದಿರಬೇಕು.

3. ಕೃಷಿ ಯಾಂತ್ರೀಕರಣ & ಕೃಷಿ ಸಂಸ್ಕರಣೆ:

ಕೃಷಿ ಯಾಂತ್ರೀಕರಣ: ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಈ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತದೆ ಹಾಗೂ 45 ಪಿ.ಟಿ.ಒ ಹೆಚ್.ಪಿ ವರೆಗಿನ ಟ್ರಾಕ್ಟರ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ರೂ.0.75 ಲಕ್ಷ ಹಾಗೂ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರ ಗರಿಷ್ಠ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಸಂಸ್ಕರಣೆ: ಈ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಟಾರ್ಪಾಲಿನ್ ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು ಮತ್ತು ಟಾರ್ಪಾಲಿನ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನದಡಿ ನೀಡಲಾಗುವುದು. ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.75 ಹಾಗೂ ಪ.ಜಾ./ಪ.ಪಂ., ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ.

 Farmer Registration and Unified Beneficiary Information System FRUITS F Farmers Identification number (FID) ಪಡೆಯಬೇಕು. ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಆ‌ರ್.ಟಿ.ಸಿ. ಯೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಕೆ-ಕಿಸಾನ್ ತಂತ್ರಾಂಶದಲ್ಲಿ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ರೈತರಿಗೆ ಜೇಷ್ಠತೆ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇರೆಗೆ ಮಾರ್ಗಸೂಚಿ ಅನ್ವಯ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ ರೈತರಿಗೂ ಯಂತ್ರೋಪಕರಣ/ಕೃಷಿ ಸಂಸ್ಕರಣಾ ಘಟಕಗಳ ಯೋಜನೆಯ ಸೌಲಭ್ಯ ನೀಡುವ ದೃಷ್ಟಿಯಿಂದ, ಒಮ್ಮೆ ಕೃಷಿ ಯಂತ್ರೋಪಕರಣ/ಕೃಷಿ ಸಂಸ್ಕರಣಾ ಘಟಕಗಳ ಸೌಲಭ್ಯ ಪಡೆದ ರೈತರು 7 ವರ್ಷಗಳ ನಂತರ ಮತ್ತು ಕೃಷಿ ಸಂಸ್ಕರಣಾ ಕಾರ್ಯಕ್ರಮದಡಿ ಟಾರ್ಪಲಿನ್ ಸೌಲಭ್ಯ ಪಡೆದ ರೈತರು 3 ವರ್ಷಗಳ ನಂತರ ಮತ್ತೆ ಸದರಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

4. ರೈತ ಸಿರಿ & ಸಾವಯವ ಕೃಷಿ: ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ

ಕಾರ್ಯಕ್ರಮದಡಿ ರಾಜ್ಯದ ಸಾವಯವ ಪ್ರಮಾಣೀಕೃತ ಪ್ರದೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಸಕ್ತ ಗುಂಪು ಮತ್ತು ವ್ಯಕ್ತಿಗತ ಪ್ರಸ್ತಾವನೆಗಳ ಪ್ರಮಾಣೀಕರಣಕ್ಕಾಗಿ ಅನುದಾನ ಬಳಕೆ ಮಾಡಲಾಗುತ್ತದೆ.

ರೈತ ಸಿರಿ ಕಾರ್ಯಕ್ರಮದಡಿ ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು, ಬರಗು ಬೆಳೆಗಳನ್ನು ಬೆಳೆದ ಎಲ್ಲಾ ವರ್ಗದ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ.10000/-ದಂತೆ ಗರಿಷ್ಠ ಎರಡು ಹಕ್ಕೇರುಗಳಿಗೆ ಬೆಳೆ ಸಮೀಕ್ಷೆ ಆಧಾರದಂತೆ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು ಹಾಗೂ ಸಾವಯವ ಮತ್ತು ಸಿರಿಧಾನ್ಯಗಳ ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

5. ಸಾವಯವ ಇಂಗಾಲ ಅಭಿಯಾನ: ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲದ

ಪ್ರಮಾಣವನ್ನು ಹೆಚ್ಚಿಸಲು, ದ್ವಿದಳಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸುವ ಸಲುವಾಗಿ ಶೇ. 75ರ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳ ವಿತರಣೆ ಮಾಡಲಾಗುವುದು ಹಾಗೂ ಹಸಿರೆಲೆ ಗೊಬ್ಬರ ಬೀಜ ಮತ್ತು ಸಾವಯವ ಗೊಬ್ಬರಗಳ ಬಳಕೆಯಿಂದ ಸಾವಯವ ಇಂಗಾಲ ಹೆಚ್ಚಿಸುವ ಕುರಿತು ಪ್ರಾತ್ಯಕ್ಷಿಕೆಗಳನ್ನು (ಪ್ರತಿ ಪ್ರಾತ್ಯಕ್ಷಿಕೆಗೆ ರೂ. 2500/-) ಆಯೋಜಿಸಲಾಗುತ್ತಿದೆ. ರೈತರು Farmer Registration & Unified Beneficiary Farmers Identification Information System – FRUITS number(FID) ಪಡೆದಿರಬೇಕು.

6. ಹೊಸ ಬೆಳೆ ವಿಮಾ ಯೋಜನೆ: ಈ ಯೋಜನೆಯಡಿ ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು

ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೀಡಲಾಗುವುದು. ರೈತರಿಗೆ ನೀಡುವ ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಲಾಗುತ್ತಿದೆ.

ಈ ಯೋಜನೆಯಡಿ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಪ್ರಥಮವಾಗಿ ಅಧಿಸೂಚಿಸಲಾಗುತ್ತದೆ. ಅಂತಿಮ ದಿನಾಂಕದೊಳಗೆ ರೈತರಿಂದ ಪ್ರೀಮಿಯಂ ಪಡೆದು ಬ್ಯಾಂಕ್ / ಸಹಕಾರ ಸಂಸ್ಥೆ / ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಕಾರ್ಯ ಕೈಗೊಳ್ಳಲಾಗುತ್ತದೆ ದಾಖಲೆಗಳನ್ನು ಪರಿಶೀಲಿಸಿ ಅರ್ಹ ರೈತರ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಅಂಗೀಕರಿಸಲು ರವಾನಿಸಲಾಗುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಕ್ಷೇತ್ರಾಧಾರಿತ ಹಾಗೂ ಇಳುವರಿ ಆಧಾರಿತ ಯೋಜನೆಯಾಗಿದ್ದು, ಮಾರ್ಗಸೂಚಿಯನುಸಾರ ಹೋಬಳಿ / ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯವರು ನೀಡುವ ಬೆಳೆ ಕಟಾವು ಪ್ರಯೋಗಗಳಿಂದ ಬಂದಂತಹ ವಾಸ್ತವಿಕ ಇಳುವರಿ ಮಾಹಿತಿಯು ನಿಗದಿಪಡಿಸಲಾದ ಪ್ರಾರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಕೊರತೆಗನುಗುಣವಾಗಿ ಹೋಬಳಿ/ ಗ್ರಾಮ ಪಂಚಾಯಿತಿಯಲ್ಲಿ ಬೆಳೆ ವಿಮೆ ಮಾಡಿಸಿದ ಎಲ್ಲಾ ರೈತರು ಬೆಳೆ ವಿಮಾ ನಷ್ಟ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಅರ್ಹ ರೈತರಿಗೆ ವಿಮೆ ಪರಿಹಾರ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವಿಮಾ ಸಂಸ್ಥೆಯವರು ವರ್ಗಾಯಿಸುತ್ತಾರೆ.

7. ಬೆಳೆ ಸಮೀಕ್ಷೆ: ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಮತ್ತು ಬೇಸಿಗೆ

ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡ ಖಾಸಗಿ ನಿವಾಸಿಗಳಿಗೆ ಕೇಂದ್ರೀಕೃತ DBT k2 ಮೂಲಕ ಆಧಾ‌ರ್ ಆಧಾರಿತ ನೇರ ಗೌರವಧನ ಪಾವತಿ, ಮಾಸ್ಟರ್ ತರಬೇತುದಾರರು ಹಾಗೂ ಜಿಲ್ಲಾ ತಾಂತ್ರಿಕ ಸಲಹೆಗಾರರ ಗೌರವಧನ, ಬೆಳೆ ಸಮೀಕ್ಷೆ ಕುರಿತು ತರಬೇತಿ, ಕಾರ್ಯಾಗಾರ ಆಯೋಜನೆ, ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಮುದ್ರಣ, ಸಿ.ಡಿ. ದಾಖಲಾತಿ, ವಿದ್ಯುನ್ಮಾನ ಮತ್ತು ವಿವಿಧ ಮಾಧ್ಯಮಗಳ ಮುಖಾಂತರ ಪ್ರಚಾರಕ್ಕಾಗಿ ತಗಲುವ ವೆಚ್ಚ, ಹೆಲ್ಸ್ ಡೆಸ್ಕ್ ಸಿಬ್ಬಂದಿ ವೇತನ ಹಾಗೂ ತಂತ್ರಾಂಶ ನಿರ್ವಹಣೆ ವೆಚ್ಚ, ಶೇ. 1ರಷ್ಟು ದತ್ತಾಂಶದ ಪರಿಶೀಲನೆ ಕೈಗೊಳ್ಳುವ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಿಬ್ಬಂದಿಗಳಿಗೆ ಗೌರವಧನ, ಬೆಳೆ ಸಮೀಕ್ಷೆ ಕಾರ್ಯತಂಡ ನಿರ್ವಹಣೆ, ಇತರೆ ಕಛೇರಿ ಮತ್ತು ಆಡಳಿತಾತ್ಮಕ ವೆಚ್ಚಕ್ಕಾಗಿ ಉಪಯೋಗಿಸಲಾಗುತ್ತದೆ. ಪಹಣಿ ಹೊಂದಿರುವ ಎಲ್ಲಾ ಹಿಡುವಳಿದಾರರು ಅರ್ಹರಿರುತ್ತಾರೆ.

8. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ: ಎಸ್.ಎಸ್.ಎಲ್.ಸಿ/ 10ನೇ ತರಗತಿಯನ್ನು

ಪೂರೈಸಿರುವ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

ಸದರಿ ಯೋಜನೆಯಡಿ:-

8, 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್.ಎಸ್.ಎಲ್.ಸಿ /10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್-ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.

ರೈತ ಕುಟುಂಬದ ಎಲ್ಲಾ ಮಕ್ಕಳು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಸದರಿ ಉದ್ದೇಶಕ್ಕೆ ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ/ ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿ (ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂಸಹಿತ FID ಸಂಖ್ಯೆ ಹೊಂದಿರಬೇಕು). ಕೃಷಿ ಕಾರ್ಮಿಕರು ಎಂದರೆ ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂರಹಿತ FID ಸಂಖ್ಯೆ ಹೊಂದಿದ್ದು MGNREGA ಉದ್ಯೋಗ ಚೀಟಿ ಹೊಂದಿರಬೇಕು. ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ “ಕುಟುಂಬ’ ತಂತ್ರಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರು.

ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಇತರೆ ಯಾವುದೇ ಇಲಾಖೆಯು ನೀಡುವ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.

9. ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ

ಹಿಂದೆ ಕೃಷಿ ಪಂಡಿತ ಪ್ರಶಸ್ತಿ: ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗಾಗಿ ಕೊಡುಗೆ ನೀಡುತ್ತಿರುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪಂಡಿತ ಪ್ರಶಸ್ತಿ ನೀಡಲಾಗುತ್ತಿದೆ. ಪಂಡಿತ ಪ್ರಶಸ್ತಿ (ಪ್ರಥಮ/ದ್ವಿತೀಯ/ತೃತೀಯ/ಉದಯೋನ್ಮುಖ) ಪಡೆದವರು ಹೊರತುಪಡಿಸಿ ಉಳಿದೆಲ್ಲಾ ರೈತ ಮತ್ತು ರೈತ ಮಹಿಳೆಯರು ಕೃಷಿ ಪಂಡಿತ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ. ಕೃಷಿ

ಕೃಷಿ ಪ್ರಶಸ್ತಿ 

ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆಯನ್ನು ಉಂಟು ಮಾಡಿ ಅತಿ ಹೆಚ್ಚು ಇಳುವರಿ ಪಡೆಯುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸಿಯನ್ನು ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಬೆಳೆ ಸ್ಪರ್ಧೆಯಡಿ ವಿಜೇತರಾದವರನ್ನು ಹೊರತುಪಡಿಸಿ ಉಳಿದೆಲ್ಲಾ ರೈತರು ಕೃಷಿ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ.

10.ತರಬೇತಿ ಕಾರ್ಯಕ್ರಮಗಳು

ಈ ಯೋಜನೆಯಡಿ ಕೃಷಿ ವಿಸ್ತರಣಾ ಅಧಿಕಾರಿಗಳ ನಿರ್ವಹಣಾ  ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಕೃಷಿ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತದೆ.

11. ಕೃಷಿ ಭಾಗ್ಯ: ಮಳೆಯಾಶ್ರಿತ ಕೃಷಿ ನೀತಿ

ಒಣ ಹವಾಮಾನ ವಲಯಗಳ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುವುದು. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ಕೆ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing). ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್, ನೀರನ್ನು ಬೆಳೆಗೆ ಘಟಕಗಳನ್ನು ಒದಗಿಸಲು ಹಾಯಿಸಲು ಸೂಕ್ಷ್ಮ(ತುಂತುರು/ಹನಿ) ಯೋಜಿಸಲಾಗುತ್ತಿದೆ. ನೀರಾವರಿ

ಫಲಾನುಭವಿಯ ಆಯ್ಕೆ ಮಾನದಂಡಗಳು:

ಕ್ಷೇತ್ರ ಪರಿಶೀಲನೆಯಲ್ಲಿ ಅರ್ಹಗೊಂಡ ರಾಜ್ಯದ 5 ಕೃಷಿ ಹವಾಮಾನ ಒಣ ವಲಯದ (ಅಚ್ಚು ಕಟ್ಟು ಪ್ರದೇಶ ಹೊರತುಪಡಿಸಿ) ಎಲ್ಲಾ ಆಸಕ್ತ ರೈತರು ಯೋಜನೆಗೆ ಅರ್ಹರಾಗಿರುತ್ತಾರೆ.

ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ 1 ಎಕರೆ (single land parcel).

ಕೃಷಿ ಭಾಗ್ಯ ಯೋಜನೆಯ ಪೂರ್ಣ ಪ್ಯಾಕೇಜ್‌ನ ಘಟಕಗಳನ್ನು ಅನುಷ್ಠಾನಗೊಳಿಸಲು ಆಸಕ್ತಿಯಿರುವಂತಹ ರೈತರನ್ನು ಮಾತ್ರ ಆಯ್ಕೆ ಮಾಡಿ ಕ್ಷೇತ್ರ ಪರಿಶೀಲನ ಕೈಗೊಳ್ಳಲಾಗುವುದು.

ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವ ಇನ್ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.

Farmers of the state take note: You will get all these facilities from the `Agriculture Department'!
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM1 Min Read

ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕರೆಂಟ್ ಇರಲ್ಲ | Power Cut

12/01/2026 7:58 PM2 Mins Read

BREAKING : ರಾಜ್ಯ ಸರ್ಕಾರದಿಂದ ಮತ್ತೆ 7 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

12/01/2026 7:47 PM1 Min Read
Recent News

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM

ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕರೆಂಟ್ ಇರಲ್ಲ | Power Cut

12/01/2026 7:58 PM

BREAKING : ರಾಜ್ಯ ಸರ್ಕಾರದಿಂದ ಮತ್ತೆ 7 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

12/01/2026 7:47 PM
State News
KARNATAKA

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

By kannadanewsnow0912/01/2026 8:06 PM KARNATAKA 1 Min Read

ಬೆಂಗಳೂರು: ನಗರದ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಪ್ರಾಂಶುಪಾಲರು ಸೇರಿದಂತೆ…

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM

ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕರೆಂಟ್ ಇರಲ್ಲ | Power Cut

12/01/2026 7:58 PM

BREAKING : ರಾಜ್ಯ ಸರ್ಕಾರದಿಂದ ಮತ್ತೆ 7 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

12/01/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.