ಶಿವಮೊಗ್ಗ: ಬಹುತೇಕರು ಅಂಡ್ರಾಯ್ಡ್ ಸ್ಮಾರ್ಟ್ ಪೋನ್ ಕಳೆದು ಹೋದ್ರೆ ಮುಗೀತು. ಸಿಗೋದೇ ಡೌಟ್ ಎಂಬ ನಿರ್ಧಾರಕ್ಕೆ ಬಂದಿರುತ್ತೀರಿ. ಆದರೇ ಅದು ತಪ್ಪು. ನಿಮ್ಮ ಮೊಬೈಲ್ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿದ್ರೆ ಸಿಗೋದು ಗ್ಯಾರಂಟಿ ಎನ್ನುವುದಕ್ಕೆ ಸಾಕ್ಷಿಯಾಗಿ ಮುಂದೆ ಸುದ್ದಿ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರದ ಉಳವಿ ಬಳಿಯ ಕಾನಹಳ್ಳಿಯ ಆಕಾಶ್ ಎಂಬಾತ ಸಾಗರದ ಐಟಿಐ ಕಾಲೇಜು ಬಳಿಯಲ್ಲಿ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಕೂಡಲೇ ಸಾಗರ ಗ್ರಾಮಾಂತರ ಠಾಣೆಗೆ ತೆರಳಿ, ದೂರು ನೀಡಿದ್ದರು. ಇದೇ ಮಾದರಿಯಲ್ಲೇ ಭರತ್ ಎಂಬಾತ ತ್ಯಾಗರ್ತಿ ಕ್ರಾಸ್ ಹತ್ತಿರ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಅವರು ಕೂಡ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಇನ್ನೂ ಪರಶುರಾಮ್ ಎಂಬುವರು ತಾಳಗುಪ್ಪ ಸಂತೆಯಲ್ಲಿ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಅವರು ಸಹ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಮೊಬೈಲ್ ಕಳೆದುಕೊಂಡಿದ್ದವರ ಮಾಹಿತಿಯನ್ನು ಆಧರಿಸಿ, ಜೊತೆಗೆ ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದ Central Equipment Identity Register-CEIR ವೆಬ್ ಸೈಟ್ ನಲ್ಲಿ ದೂರು ದಾಖಲಿಸಲು ನೆರವಾಗಿದ್ದರು.
ಮೊಬೈಲ್ ಕಳೆದುಕೊಂಡಿದ್ದವರು CEIR ಜಾಲತಾಣದಲ್ಲಿ ದಾಖಲಿಸಿದ್ದಂತ ದೂರು, ಸಾಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಅವರ ದೂರಿನ ಬಗ್ಗೆ ನಿಗಾ ವಹಿಸಿದ್ದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು, ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
CEIR ನಲ್ಲಿ ದಾಖಲಾದ ದೂರು ಆಧರಿಸಿ ಮೊಬೈಲ್ ಪತ್ತೆ ಹೇಗೆ?
https://www.ceir.gov.in/ ಈ ಜಾಲತಾಣದಲ್ಲಿ ದಾಖಲಾಗಿದ್ದಂತ ದೂರಿನಲ್ಲಿ ಮೊಬೈಲ್ ಕಳೆದುಕೊಂಡವರು ತಮ್ಮ ಮೊಬೈಲ್ ಐಎಂಇ ನಂಬರ್ ನಮೂದಿಸಬೇಕಾಗುತ್ತದೆ. ಆ ಬಳಿಕ ಅದನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿದೆ. ಹೀಗೆ ಬ್ಲಾಕ್ ಮಾಡಿದಂ ಮೊಬೈಲ್ ನಿಂದ ಕರೆ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಒಂದು ವೇಳೆ ಹಾಲಿ ಬಳಕೆಯ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಕಾರ್ಡ್ ಹಾಕಿ ಮೊಬೈಲ್ ಬಳಕೆ ಮಾಡೋದಕ್ಕೆ ಹೋದ್ರೆ, ಅದಕ್ಕೆ ಹಾಕಿದಂತ ಸಿಮ್ ಕಾರ್ಡ್ ನಂಬರ್ ಅನ್ನು ಮೊಬೈಲ್ ಕಳೆದುಕೊಂಡಿದ್ದವರು ನೀಡಿದ್ದಂತ ಸಂಖ್ಯೆಗೆ ಎಸ್ಎಂಎಸ್ ಮೂಲಕ ರವಾನಿಸಲಾಗುತ್ತದೆ.
ಈ ರೀತಿಯಾಗಿ ಬರುವಂತ ಸಂದೇಶವು ಪೊಲೀಸರಿಗೂ ಹೋಗುತ್ತದೆ. ಆ ಸಂದೇಶದ ಅನುಸಾರ, ಮೊಬೈಲ್ ಸಂಖ್ಯೆ ಬಳಕೆದಾರರ ವಿಳಾಸ, ಲೊಕೇಶನ್ ಅನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಆ ಬಳಿಕ ಕಳೆದು ಹೋಗಿದ್ದ, ಕದ್ದಿದ್ದಂತ ಮೊಬೈಲ್ ಬಳಕೆದಾರರನ್ನು ಪತ್ತೆ ಹಚ್ಚಿ, ಅವರಿಂದ ಮೊಬೈಲ್ ಜಪ್ತಿ ಮಾಡುತ್ತಾರೆ. ಆನಂತ್ರ ಮೂಲ ಮಾಲೀಕರಿಗೆ ಮೊಬೈಲ್ ಹಿಂದಿರುಗಿಸೋ ಕೆಲಸ ಮಾಡಲಿದ್ದಾರೆ.
