ಶಿವಮೊಗ್ಗ; ಜನವರಿ 3 ಮತ್ತು 4, 2026 ರಂದು ನಡೆಯಲಿರುವ ರಜತ ಸಾಗರೋತ್ಸವ -2026 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ 25 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನಾಳೆ, ನಾಡಿದ್ದು ಆಯೋಜಿಸಿರುವಂತ ಕಾರ್ಯಕ್ರಮಕ್ಕೆ ಸಾಗರದ ಜನತೆ ಆಗಮಿಸಿ ಯಶಸ್ವಿಗೊಳಿಸುವಂತೆ ಸಾಗರಸುತ್ತ ಪತ್ರಿಕೆಯ ಸಂಪಾದಕ ಮತ್ತು ಸಾಗರೋತ್ಸವ ಸಮಿತಿಯ ಅಧ್ಯಕ್ಷ ಜಿ. ನಾಗೇಶ್ ವಿನಂತಿಸಿಕೊಂಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಸಹೃದಯ ಬಳಗ ಮತ್ತು ತಾಲೂಕು ಇತಿಹಾಸ ವೇದಿಕೆ ವತಿಯಿಂದ ದಿನಾಂಕ 03-01-2026ರ ನಾಳೆ ರಜತ ಸಾಗರೋತ್ಸವ-2026 ಕಾರ್ಯಕ್ರಮವನ್ನು ಸಾಗರದ ಗಾಂಧಿ ಮೈದಾನದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಆನಂದಪುರಂನ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಹಿಸಲಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.
ಅಂದು ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿಯನ್ನು ರಾಜಕೀಯ ಕ್ಷೇತ್ರದ ಸಾಧನೆಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ.ವಿದ್ವಾನ್ ಬಿಎಲ್ ನಾಗರಾಜ್, ಗುರುಗಳಾದ ವೇಣುಗೋಪಾಲ ಗುರೂಜಿ, ನಿರ್ದೇಶಕ ಡಾ.ಬ.ಲ ಸುರೇಶ್, ಕೃಷಿಕ ಡಾ.ಮಂಜುನಾಥ ಜಿಎಂ, ಇತಿಹಾಸ ತಜ್ಞ ಡಾ.ಅಮರೇಶ್ ಯತಗಲ್, ಜಾನಪದ ಕಲಾವಿದೆ ಪುಷ್ಪ ಬಿ.ಕೆ, ಸಹಕಾರಿ ಕ್ಷೇತ್ರದ ಸಾಧನೆಗಾಗಿ ಪ್ರಸನ್ನ ಕುಮಾರ್ ಹಾಗೂ ನೃತ್ಯ ಕಲಾವಿದ ವಿದ್ವಾನ್ ಗೋಪಾಲ್.ಎಂ ಅವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಹೊಸಗುಂದ ಶ್ರೀ ಉಮಾಮಹೇಶ್ವರ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸಿಎಂ ಎನ್ ಶಾಸ್ತ್ರಿ, ಸಾಗರ ಪುರಸಭೆ ಮಾಜಿ ಅಧ್ಯಕ್ಷೆ ಶರಾವತಿ ಸಿ ರಾವ್, ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಾಗರದ ಖ್ಯಾತ ನ್ಯಾಯವಾದಿ ಕೆ.ಎಂ ಸೂರ್ಯನಾರಾಯಣ ಖಂಡಿಕಾ, ಉದ್ಯಮಿ ಕೆ.ಹೆಚ್ ಜ್ಞಾನೇಶ್ವರಪ್ಪ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಕುಮಾರಿ, ರಾಜಶೇಖರ ಗಾಳಿಪುರ, ಗಣಪತಿ ಬ್ಯಾಂಕ್ ನಿರ್ದೇಶಕಿ ಮಧು ಮಾಲತಿ, ಉದ್ಯಮಿ ಸುನೀಲ್ ಗಾಯ್ ತೊಂಡೆ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಇರಲಿದ್ದಾರೆ ಎಂದಿದ್ದಾರೆ.
