ಚಿತ್ರದುರ್ಗ: ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯು ಚಿತ್ರದುರ್ಗದ ಹಿರಿಯ ಪತ್ರಕರ್ತ ಕುಮಾರಸ್ವಾಮಿ.ಡಿ ಅವರಿಗೆ ಸಂದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯ ವಾರ್ಷಿಕ ಪ್ರಶಸ್ತಿಗೆ ಚಿತ್ರದುರ್ಗದ ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕುಮಾರಸ್ವಾಮಿ.ಡಿ ಬಗ್ಗೆ…
ಡಿ.ಕುಮಾರಸ್ವಾಮಿ ಅವರು 2004ರಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಬಳಿಕ, 2008ರಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದರು. ಇತಿಹಾಸದಲ್ಲಿ ಎಂ.ಎ ಕೂಡ ವ್ಯಾಸಂಗ ಮಾಡಿದ್ದಾರೆ.
ವೃತ್ತಿ ಅನುಭವ
ಸೆಪ್ಟೆಂಬರ್ 2000 ರಿಂದ ಜನವರಿ 2006 ರವರೆಗೆ (6 ವರ್ಷಗಳು ಪೂರ್ಣಗೊಂಡಿದೆ) ಈಟಿವಿ ಕನ್ನಡ ಚಾನೆಲ್‌ನ ಜಿಲ್ಲಾ ವರದಿಗಾರರಾಗಿ (ಕೆಲಸದ ಅನುಭವ). ಪತ್ರಿಕೆ ಮುಚ್ಚುವವರೆಗೆ ಉಷಾ ಕಿರಣ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರ ಮತ್ತು ಉಪ ಸಂಪಾದಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಈಟಿವಿ ಕನ್ನಡ ಚಾನೆಲ್‌ನಲ್ಲಿ ನಾನು ಹಲವಾರು ವರದಿಗಳನ್ನು ಪ್ರಕಟಗೊಂಡಿವೆ. ಮುದ್ರಣ ಮಾಧ್ಯಮವು ಈ ಸುದ್ದಿಗಳನ್ನು ಅನುಸರಿಸಿತ್ತು ಮತ್ತು ಅವುಗಳನ್ನು ಪ್ರಜಾವಾಣಿ, ಸಂಯುಕ್ತ ಕರ್ನಾಟಕ ವಿಜಯಕರ್ನಾಟಕ ಮತ್ತು ಕನ್ನಡ ಪ್ರಭದಲ್ಲಿ ಪ್ರಮುಖವಾಗಿ ಪ್ರದರ್ಶಿಸಿದ್ದಾರೆ. ಜುಲೈ 15, 2007 ರಿಂದ ಫೆಬ್ರವರಿ 2017 ರವರೆಗೆ ಸುವರ್ಣ ನ್ಯೂಸ್ ನ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದಂತ ಅವರು, ಪ್ರಸ್ತುತ ಪ್ರಜಾ ಟೀವಿ ಗಾಗಿ ಚಿತ್ರದುರ್ಗದಲ್ಲಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಬರೋಬ್ಬರಿ 25 ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಅನುಭವವನ್ನು ಡಿ.ಕುಮಾರಸ್ವಾಮಿ ಹೊಂದಿದ್ದಾರೆ.
ಪರಿಣಾಮ ಬೀರಿದ ವರದಿಗಳು:
- ಸುವರ್ಣ ನ್ಯೂಸ್ ಚಾನಲ್ ನಲ್ಲಿ ವರದಿಗಾರರಾಗಿ ಕೆಲಸ ಮಾಡುವಾಗ ನಕಲಿ ಚಿನ್ನದ ನಾಣ್ಯಗಳ ಖದೀಮರ ಬೆನ್ನಟ್ಟಿ ಸುದ್ದಿ ಮಾಡಿದ್ದು, ಈ ಮೂಲಕ ಪೊಲೀಸ್ ಇಲಾಖೆ ನಕಲಿ ಚಿನ್ನದ ನಾಣ್ಯಗಳ ಮಾರಾಟ ಮಾಡಲು ಬಂದಿದ್ದು, ಅವರನ್ನು ಹಿಡಿಯಲು ಯಶಸ್ವಿಯಾದರು.
- ಅಂಗನವಾಡಿ ಸಹಾಯಕಿ ಲಲಿತಮ್ಮ ಎಂಬ ಮಹಿಳೆಗೆ ಮಹಿಳಾಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಿರುಕುಳ ಕೊಟ್ಟಿದ್ದನ್ನು ವರದಿ ಮಾಡಿದಾಗ ಸುದ್ದಿ ವೀಕ್ಷಿಸಿದ್ದ ಹಿರಿಯ ಅಧಿಕಾರಿಗಳು ಮಹಿಳೆಗೆ ಕಿರುಕುಳ ನೀಡಿದ್ದ ಅಧಿಕಾರಿ ಮೇಲೆ ಕ್ರಮಜರುಗಿಸಿ ಮಹಿಳೆಗೆ ಮತ್ತೆ ಉದ್ಯೋಗ ನೀಡಿದ್ದರು.
