ಬೆಂಗಳೂರು : `ಡಿಜಿಟಲ್ ಇ-ಸ್ಟಾಂಪ್’ ಸೇವೆಯನ್ನು ಸಾರ್ವಜನಿಕರು EDCS ಸಂಸ್ಥೆಯ ಸೇವಾ ಕೇಂದ್ರಗಳ ಮೂಲಕ ಪಡೆಯುವ ಸಂದರ್ಭದಲ್ಲಿ ಸೇವಾ ಶುಲ್ಕವನ್ನು ವಿಧಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಅಧಿಸೂಚನೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದಲ್ಲಿ ನಾಗರೀಕರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ, ಮುದ್ರಾಂಕ ಶುಲ್ಕದಲ್ಲಿ ವಂಚನೆ ಮತ್ತು ಭದ್ರತಾ ಕೊರತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ನಕಲಿ ಸಹಿ, ನಕಲಿ ಪ್ರತಿ ಮತ್ತು ತಪ್ಪು ವರ್ಗೀಕರಣದಿಂದ ಸರ್ಕಾರಕ್ಕೆ ಸೇರುವ ಮುದ್ರಾಂಕ ಶುಲ್ಕವನ್ನು ತಪ್ಪಿಸುವ ಘಟನೆಗಳಿಂದ ಸರ್ಕಾರಕ್ಕೆ ಆದಾಯ ನಷ್ಟವನ್ನು ಉಂಟು ಮಾಡುತ್ತಿರುವುದನ್ನು ಗಮನಿಸಿ, ಕರ್ನಾಟಕವು ಸಂಪೂರ್ಣ ಡಿಜಿಟಲ್ ನೋಂದಣಿ ವ್ಯವಸ್ಥೆಯತ್ತ ಸಾಗುತ್ತಿರುವುದರಿಂದ, ಮುದ್ರಾಂಕ ಶುಲ್ಕದಲ್ಲಿ ವಂಚನೆ ಮತ್ತು ಭದ್ರತಾ ಕೊರತೆಯನ್ನು ಸಂಪೂರ್ಣ ತೊಡೆದು ಹಾಕುವ ನಿಟ್ಟಿನಲ್ಲಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಯಾಂಪ್) ನಿಯಮಗಳು 2025 ನ್ನು ರಚಿಸಲಾಗಿರುತ್ತದೆ.
ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಯಾಂಪ್) ನಿಯಮಗಳು 2025 ನ್ನು ರಚಿಸಿ, ಜಾರಿಗೆ ತಂದಿರುವುದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದಿಂದ ನಾಗರೀಕರು ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್ ಅನ್ನು ಪಡೆಯಬಹುದಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಇ-ಕಡತದಲ್ಲಿ, ಡಿಜಿಟಲ್ ಇ-ಸ್ಟಾಂಪ್ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಜನಸೇವಕ ಸೇವಾ ಕೇಂದ್ರಗಳ Electronically Delivery of Citizen Services (EDCS) ಕೆಳಕಂಡಂತೆ ಸೇವಾ ಶುಲ್ಕವನ್ನು ಪಡೆಯಲು ಅನುಮೋದನೆ ಕೋರಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.









