ಹಾಸನ: ಯಗಚಿ ನಾಲೆಗಾಗಿ ಭೂಮಿ ನೀಡಿದ್ದಂತ ರೈತರಿಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದ್ದರೂ ಡಿಸಿ ಮಾತ್ರ ಡೋಂಟ್ ಕೇರ್ ಎನ್ನುವಂತಿದ್ದರು. ಇಂತಹ ಜಿಲ್ಲಾಧಿಕಾರಿಗಳಿಗೆ ಕೋರ್ಟ್ ಕಾರು ಜಪ್ತಿ ಮಾಡುವಂತೆ ಆದೇಶಿಸಿ ಶಾಕ್ ನೀಡಿದೆ.
ಯಗಚಿ ನಾಲೆಗಾಗಿ ಭೂಮಿಯನ್ನು ನಾಗಮ್ಮ, ಲಕ್ಷ್ಮೇಗೌಡ, ಜಗದೀಶ್ ಎಂಬುವರು ಕಳೆದುಕೊಂಡಿದ್ದರು. ಸರಿಯಾಗಿ ಪರಿಹಾರ ನೀಡಿಲ್ಲ ಎಂಬುದಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಹಾಸನದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಪರಿಹಾರಕ್ಕೂ ಆದೇಶಿಸಲಾಗಿತ್ತು.
ಭೂಮಿ ಕಳೆದುಕೊಂಡಿದ್ದಂತವರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದ್ದರೂ, ಪರಿಹಾರದ ಹಣವನ್ನು ನೀಡಲಾಗಿರಲಿಲ್ಲ. ಇಂದು ಹಾಸನ ಹಿರಿಯ ಸಿವಿಲ್ ಜಡ್ಜ್ ಈ ಪ್ರಕರಣದ ವಿಚಾರಣೆ ನಡೆಸಿ, ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡೋದಕ್ಕೆ ಆದೇಶಿಸಿದ್ದಾರೆ.
ಅಂದಹಾಗೇ ಗುಂಟೆಗೆ 40,000ದಂತೆ 10.5 ಗುಂಟೆಗೆ ಪರಿಹಾರ ನಿಗದಿ ಪಡಿಸಲಾಗಿತ್ತು. ಈ ಪರಿಹಾರ ಸರಿಯಾಗಿಲ್ಲ. ಸೂಕ್ತ ಪರಿಹಾರ ನಿಗದಿ ಪಡಿಸಿ, 2 ವರ್ಷದ ಹಿಂದೆ ಕೋರ್ಟ್ ಆದೇಶಿಸಿತ್ತು. ಆದರೇ ಪರಿಹಾರ ನೀಡದಿದ್ದಕ್ಕಾಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿಗೆ ಕೋರ್ಟ್ ಆದೇಶಿಸಿದೆ. ಹೀಗಾಗಿ ಹಾಸನ ಜಿಲ್ಲಾಧಿಕಾರಿ ಈಗ ಪೇಚಿಗೆ ಸಿಲುಕಿದ್ದಾರೆ.
Watch Video: ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಡೆಲಿವರಿ ಬಾಯ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ








