ನವದೆಹಲಿ: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಶುಕ್ರವಾರ ಖಾಸಗಿ ಬಸ್ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಕುಪ್ವಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಹರಿಪುರ್ಧರ್ ಪ್ರದೇಶದ ಬಳಿ ಪರ್ವತದಿಂದ ಬಸ್ ಉರುಳಿಬಿದ್ದಿದ್ದು, ಅಪಘಾತದಲ್ಲಿ ಎಂಟು ಸಾವುಗಳು ಸಂಭವಿಸಿವೆ ಎಂದು ಸಿರ್ಮೌರ್ ಎಸ್ಪಿ ನಿಶ್ಚಿಂತ್ ಸಿಂಗ್ ನೇಗಿ ತಿಳಿಸಿದ್ದಾರೆ.
ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಮತ್ತು ಎಸ್ಪಿ ಕೂಡ ಮಾರ್ಗಮಧ್ಯದಲ್ಲಿದ್ದಾರೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಇನ್ಮುಂದೆ ಆಸ್ಪತ್ರೆ ಕಟ್ಟಡ, ಕ್ಲಿನಿಕ್ ಗಳಲ್ಲಿ ‘ಅಗ್ನಿಶಮನ ಉಪಕರಣ’ ಅಳವಡಿಕೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ








