Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧುಮೇಹಿಗಳಿಗೆ ಗುಡ್ ನ್ಯೂಸ್ : ಜಸ್ಟ್ ಈ ರೀತಿ ಮಾಡಿದ್ರೆ 7 ದಿನಗಳಲ್ಲೇ ನಿಮ್ಮ `ಶುಗರ್ ಕಂಟ್ರೋಲ್’ ಆಗುತ್ತೆ.!

10/01/2026 11:57 AM

`ಮಟನ್ ಪ್ರಿಯರೇ’ ಗಮನಿಸಿ : `ಬೋಟಿ’ ಸೇವನೆಯಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು.!

10/01/2026 11:53 AM

ಗಮನಿಸಿ : ನೀವು `ಗೋಧಿ ರೊಟ್ಟಿ’ 21 ದಿನಗಳ ಕಾಲ ತಿನ್ನುವುದನ್ನು ಬಿಟ್ಟರೆ ದೇಹಕ್ಕೆ ಸಿಗಲಿದೆ ಈ ಪ್ರಯೋಜನಗಳು.!

10/01/2026 11:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆಯಲ್ಲಿ `ಮೆಕ್ಕೆಜೋಳ’ ಉತ್ಪನ್ನ ಖರೀದಿ, ಡಿಬಿಟಿ ಮೂಲಕ ಹಣ ಪಾವತಿ
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆಯಲ್ಲಿ `ಮೆಕ್ಕೆಜೋಳ’ ಉತ್ಪನ್ನ ಖರೀದಿ, ಡಿಬಿಟಿ ಮೂಲಕ ಹಣ ಪಾವತಿ

By kannadanewsnow5709/01/2026 7:25 AM

ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮೆಕ್ಕೆಜೋಳ ಉತ್ಪನ್ನ ಖರೀದಿ ಕುರಿತಂತೆ ಜಿಲ್ಲೆಯ ವಿವಿಧ ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯೆತ್ಯಾಸದ ಮೊತ್ತವನ್ನು ಡಿಬಿಟಿ ಮೂಲಕ ಪಾವತಿಸಲಾಗುವುದೆಂದು ಕೊಪ್ಪಳ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ:ಸಿಒ243/ಎಂಆರ್ಇ 2025/ಬೆಂಗಳೂರು, ದಿನಾಂಕ: 04/01/2026ರ ಆದೇಶದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ರೈತ ಬಾಂಧವರಿಗೆ ಈ ಮೂಲಕ ತಿಳಿಸುವುದೇನೆಂದರೆ, 2025-26ನೇ ಸಾಲಿನ ಮುಂಗಾರು ಹಂಗಾಮಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಮೆಕ್ಕೆಜೋಳವನ್ನು ಜಿಲ್ಲೆಯ ವಿವಿಧ ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯೆತ್ಯಾಸದ ಮೊತ್ತವನ್ನು ಡಿಬಿಟಿ ಮುಖಾಂತರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ಮಾರುಕಟ್ಟೆ ಮಧ್ಯ ಪ್ರವೇಶದ ದರ ಪ್ರತಿ ಕ್ವಿಂಟಲ್ಗೆ ಗರಿಷ್ಠ ರೂ. 2.150 ಗಳನ್ನು ನಿಗದಿಪಡಿಸಿದೆ. ಪ್ರತಿ ಎಕರಗೆ 12 ಕ್ವಿಂಟಲ್ನಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಲ್ಗೆ ಮಿತಿಗೊಳಿಸಿದೆ.

ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್ಗೆ ರೂ. 1900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ, ಪ್ರತಿ ಕ್ವಿಂಟಲ್ಗೆ ಗರಿಷ್ಠ ರೂ. 250 ರಂತೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್ಗೆ ರೂ. 1950 ರಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ರೂಪಾಯಿ ಪ್ರತಿ ಕ್ವಿಂಟಲ್ಗೆ ರೂ. 200 ರಂತೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್ಗೆ ರೂ. 2000 ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ರೂಪಾಯಿ ಪ್ರತಿ ಕ್ವಿಂಟಲ್ಗೆ ರೂ.150 ರಂತೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್ಗೆ ರೂ. 2100 ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ರೂಪಾಯಿ ಪ್ರತಿ ಕ್ವಿಂಟಲ್ಗೆ ರೂ. 50 ರಂತೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆಯು ಪ್ರತಿ ಕ್ವಿಂಟಲ್ಗೆ ರೂ. 2150 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವಾಪ್ತಿಗೆ ಒಳಪಡುವುದಿಲ್ಲ.

ಮೇಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರಗಳ ವಿವರ: ಗಂಗಾವತಿ ತಾಲ್ಲೂಕಿನ ನೊಂದಣಿ ಮತ್ತು ಖರೀದಿ ಕೇಂದ್ರ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗಂಗಾವತಿ ಕಾರ್ಯದರ್ಶಿಯವರ ಮೊ.ಸಂ: 9341978290, ಕೊಪ್ಪಳ ತಾಲ್ಲೂಕಿನ ನೊಂದಣಿ ಮತ್ತು ಖರೀದಿ ಕೇಂದ್ರ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೊಪ್ಪಳ ಕಾರ್ಯದರ್ಶಿಯವರ ಮೊ.ಸಂ: 9902224089, ಕುಷ್ಟಗಿ ತಾಲ್ಲೂಕಿನ ನೊಂದಣಿ ಮತ್ತು ಖರೀದಿ ಕೇಂದ್ರಗಳು; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಷ್ಟಗಿ ಕಾರ್ಯದರ್ಶಿಯವರ ಮೊ.ಸಂ: 9880886909 ಹಾಗೂ ಕುಷ್ಟಗಿ ಉಪ ಮಾರುಕಟ್ಟೆ ಸಮಿತಿ ಹನಮಸಾಗರ ಕಾರ್ಯದರ್ಶಿಯವರ ಮೊ.ಸಂ: 9880886909, ಕನಕಗಿರಿ ತಾಲ್ಲೂಕಿನ ನೊಂದಣಿ ಮತ್ತು ಖರೀದಿ ಕೇಂದ್ರ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕನಕಗಿರಿ ಕಾರ್ಯದರ್ಶಿಯವರ ಮೊ.ಸಂ: 9341978290, ಕುಕನೂರು ತಾಲ್ಲೂಕಿನ ನೊಂದಣಿ ಮತ್ತು ಖರೀದಿ ಕೇಂದ್ರ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲಬುರ್ಗಾ ಕೇಂದ್ರ ಕಛೇರಿ ಕುಕನೂರು ಕಾರ್ಯದರ್ಶಿಯವರ ಮೊ.ಸಂ: 9972054874 ಮತ್ತು ಕಾರಟಗಿ ತಾಲ್ಲೂಕಿನ ಮೇಕ್ಕೆಜೋಳ ನೊಂದಣಿ ಕೇಂದ್ರ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರಟಗಿ ಕಾರ್ಯದರ್ಶಿಯವರ ಮೊ.ಸಂ: 9060893320 ಆಗಿರುತ್ತದೆ.

ಈಗಾಗಲೆ ರಾಜ್ಯ ಸರ್ಕಾರದ ವತಿಯಿಂದ, ಎಥೆನಾಲ್ ಉತ್ಪಾದನೆಗಾಗಿ ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಘಟಕಗಳಿಗೆ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಅವಶ್ಯವಿರುವ ಮಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಸದರಿ ಯೋಜನೆಯು ಅನ್ವಯಿಸುವುದಿಲ್ಲ. ಸದರಿ ಯೋಜನೆಯ ಅನುಷ್ಠಾನ ಅವಧಿಯು ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ (UMP) ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ಒಂದು ತಿಂಗಳ ಅವಧಿಯವರಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಕೊಪ್ಪಳ ಜಿಲ್ಲೆಯ ಎಲ್ಲಾ ರೈತಬಾಂಧವರು ಮೇಲಿನ ಸ್ಥಗಳಲ್ಲಿ ಆಧಾರ ಕಾರ್ಡ ಫ್ರೂಟ್ಸ್ (FRUITS) ಗುರುತಿನ ಸಂಖ್ಯೆಯೊಂದಿಗೆ ಎನ್ಇಎಂಎಲ್ (NeML) ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಯುಎಂಪಿ ವೇದಿಕೆಯಲ್ಲಿ ಜಿಲ್ಲೆಯ ರೈತ ಬಾಂಧವರು ಮೆಕ್ಕೆಜೋಳ ಉತ್ಪನ್ನವನ್ನು ಮಾರಾಟ ಮಾಡುವಂತೆ ಕೊಪ್ಪಳ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Good news for farmers in the state: Purchase of maize at support price payment through DBT
Share. Facebook Twitter LinkedIn WhatsApp Email

Related Posts

ಮಧುಮೇಹಿಗಳಿಗೆ ಗುಡ್ ನ್ಯೂಸ್ : ಜಸ್ಟ್ ಈ ರೀತಿ ಮಾಡಿದ್ರೆ 7 ದಿನಗಳಲ್ಲೇ ನಿಮ್ಮ `ಶುಗರ್ ಕಂಟ್ರೋಲ್’ ಆಗುತ್ತೆ.!

