ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಇ-ಖಾತಾ, ಬಿ-ಖಾತಾ ಸೃಜಿಸುವುದು ಸರ್ಕಾರ ಕಡ್ಡಾಯಗೊಳಿಸಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಮಾಲೀಕರುಗಳು ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ, ಆಟೋ ಪ್ರಚಾರ, ನಗರದ ಪ್ರಮುಖ ಸ್ಥಳಗಳಲ್ಲಿ ಇ-ಖಾತಾ, ಬಿ-ಖಾತಾ ಪಡೆಯುವ ಬಗ್ಗೆ ಮತ್ತು ಇ-ಖಾತಾ, ಬಿ-ಖಾತಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ ಇರುವ ಪ್ಲೇಕ್ಸ್‍ಗಳ ಅಳವಡಿಕೆ ಮತ್ತು ಸ್ಥಳೀಯ ಚಾನೆಲ್‍ಗಳಲ್ಲಿ ಸುದ್ದಿಯಾಗಿ ಪ್ರಚಾರ ಹಾಗೂ ನಗರಸಭೆ ಸಿಬ್ಬಂದಿಗಳು ಪ್ರತಿ ವಾರ್ಡ್, ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ ಇ-ಖಾತಾ ಮಾಡಿಸಿಕೊಳ್ಳದೆ ಇರುವವರಿಗೆ ದಾಖಲೆ ನೀಡಿ ಇ-ಖಾತಾ ಪಡೆಯಲು ತಿಳಿಸಿ ದಾಖಲೆ ನೀಡಿದವರಿಗೆ ಇ-ಖಾತಾ ಸೃಜಿಸಿ ನೀಡುವ ಕೆಲಸವನ್ನು ನಗರಸಭೆಯಿಂದ ಕೈಗೊಂಡಿದ್ದಾರೆ.
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಲ್ಲಿ ಇನ್ನೂ ಕೂಡ 3036 ಆಸ್ತಿಯ ಮಾಲೀಕರುಗಳು ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಆಸ್ತಿತೆರಿಗೆ ಪಾವತಿಯ ವಿವರದೊಂದಿಗೆ ನಗರಸಭೆಗೆ ಸಲ್ಲಿಸದೆ ಇರುವುದರಿಂದ ಶೇ.100 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗದೇ ಇರುತ್ತದೆ.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತಿನ ಮಾಲೀಕರುಗಳು, ಇ-ಖಾತಾ ಪಡೆಯದೆ ಇರುವವರು ಇ-ಖಾತಾ, ಬಿ-ಖಾತಾ ಪಡೆಯಲು ಸರ್ಕಾರ ಹೊಸದಾಗಿ ತಂತ್ರಾಂಶ ಚಾಲನೆಗೆ ತಂದಿದೆ. ಅದರಂತೆ ಇ-ಖಾತಾ ಪಡೆಯದ ಸ್ವತ್ತಿನ ಮಾಲೀಕರು eaasthi.karnataka.gov.in ವೆಬ್‍ಸೈಟ್‍ಗೆ ಹೋಗಿ ಸಿಟಿಜನ್ ಲಾಗಿನ್‍ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಕಿ, ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಮುಂದುವರಿಸಿದಲ್ಲಿ ನಗರಸಭೆಯಿಂದ ನಿಯಮನುಸಾರ ದಾಖಲೆ ಅನುಸಾರ ಇ-ಖಾತಾ, ಬಿ-ಖಾತಾ ಸೃಜಿಸಿ ನೀಡಲಾಗುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ಕ್ರಮವನ್ನು ತಾವೆ ಕೈಗೊಳ್ಳಬಹುದಾಗಿದೆ.
ಇಲ್ಲದಿದ್ದಲ್ಲಿ ಇ-ಖಾತಾ, ಬಿ-ಖಾತಾಕ್ಕೆ ಅವಶ್ಯವಿರುವ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಬೇಕು. ನಗರಸಭೆ ದಾಖಲೆ ಅಪ್‍ಲೋಡ್ ಮಾಡಿ ನಿಮ್ಮಿಂದ ಒಟಿಪಿ ಪಡೆದು ಮುಂದಿನ ಕ್ರಮವಹಿಸಿ ಇ-ಖಾತಾ ಸೃಜಿಸಿ ಕೊಡಲಾಗುವುದು.
ಸ್ವತ್ತಿನ ದಾಖಲೆ ತಂತ್ರಾಂಶದ ಮೂಲಕ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವಿಕೆ, ಆಸ್ತಿ ತೆರಿಗೆ ಪಾವತಿಗೆ ಕಚೇರಿಗೆ ಬಾರದೇ ತಾವೇ ಲೆಕ್ಕಚಾರ ಮಾಡಿ ಪಾವತಿಸುವ ಸರಳ ವಿಧಾನ ಮಾಡಲು ಎಲ್ಲಾ ಆಸ್ತಿಗಳ ಇ-ಖಾತಾ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಇ-ಖಾತಾ ಪಡೆಯದೇ ಇರುವವರು ನಗರಸಭೆಯಿಮದ ಇ-ಖಾತಾಕ್ಕೆ ದಾಖಲೆ ಸಲ್ಲಿಸಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಕೋರಿದ್ದಾರೆ.








