ವಾಷಿಂಗ್ಟನ್: ಅಮೆರಿಕ ಸೇನೆ ಬುಧವಾರ ವಶಪಡಿಸಿಕೊಂಡ ರಷ್ಯಾದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯ ಪ್ರಜೆಗಳು ಸೇರಿದಂತೆ 28 ಜನರಿದ್ದರು ಎಂದು ರಷ್ಯಾ ಟುಡೇ ವರದಿ ಮಾಡಿದೆ.
ರಷ್ಯಾದ ಧ್ವಜದ ತೈಲ ಟ್ಯಾಂಕರ್ ‘ಮರಿನೆರಾ’ ಅನ್ನು ಕೆರಿಬಿಯನ್ ಸಮುದ್ರದಿಂದ ಯುಎಸ್ ಪಡೆಗಳು ಪತ್ತೆಹಚ್ಚಿದ ನಂತರ ಉತ್ತರ ಅಟ್ಲಾಂಟಿಕ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯವನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ವೆನಿಜುವೆಲಾದೊಂದಿಗೆ ಸಂಪರ್ಕ ಹೊಂದಿರುವ ಕಾರಣ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
ಆರ್ ಟಿ ವರದಿಯ ಪ್ರಕಾರ, ಹಡಗನ್ನು ಖಾಸಗಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದಿದ್ದರು ಮತ್ತು ಬೆಲ್ಲಾ 1 ಎಂದು ಹೆಸರಿಸಲಾಗಿತ್ತು. ಇದು ಗಯಾನಾದ ಧ್ವಜದಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಜಾರ್ಜಿಯಾದ ಆರು ನಾಗರಿಕರು, ಉಕ್ರೇನ್ನ 17 ಮಂದಿ ಪ್ರಜೆಗಳು, ಭಾರತದ ಮೂವರು ಮತ್ತು ಇಬ್ಬರು ರಷ್ಯನ್ನರು ಸೇರಿದಂತೆ 28 ಜನರಿದ್ದರು.
ನಿರ್ಬಂಧಿತ ಟ್ಯಾಂಕರ್ ಗಳ ಯುಎಸ್ ಕಡಲ “ದಿಗ್ಬಂಧನ” ಮೂಲಕ ಟ್ಯಾಂಕರ್ ಜಾರಿಬಿದ್ದ ನಂತರ ಮತ್ತು ಅದನ್ನು ಹತ್ತಲು ಯುಎಸ್ ಕೋಸ್ಟ್ ಗಾರ್ಡ್ ಪ್ರಯತ್ನಗಳನ್ನು ತಿರಸ್ಕರಿಸಿದ ನಂತರ ವಶಪಡಿಸಿಕೊಳ್ಳಲಾಗಿದೆ. ಕೋಸ್ಟ್ ಗಾರ್ಡ್ ಮತ್ತು ಯುಎಸ್ ಮಿಲಿಟರಿ ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ರಾಯಿಟರ್ಸ್ ವರದಿಯಲ್ಲಿ ಉಲ್ಲೇಖಿಸಿದ ಇಬ್ಬರು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಯಿಟರ್ಸ್ ಪ್ರಕಾರ, ಯುಎಸ್ ಮಿಲಿಟರಿ ರಷ್ಯಾದ ಧ್ವಜದ ಹಡಗನ್ನು ವಶಪಡಿಸಿಕೊಂಡಿರುವುದು ಇತ್ತೀಚಿನಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದಿದೆ.