10/01/2026 11:57 AM2 Mins Read

`ಮಟನ್ ಪ್ರಿಯರೇ’ ಗಮನಿಸಿ : `ಬೋಟಿ’ ಸೇವನೆಯಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು.!

10/01/2026 11:53 AM1 Min Read

ಗಮನಿಸಿ : ನೀವು `ಗೋಧಿ ರೊಟ್ಟಿ’ 21 ದಿನಗಳ ಕಾಲ ತಿನ್ನುವುದನ್ನು ಬಿಟ್ಟರೆ ದೇಹಕ್ಕೆ ಸಿಗಲಿದೆ ಈ ಪ್ರಯೋಜನಗಳು.!

10/01/2026 11:47 AM2 Mins Read
Recent News

ಮಧುಮೇಹಿಗಳಿಗೆ ಗುಡ್ ನ್ಯೂಸ್ : ಜಸ್ಟ್ ಈ ರೀತಿ ಮಾಡಿದ್ರೆ 7 ದಿನಗಳಲ್ಲೇ ನಿಮ್ಮ `ಶುಗರ್ ಕಂಟ್ರೋಲ್’ ಆಗುತ್ತೆ.!

10/01/2026 11:57 AM

`ಮಟನ್ ಪ್ರಿಯರೇ’ ಗಮನಿಸಿ : `ಬೋಟಿ’ ಸೇವನೆಯಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು.!

10/01/2026 11:53 AM

ಗಮನಿಸಿ : ನೀವು `ಗೋಧಿ ರೊಟ್ಟಿ’ 21 ದಿನಗಳ ಕಾಲ ತಿನ್ನುವುದನ್ನು ಬಿಟ್ಟರೆ ದೇಹಕ್ಕೆ ಸಿಗಲಿದೆ ಈ ಪ್ರಯೋಜನಗಳು.!

10/01/2026 11:47 AM

`ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : ಹೊಸ ಔಷಧದಿಂದ 2 ಗಂಟೆಗಳ ಚಿಕಿತ್ಸೆ ಈಗ ಕೇವಲ 2 ನಿಮಿಷದಲ್ಲಿ.! 

10/01/2026 11:40 AM
State News
KARNATAKA

ಮಧುಮೇಹಿಗಳಿಗೆ ಗುಡ್ ನ್ಯೂಸ್ : ಜಸ್ಟ್ ಈ ರೀತಿ ಮಾಡಿದ್ರೆ 7 ದಿನಗಳಲ್ಲೇ ನಿಮ್ಮ `ಶುಗರ್ ಕಂಟ್ರೋಲ್’ ಆಗುತ್ತೆ.!

By kannadanewsnow5710/01/2026 11:57 AM KARNATAKA 2 Mins Read

ಮಧುಮೇಹವು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬಾರದ ಸ್ಥಿತಿಯಾಗಿದೆ. ಇದನ್ನು ತಕ್ಷಣ ನಿರ್ವಹಿಸದಿದ್ದರೆ, ಅದು ಮೂತ್ರಪಿಂಡಗಳು, ದೃಷ್ಟಿ ಮತ್ತು…

`ಮಟನ್ ಪ್ರಿಯರೇ’ ಗಮನಿಸಿ : `ಬೋಟಿ’ ಸೇವನೆಯಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು.!

10/01/2026 11:53 AM

ಗಮನಿಸಿ : ನೀವು `ಗೋಧಿ ರೊಟ್ಟಿ’ 21 ದಿನಗಳ ಕಾಲ ತಿನ್ನುವುದನ್ನು ಬಿಟ್ಟರೆ ದೇಹಕ್ಕೆ ಸಿಗಲಿದೆ ಈ ಪ್ರಯೋಜನಗಳು.!

10/01/2026 11:47 AM
Village school success story Hangaravalli Government Hangaravalli Government Higher Primary School selected for national level in Delhiselected for national level in Delhi

ಹಳ್ಳಿ ಶಾಲೆ ಯಶೋಗಾಥೆ ದೆಹಲಿಗೆ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

10/01/2026 11:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.