ಕಠ್ಮಂಡುವಿನಿಂದ ಭದ್ರಾಪುರಕ್ಕೆ ತೆರಳುತ್ತಿದ್ದ ಬುದ್ಧ ಏರ್ ವಿಮಾನ ಸಂಖ್ಯೆ 901 ಶುಕ್ರವಾರ ತಡರಾತ್ರಿ ನೇಪಾಳದ ಝಾಪಾ ಜಿಲ್ಲೆಯ ಭದ್ರಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಿಂದ ಜಾರಿ ಬಿದ್ದಿದೆ.
ವಿಮಾನದಲ್ಲಿ 51 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಗಾಯಗಳು ಸಂಭವಿಸಿಲ್ಲ.
ಭೂಸ್ಪರ್ಶದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಕಠ್ಮಂಡುವಿನಿಂದ 51 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯೊಂದಿಗೆ ಝಾಪಾ ಜಿಲ್ಲೆಯ ಭದ್ರಾಪುರ ವಿಮಾನ ನಿಲ್ದಾಣಕ್ಕೆ ಹೊರಟ ಬುದ್ಧ ಏರ್ ವಿಮಾನ ಭದ್ರಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯ ವೇಳೆ ಅಪಘಾತಕ್ಕೀಡಾಗಿದೆ. ನೇಪಾಳ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ವ್ಯಕ್ತಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ” ಎಂದು ನೇಪಾಳ ಪೊಲೀಸರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇಳಿಯುವಾಗ ವಿಮಾನವು ರನ್ ವೇಯಿಂದ ಹೊರಬಂದಿದೆ ಎಂದು ಬುದ್ಧ ಏರ್ ತಿಳಿಸಿದೆ.
ಕಠ್ಮಂಡುವಿನಿಂದ ಭದ್ರಾಪುರಕ್ಕೆ ತೆರಳುತ್ತಿದ್ದ ವಿಮಾನ 901 ಭದ್ರಪುರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್ ವೇಯಿಂದ ಉರುಳಿ ಬಿದ್ದಿದೆ. ವಿಮಾನದಲ್ಲಿ 51 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ [4 ವ್ಯಕ್ತಿಗಳು] ಸುರಕ್ಷಿತವಾಗಿದ್ದಾರೆ” ಎಂದು ವಿಮಾನಯಾನ ಸಂಸ್ಥೆ ಎಕ್ಸ್ ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.








