ಬೆಂಗಳೂರು: ಐಪಿಎಸ್ ಅಧಿಕಾರಿ ಅಕ್ಷಯ್ ಪೋಟೋ, ಹೆಸರನ್ನು ಬಳಸಿಕೊಂಡು ವಂಚಕರು ಹಣ ಕೇಳೋದಕ್ಕೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹೆಸರಿನಲ್ಲಿ ವಂಚನೆಗೆ ಯತ್ನ ನಡೆಸಲಾಗಿದೆ. ವಾಟ್ಸ್ ಆಪ್ ಪೋಟೋ, ಹೆಸರು ಬಳಸಿ ಹಣವನ್ನು ವಂಚಕರು ಕೇಳುತ್ತಿದ್ದಾರೆ ಎನ್ನಲಾಗಿದೆ.
ಬೇರೆ ನಂಬರ್ ನಿಂದ ವಾಟ್ಸ್ ಆಪ್ ಅಕೌಂಟ್ ರಚಿಸಿರುವಂತ ದುರುಳರು, ಡಿಸಿಪಿ ಅಕ್ಷಯ್ ಹೆಸರು ಹೇಳಿಕೊಂಡು ಹಣ ಪೀಕಲು ಯತ್ನಿಸಿದ್ದಾರೆ. ಹಣ ನೀಡುವಂತೆ ಐಪಿಎಸ್ ಅಧಿಕಾರಿ ಅಕ್ಷಯ್ ಸ್ನೇಹಿತರಿಗೆ ಮೆಸೇಜ್ ಕಳುಹಿಸಲಾಗಿದೆ.
ಈಗಾಗಲೇ ಡಿಸಿಪಿ ಅಕ್ಷಯ್ ಅವರ ನಾಲ್ಕೈದು ಸ್ನೇಹಿತರಿಗೆ ಹಣಕ್ಕಾಗಿ ಸಂದೇಶ ಕಳುಹಿಸಲಾಗಿದೆ. ಈ ವಿಷಯ ತಿಳಿದಂತ ಐಪಿಎಸ್ ಅಧಿಕಾರಿ ಅಕ್ಷಯ್ ಯಾರು ಹಣ ನೀಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
BREAKING: ‘ದಳಪತಿ ವಿಜಯ್’ಗೆ ಮದ್ರಾಸ್ ಹೈಕೋರ್ಟ್ ಶಾಕ್: ‘ಜನ ನಾಯಗನ್’ ಚಿತ್ರ ಬಿಡುಗಡೆಗೆ ಮತ್ತೆ ತಡೆ