ದಿನಾಂಕ 04-01-2026ರ ರಜತ ಸಾಗರೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೆಳದಿಯ ಬಂದಗದ್ದೆ ರಾಜಗುರು ಹಿರೇಮಠ ವಹಿಸಲಿದ್ದಾರೆ. ಸಂಸದ ಬಿವೈ ರಾಘವೇಂದ್ರ, ರೋಟರಿ ರೆಡ್ ಕ್ರಾಸ್ ರಕ್ತನಿಧಿಯ ಗೌರವಾಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು, ಸಾಗರದ ಶೃಂಗೇರಿಯ ಶಂಕರ ಮಠದ ಧರ್ಮದರ್ಶಿ ಅಶ್ವಿನಿ ಕುಮಾರ್ ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜನವರಿ.4, 2026ರ ರಜತ ಸಾಗರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಮ್ಯಾಮ್ಕೋಸ್ ಉಪಾಧ್ಯಕ್ಷ ಹೆಚ್.ಎಸ್ ಮಹೇಶ್ ಹುಲ್ಕುಳಿ, ತೀರ್ಥಹಳ್ಳಿಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸಾಗರದ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್ ನಾಗಭೂಷಣ್, ನವಚೇತನ ವೇದಿಕೆಯ ಅಧ್ಯಕ್ಷ ಕೆ.ಎಸ್ ಪ್ರಶಾಂತ್, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ ನಂಜುಂಡಸ್ವಾಮಿ, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಜಿ.ಪರಮೇಶ್ವರಪ್ಪ, ಸಾಗರದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇದಿಕೆಯಲ್ಲಿ ರಾಜ್ಯಮಟ್ಟದ ಸಹೃದಯ ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕ ಕ್ಷೇತ್ರದ ಸಾಧನೆಗಾಗಿ ಅಬಸೆ ದಿನೇಶ್ ಕುಮಾರ್ ಜೋಷಿ, ನೃತ್ಯ ಕ್ಷೇತ್ರದಿಂದ ಮೇಘನಾ, ಉದ್ಯಮ ಕ್ಷೇತ್ರದಲ್ಲಿ ಟಿವಿ ಪಾಂಡುರಂಗ, ರಾಜಕೀಯ ಕ್ಷೇತ್ರದಲ್ಲಿ ಟಿ.ಡಿ ಮೇಘರಾಜ್, ಸಾಮಾಜಿಕ ಕ್ಷೇತ್ರದಲ್ಲಿ ಆರ್.ಶ್ರೀನಿವಾಸ್, ಮಹಿಳಾ ಕ್ಷೇತ್ರದಲ್ಲಿ ಸುನಂದ ಶ್ರೀಧರ್, ಸೇವಾ ಕ್ಷೇತ್ರದಲ್ಲಿ ವೀರಭದ್ರಪ್ಪ ಜಂಬಿಗೆ, ಶ್ರಮಿಕ ಕ್ಷೇತ್ರದಲ್ಲಿ ಎಲ್.ಚಂದ್ರಪ್ಪ, ಸಾಮಾಜಿಕ ಕ್ಷೇತ್ರದಲ್ಲಿ ಪುರುಷೋತ್ತಮ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾಲತೇಶ್, ಧಾರ್ಮಿಕ ಕ್ಷೇತ್ರದಲ್ಲಿ ಕೆ.ವಿ ಜಯರಾಮ್, ಮಹಿಳಾ ಕ್ಷೇತ್ರದಲ್ಲಿ ಶಶಿಕಲಾ ಎಸ್ ಹಾಗೂ ಜಾನಪದ ಕ್ಷೇತ್ರದಲ್ಲಿ ಕೆ.ವಿ ಮಂಜಪ್ಪ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದಿನಾಂಕ 03-01-2026ರಂದು ಸಾಗರದ ಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರದಿಂದ ಭರತನಾಟ್ಯ, ರಿದಂ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ಪ್ರದರ್ಶನ, ಕರಾಟೆ ಅಸೋಶಿಯೇಷನ್ ನಿಂದ ಸಿಯಾನ್ ಪಂಚಪ್ಪ ಸಾರಥ್ಯದಲ್ಲಿ ಕರಾಟೆ, ಮನು ಹಂದಾಡಿ ಅವರಿಂದ ಹಾಸ್ಯ ರಸಾಯನ ಕಾರ್ಯಕ್ರಮವಿರಲಿದೆ ಎಂದಿದ್ದಾರೆ.
ದಿನಾಂಕ 04-01-2026ರ ಭಾನುವಾರದಂದು ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ, ಮಾಲತೇಶ್ ಜೋಗಿ ಮತ್ತು ತಂಡದವರಿಂದ ಜೋಗಿ ಪದ, ಮೈಸೂರಿನ ವಿದುಷಿ ಮೇಘನಾ ರಾವ್ ಅವರಿಂದ ಭರತನಾಟ್ಯ, ಸಾಗರದ ಪರಿಣಿತಿ ಕಲಾಕೇಂದ್ರದಿಂದ ನೃತ್ಯ ವೈವಿಧ್ಯತೆ, ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಗಾಯನ ಹಾಗೂ ಮಿಮಿಕ್ರಿ ದಯಾನಂದ್ ಅವರಿಂದ ನಗೆಬುಗ್ಗೆ, ಪ್ರಹ್ಲಾದ್ ಆಚಾರ್ಯ ಅವರಿಂದ ಶ್ಯಾಡೋ ಪ್ಲೇ ಹಾಗೂ ಉಮೇಶ್ ಗೌಡ ಅವರಿಂದ ನಗೆ ಹರಟೆ ಕಾರ್ಯಕ್ರಮವಿರಲಿದೆ. ಪ್ರವೇಶ ಉಚಿತವಾಗಿದ್ದು, ಸಾಗರೀಕರು ತಪ್ಪದೇ ಸಾಗರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








