ಶಿವಮೊಗ್ಗ; ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ದೇವಸ್ಥಾನ ಮುಂಭಾಗದ ರಸ್ತೆ ಡಾಂಬಾರೀಕರಣ ಕಾಮಗಾರಿಗೆ ಚಾಲನೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನೆರವೇರಿಸಿದ್ದರು. ಆ ಬಳಿಕ ರಸ್ತೆ ಡಾಂಬಾರೀಕರಣವೂ ಮಾಡಲಾಗಿದೆ. ಇದೀಗ ನಾಳೆ ಜಾತ್ರಾ ಮಹೋತ್ಸವದ ಪೋಸ್ಟರ್, ಕ್ಯಾಲೆಂಡರ್ ಅವರನ್ನು ಬಿಡುಗಡೆ ಮಾಡಲಿದ್ದಾರೆ.
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನಾಳೆ ಬೆಳಗ್ಗೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆ 10.30ಕ್ಕೆ ಜಾತ್ರೆಯ ಪೋಸ್ಟರ್ ಹಾಗೂ ಕ್ಯಾಲೆಂಡರ್ ರಿಲೀಸ್ ಮಾಡಲಿದ್ದಾರೆ.
ಇದಾದ ಬಳಿಕ 11 ಗಂಟೆಯ ಸುಮಾರಿಗೆ ಸಾಗರದ ಜೋಸೆಫ್ ನಗರದ ಭಾರತ್ ಕೆಫೆ ಸರ್ಕಲ್ ನಿಂದ ಮಚಾದೋ ಆರ್ಟ್ಸ್ ವರೆಗೆ ರಸ್ತೆಯ ಮರು ಡಾಂಬಾರೀಕರಣ, ಜೋಸೆಫ್ ನಗರದ ತುಕಾರಾಮ್ ಶೇಟ್ ಬೀದಿಯ ರಸ್ತೆಯ ಮರು ಡಾಂಬಾರೀಕರಣದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು…
ರಾತ್ರಿ ಸಮಯದಲ್ಲಿ ಮಾತ್ರ ತೆರೆದಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಜೀವನದಲ್ಲಿನ ಕತ್ತಲು ಬೆಳಕಾಗುತ್ತೆ








