ಉತ್ತರ ಕನ್ನಡ: ಜಿಲ್ಲೆಯಲ್ಲಿ ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಕಾರವಾರ ತಾಲ್ಲೂಕಿನ ಕದ್ರಾ ಗ್ರಾಮದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕದ್ರಾ ಗ್ರಾಮದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರ ಚಿರಾಗ್ ಚಂದ್ರಹಾಸ ಕೋಠಾರಕರ ಎಂಬಾತ ಹಿಂದೆ ಬಿದ್ದಿದ್ದನಂತೆ. ಆತ ಪ್ರೀತಿಯನ್ನು ರಿಶಾಲ್(20) ನಿರಾಕರಿಸಿದ್ದಳು.
ಆದರೂ ರಿಶಾಲ್ ಹಿಂದೆ ಚಂದ್ರಹಾಸ ಬಿದ್ದಿದ್ದನಂತೆ. ಈ ಹಿನ್ನಲೆಯಲ್ಲಿ ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿಯ ನಿವಾಸದಲ್ಲಿ ರಿಶಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಚಂದ್ರಹಾಸ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕ ಚಂದ್ರಹಾಸ್ ಜೆಡಿಎಸ್ ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ ಪುತ್ರನಾಗಿದ್ದಾನೆ. ರಿಶಾಲ್ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ದೂರಿನಲ್ಲಿ ಮನೆ ಬಳಿ ಬಂದು ತನ್ನನ್ನು ಪ್ರೀತಿಸುವಂತೆ ಚಿರಾಗ್ ಪ್ರೀಡಿಸುತ್ತಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದಿದ್ದ. ಇದರಿಂದ ನೊಂದು ಮನೆಯಲ್ಲೇ ರಿಶಾಲ್ ನೇಣಿಗೆ ಶರಣಾಗಿರುವುದಾಗಿ ಉಲ್ಲೇಖಿಸಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








