ಬೆಂಗಳೂರು : ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಸಂದೇಶ ಹಾಕಿದ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಮೆಂಟ್ಸ್ ಹಾಕಿದ್ದ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ನಾಗರಾಜ ಗುಳ್ಳಪ್ಪ ತಳವಾರ ಹಾಗೂ ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಇಲ್ಲಿಯವರೆಗೆ 4 ಆರೋಪಿಗಳು ಬಂಧಿಸಿದಂತಾಗಿದೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಾತನಾಡಿದ ಸುದೀಪ್, ಯುದ್ಧಕ್ಕೆ ಸಿದ್ಧವಾಗಿದ್ದೇವೆ ಅಂತ ಗುಡುಗಿದ್ದರು. ಐದು ತಿಂಗಳ ಹಿಂದೆ ‘ಮಾರ್ಕ್’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಅಂತೆಯೇ ನಾವು ಡಿ. 25ರಂದು ಬರುತ್ತಿದ್ದೇವೆ. ಈ ನಡುವೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ರೆಡಿಯಾಗಿದ್ದೇವೆ. ಡಿಸೆಂಬರ್ 25ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಆದರೆ ಹೊರಗಡೆ ಯುದ್ಧಕ್ಕೆ ಒಂದು ಪಡೆ ರೆಡಿಯಾಗುತ್ತಿದ್ದಾರೆ. ನಾವೂ ಸಿದ್ಧರಿದ್ದೇವೆ ಎಂದು ಸುದೀಪ್ ಹೇಳಿದ್ದರು. ನಂತರ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿತ್ತು.
ಬಳಿಕ ವಿಜಯಲಕ್ಷ್ಮಿಕೂಡ ಹೆಸರನ್ನು ಉಲ್ಲೇಖಸದೇ ಸುದೀಪ್ ಅವರಿಗೆ ಅವಾಜ್ ಹಾಕಿದ್ದಾರೆ ಆಂತ ಸುದೀಪ್ ಅಭಿಮಾನಿಗಳು ಗುಟುರು ಹಾಕುತ್ತ ಇದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿಸಾಂಸಾರಿಕ ಜೀವನ ಕೆಟ್ಟಾಗಿ ನೆರವಿಗೆ ಬಂದದ್ದು ಸುದೀಪ್ ಅಂತ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.