- ಸುನಾಮಿ ಚಂಡಮಾರುತ ಬಂದಾಗ ಚಿತ್ರದುರ್ಗದ ಪಿಳ್ಳೇಕೆರೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಳಗಡೆಯಾಗಿದ್ದು, ವರದಿ ಪರಿಣಾಮ ಜಿಲ್ಲಾಡಳಿತ ಕ್ರಮವಹಿಸಿ ಬೇರೆಡೆಗೆ ಶಾಲೆಯನ್ನು ಸ್ಥಳಾಂತರಿಸಿ ಮಕ್ಕಳಿಗೆ ಶಿಕ್ಷಣ ನೀಡಿತ್ತು.
- ಸರ್ಕಾರಿ ಆಹಾರ ಧಾನ್ಯಗಳ ವಿತರಣಾ ಕೇಂದ್ರದಲ್ಲಿ ನೀಡಬೇಕಿದ್ದ ಸೀಮೆ ಎಣ್ಣೆ ಅಕ್ರಮವಾಗಿ ಹೊಟೇಲ್ ಗಳಿಗೆ ಹೋಗುತ್ತಿರುವುದನ್ನು ಬೆನ್ನತ್ತಿ ಸುದ್ದಿಮಾಡಿದ್ದು, ಸುದ್ದಿ ನಂತರ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅಧಿಕಾರಿಗಳು ಸೀಮೆ ಎಣ್ಣೆ ಮಾರಾಟ ಮಾಡುವ ಟೆಂಡರ್ ದಾರರ ಟೆಂಡರ್ ರದ್ದು ಮಾಡಿ ಕ್ರಮವಹಿಸಿದ್ದರು.
- ಹಿರಿಯೂರಿನ ಹೂವಿನಹೊಳೆ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ತಡೆಗಟ್ಟಲು ಸುದ್ದಿ ಮಾಡಿದ್ದು, ಇದರ ಪರಿಣಾಮ ಅಧಿಕಾರಿಗಳು ಹಾಗು ಸಚಿವರು ಕ್ರಮ ಜರುಗಿಸಿದ್ದರು.
- ಚಿತ್ರದುರ್ಗದ ನಿರಾಶ್ರಿತರ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಈ ಬಗ್ಗೆ ಸುದ್ದಿ ಮಾಡಿದ್ದು, ಜಿಲ್ಲಾಧಿಕಾರಿಗಳು ಖುದ್ದು ಭೇಟಿ ಕೊಟ್ಟು ನಿರಾಶ್ರಿತರ ಕೇಂದ್ರದ ಅವ್ಯವಸ್ಥೆ ಮತ್ತು ಅವ್ಯವಹಾರ ಸರಿಪಡಿಸಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿ ಸುವ್ಯವಸ್ಥಿತ ವಾಗಿರುವಂತೆ ನೋಡಿಕೊಂಡಿದ್ದರು.
- ಶಾಲಾ ಬಾಲಕಿಯೊಬ್ಬಳು ತಾನು ಹುಟ್ಟಿದ ಗ್ರಾಮದಲ್ಲಿ ಶೌಚಾಲಯವಿಲ್ಲವೆಂದು ಉಪವಾಸ ಸತ್ಯಾಗ್ರಹ ಮಾಡಿದಾಗ, ಸುವರ್ಣ ನ್ಯೂಸ್ ನಲ್ಲಿ ಮೊದಲು ಸುದ್ದಿ ಮಾಡಿದಾಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಟ್ಟಿದ್ದರು.
- ಇದಲ್ಲದೇ ನೂರಾರು ಮಾನವೀಯತೆ ಮೌಲ್ಯಗಳುಳ್ಳ ಸುದ್ದಿಗಳನ್ನು ವರದಿ ಮಾಡಿದಂತ ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ ಆಗಿದ್ದಾರೆ.
ಇದೀಗ 2025ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಂತ ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ ಅವರಿಗೆ ಅವರ ಸ್ನೇಹಿತರು, ಕುಟುಂಬಸ್ಥರು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಡಿ.ಕುಮಾರಸ್ವಾಮಿಗೆ ಕೆಎನ್ಎನ್ ಸಂಸ್ಥೆಯಿಂದಲೂ ಹೃತ್ಪೂರ್ವಕ ಶುಭಾಶಗಳನ್ನು ತಿಳಿಸಲಾಗುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








