ಬೆಂಗಳೂರು : 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1) ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಪತ್ರದಲ್ಲಿ ಪ್ರತಿ ವರ್ಷದಂತೆ ವಿದ್ಯಾವಿಕಾಸ ಯೋಜನೆಯಡಿ 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿನ 1ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಲಿರುವ ಸುಮಾರು 38.22 ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ಸರಬರಾಜುಗೊಳಿಸಲು ಉದ್ದೇಶಿಸಿದೆ. ಮೊದಲನೇ ಜೊತೆ ಸಮವಸ್ತ್ರ ಸರಬರಾಜಿಗೆ ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ 1 ರಿಂದ 7ನೇ ತರಗತಿ ಗಂಡು ಮಕ್ಕಳು ಹಾಗೂ 1 ರಿಂದ 5ನೇ ತರಗತಿಯ ಹೆಣ್ಣು ಮಕ್ಕಳಿಗೆ ಒಟ್ಟು 19.84 ಲಕ್ಷ ಮೀಟರ್ ಸಮವಸ್ತ್ರ, ಬಟ್ಟೆ ಸರಬರಾಜಿಗೆ ರೂ. 14.68 ಕೋಟಿ ಮತ್ತು ಇ-ಟೆಂಡರ್ ಮೂಲಕ ಧಾರವಾಡ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ 8 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ ಚೂಡಿದಾರ್ ಒಳಗೊಂಡಂತೆ ಒಟ್ಟು 48.40 ಲಕ್ಷ ಮೀಟರ್ ಬಟ್ಟೆಯನ್ನು ರೂ.64.63 ಕೋಟಿ ಅನುದಾನದ ಅವಶ್ಯಕತೆ ಇರುತ್ತದೆ..
2026-27ನೇ ಸಾಲಿಗೆ ಎರಡನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧ PAB ಯಿಂದ 2026-27 ಸಾಲಿಗೆ ಮಂಜೂರಾಗುವ ಅನುದಾನದಿಂದ ಅಗತ್ಯವಿರುವ ಒಟ್ಟು 68.24 ಲಕ್ಷ ಮೀಟರ್ ಸಮವಸ್ತ್ರ ಬಟ್ಟೆಯನ್ನು ಇ-ಟೆಂಡರ್ ಮೂಲಕ ಅಂದಾಜು ಶೇ.5 ರಷ್ಟು ಹೆಚ್ಚುವರಿ ಮೊತ್ತ ಒಳಗೊಂಡಂತೆ ರೂ.80.20 ಕೋಟಿ ಅನುದಾನದ ಅವಶ್ಯಕತೆ ಇರುತ್ತದೆ.
2026-27ನೇ ಸಾಲಿಗೆ 1 ರಿಂದ 10ನೇ ತರಗತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರಗಳನ್ನು ಒಟ್ಟು ಅಂದಾಜು ರೂ.83.00 ಕೋಟಿ (ಮೊದಲನೇ ಜೊತೆ) ಹಾಗೂ ರೂ.80.20 ಕೋಟಿ (ಎರಡನೇ ಜೊತೆ) ಒಟ್ಟು ರೂ.163.20 ಕೋಟಿ ಅನುದಾನದಲ್ಲಿ (ಸಮಗ್ರ ಶಿಕ್ಷಣ ಕರ್ನಾಟಕದ ಯೋಜನೆಯಲ್ಲಿ ರೂ.80.20 ಕೋಟಿ ಮಂಜೂರಾಗುವ ಅನುದಾನ ಸೇರಿದಂತೆ) ಸರಬರಾಜು ಮಾಡಲು ಅನುಮೋದನೆ ಕೋರಿದ್ದಾರೆ.









