ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರ ಎದುರೇ ಓರ್ವ ವ್ಯಕ್ತಿ ಕಲ್ಲು ತೂರಾಟ ನಡೆಸಿದ್ದಾನೆ. ಹೀಗೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಗನ್ ಮ್ಯಾನ್ ನಿಂದ ಫೈರಿಂಗ್ ಮಾಡಿರೋದಾಗಿ ಹೇಳಲಾಗುತ್ತಿದೆ.
ಜನಾರ್ಧನ ರೆಡ್ಡಿ ಮನೆಯ ಮೇಲೆ ಫೈರಿಂಗ್ ಪ್ರಕರಮಕ್ಕೆ ಸಂಬಂಧಿಸಿದಂತೆ ಖಾಸಗಿ ಗನ್ ಮ್ಯಾನ್ ಗಳ ಬಳಿಯಿಂದ ಐದು ಗನ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹೀಗೆ ಸೀಜ್ ಮಾಡಿದಂತ ಗನ್ ಗಳನ್ನು ಎಫ್ ಎಸ್ ಎಲ್ ಗೆ ಪರಿಶೀಲನೆಗೆ ಕಳುಹಿಸಿದ್ದಾರೆ.
ಇದಷ್ಟೇ ಅಲ್ಲದೇ ಜನಾರ್ಧನ ರೆಡ್ಡಿಗೆ ನೀಡಿದ್ದ ಗನ್ ಮ್ಯಾನ್ ಗಳ ಗನ್ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಜನಾರ್ಧನ ರೆಡ್ಡಿ ಗನ್ ಮ್ಯಾನ್ ಗಳ ಬುಲೆಟ್ ಫೈರ್ ಆಗಿಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆ ಮೂಲಕ ಪ್ರಕರಣದ ತನಿಖೆಯನ್ನು ಬಳ್ಳಾರಿ ಪೊಲೀಸರು ಚುರುಕುಗೊಳಿಸಿದ್ದಾರೆ.
ಇನ್ನೂ ಜನಾರ್ಧನ ರೆಡ್ಡಿ ಮನೆಯ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಾಟ ಮಾಡಿದ ಬಳಿಕ, ಗನ್ ಮ್ಯಾನ್ ಫೈರಿಂಗ್ ಮಾಡಿರೋದಾಗಿ ಹೇಳಲಾಗುತ್ತಿದೆ. ರೆಡ್ಡಿ ಮನೆಯ ಮೇಲೆಯೂ ಗನ್ ಫೈರ್ ಆಗಿರೋದಾಗಿ ಹೇಳಲಾಗುತ್ತಿದೆ. ಈ ಎಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