ಮೂರು ಮೊಬೈಲ್ ಕಳೆದ ಕೇಸ್ ಕ್ಲಿಯರ್ ಮಾಡಿದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು
ತಮ್ಮ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದಂತ ಮೂರು ಮೊಬೈಲ್ ಕಳೆದು ಹೋದ ಕೇಸನ್ನು ಗಂಭೀರವಾಗಿ ಪರಿಗಣಿಸಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ನಾಯ್ಕ್ ಅವರು, ತಂಡವನ್ನು ರಚಿಸಿ ಕಾರ್ಯಾಚರಣೆಗೆ ಇಳಿಯೋದಕ್ಕೆ ಸೂಚಿಸುತ್ತಾರೆ. ಪಿಐ ಮಹಾಬಲೇಶ್ವರ ನಾಯ್ಕ್ ಸೂಚನೆಯಂತೆ ಪೊಲೀಸ್ ಸಿಬ್ಬಂದಿಗಳಾದಂತ ಫೈರಜ್ ಅಹ್ಮದ್, ನಂದೀಶ್, ಶ್ರೀಧರ್, ಪ್ರಮೋದ್ ಕುಮಾರ್ ಜೊತೆಗೂಡಿ CEIR ನಲ್ಲಿ ದಾಖಲಾಗಿದ್ದಂತ ಮಾಹಿತಿ ಆಧರಿಸಿ, ಮೊಬೈಲ್ ಬಳಕೆಯ ಮೇಲೆ ಹದ್ದಿನ ಕಣ್ಣಿಡುತ್ತಾರೆ.
ಅದೊಂದು ದಿನ ಕಳೆದು ಹೋಗಿದ್ದಂತ ಮೊಬೈಲ್ ನಲ್ಲಿ ಹೊಸ ಸಿಮ್ ಕಾರ್ಡ್ ಹಾಕಿ, ಬಳಕೆ ಮಾಡೋದಕ್ಕೆ ಪ್ರಯತ್ನಿಸಿದ ಬಗ್ಗೆ ಸಂದೇಶ ಬರುತ್ತದೆ. ಕೂಡಲೇ ಅಲರ್ಟ್ ಆದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರ ತಂಡ, ಅದರ ವಿಳಾಸ ಪತ್ತೆ ಮಾಡುತ್ತಾರೆ. ಬಳಸುತ್ತಿದ್ದಂತವರಿಗೆ ಕಳೆದು ಹೋದ ಮೊಬೈಲ್ ಬಳಕೆ ಮಾಡಿದ್ರೆ ಹೇಗೆ ಸಿಕ್ಕಿ ಬೀಳುತ್ತೀರಿ. ಹೀಗೆ ಸಿಕ್ಕ ಮೊಬೈಲ್ ಮರಳಿ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಖಡಕ್ ಎಚ್ಚರಿಸಿದ್ದಾರೆ. ಆ ನಂತ್ರ ಅವರಿಂದ ಮೊಬೈಲ್ ಜಪ್ತಿ ಮಾಡಿದ್ದಾರೆ.
ಅಂತಿಮವಾಗಿ ಮೊಬೈಲ್ ಕಳೆದುಕೊಂಡಿದ್ದಂತ ಆಕಾಶ್, ಭರತ್ ಹಾಗೂ ಪರಶುರಾಮ್ ಎಂಬುವರಿಗೆ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆ ಹಚ್ಚಿದ ಮೊಬೈಲ್ ಮರಳಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯ ಪೊಲೀಸರ ಕಾರ್ಯಕ್ಕೆ ಸಾಗರ ಡಿವೈಎಸ್ಪಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಸೋ ಆಂಡ್ರಾಯ್ಡ್ ಮೊಬೈಲ್ ಕಳೆದು ಹೋದ್ರೆ ಸಿಗೋದಿಲ್ಲ ಎನ್ನುವಂತ ಅನುಮಾನ ಬೇಡ. ಕೇಂದ್ರ ಸರ್ಕಾರದ https://www.ceir.gov.in/ ವೆಬ್ ಸೈಟ್ ನಲ್ಲಿ ತಪ್ಪದೇ ನಿಮ್ಮ ದೂರು ದಾಖಲಿಸಿ. ಆಗ ಕಳೆದು ಹೋದ ಮೊಬೈಲ್ ಸಿಕ್ಕವರು ಬಳಕೆ ಮಾಡೋದಕ್ಕೆ ಹೋದ್ರೆ ಪೊಲೀಸರಿಗೆ ಸಿಕ್ಕಿ ಬಿಳೋದು ಗ್ಯಾರಂಟಿ. ಮೂಲ ಮಾಲೀಕರಾದಂತ ನಿಮಗೆ ನಿಮ್ಮ ಮೊಬೈಲ್ ಮರಳಿ ಸಿಗೋದು ಫಿಕ್ಸ್.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…








