ಶಿವಮೊಗ್ಗ: ಕಳೆದ ಕೆಲ ವರ್ಷಗಳಿಂದ ಸಾಗರದ ಡಿಎಫ್ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಮೋಹನ್ ಕುಮಾರ್ ಅವರನ್ನು ಸಿಎಫ್ ಆಗಿ ಪ್ರಮೋಷನ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಗರದ ನೂತನ ಡಿಎಫ್ಓ ಆಗಿ ಮೊಹಮ್ಮದ್ ಫಯಾಜುದ್ದೀನ್ ನೇಮಕ ಮಾಡಲಾಗಿದೆ.
2012ನೇ ಸಾಲಿನ ಕರ್ನಾಟಕ ಕೇಡರ್ ಐಎಫ್ಎಸ್ ಅಧಿಕಾರಿ ಮೋಹನ್ ಕುಮಾರ್. ಡಿ ಅವರಿಗೆ ಸರ್ಕಾರ ಪದೋನ್ನತಿ ನೀಡಿದೆ. ದಿನಾಂಕ 01-01-2026ರಿಂದ ಜಾರಿಗೆ ಬರುವಂತೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ( Conservator of Forests-CF) ಆಗಿ ಪ್ರಮೋಷನ್ ನೀಡಲಾಗಿದೆ.
ಸಾಗರದ ಡಿಎಫ್ಓ ಆಗಿದ್ದಂತ ಮೋಹನ್ ಕುಮಾರ್.ಡಿ ಅವರನ್ನು ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಸಾಗರದ ಡಿಎಫ್ಓ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ.
ಇನ್ನೂ ಹುಣಸೂರು ವಿಭಾಗದಲ್ಲಿ ಎಸ್ ಎಫ್ ಎಸ್ ಆಗಿದ್ದಂತ ಮೊಹಮ್ಮದ್ ಫಯಾಜುದ್ದೀನ್ ಅವರನ್ನು ಸಾಗರದ ಡಿಎಫ್ಓ ಆಗಿ ನೇಮಕ ಮಾಡಲಾಗಿದೆ. ಅವರು ಸಾಗರದ ನೂತನ ಡಿಎಫ್ಓ ಆಗಿಯೂ ಅಧಿಕಾರಿ ವಹಿಸಿಕೊಂಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…










