ಮದ್ರಾಸ್: ದಳಪತಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಅನುಮತಿ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಗೆ ನಿರ್ದೇಶನ ನೀಡಿದ್ದ ಏಕಸದಸ್ಯ ನ್ಯಾಯಾಧೀಶರ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆ ನೀಡಿದೆ.
ನಿರ್ಮಾಪಕರ ಮನವಿಯನ್ನು ಅಂಗೀಕರಿಸಿದ ಏಕಸದಸ್ಯ ನ್ಯಾಯಾಧೀಶ ಪಿ.ಟಿ. ಆಶಾ ಅವರು ಚಿತ್ರಕ್ಕೆ U/A 16 ಪ್ರಮಾಣಪತ್ರವನ್ನು ನೀಡುವಂತೆ CBFCಗೆ ಆದೇಶಿಸಿದ ಕೆಲವೇ ಗಂಟೆಗಳ ನಂತರ ತಡೆಯಾಜ್ಞೆ ನೀಡಲಾಗಿದೆ.
CBFC ಸಲ್ಲಿಸಿದ್ದ ತುರ್ತು ಮೇಲ್ಮನವಿಯ ಮೇರೆಗೆ ಮುಖ್ಯ ನ್ಯಾಯಾಧೀಶ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅರುಳ್ ಮುರುಗನ್ ಅವರ ಪೀಠವು ಏಕಸದಸ್ಯರ ಆದೇಶವನ್ನು ಅಂಗೀಕರಿಸಿತು. ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡದ ಕಾರಣ ತಡೆಯಾಜ್ಞೆ ನೀಡಲಾಗಿದೆ.








