ಬಳ್ಳಾರಿ : ಬಳ್ಳಾರಿಯಲ್ಲಿ ಯುಪಿ,ಬಿಹಾರದಿಂದ ಬಂದ ಗನ್ ಮ್ಯಾನ್ ಗಳಿಂದ ಫೈರಿಂಗ್ ನಡೆದಿದೆ. ಮೇಲ್ನೋಟಕ್ಕೆ ಇದು 0.76 MM ಬುಲೆಟ್ ನಿಂದ ಫೈರ್ ಆಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಬಳ್ಳಾರಿಯಲಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಘರ್ಷಣೆಯಾಗಿ ಫೈರಿಂಗ್ ಆಗಿರುವ ವಿಚಾರವಾಗಿ ಬಳ್ಳಾರಿಯಲಿ ಮಾಜಿ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿದರು. ಗಲಾಟೆಯ ಸಂದರ್ಭದಲ್ಲಿ ಭರತ ರೆಡ್ಡಿ ಆಟೋಗಳಲ್ಲಿ ಪೆಟ್ರೋಲ್ ಬಾಂಬ್ ತಂದಿದ್ದರು ಎಂದು ಗಂಭೀರವಾಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರ ಬುಲೆಟ್ನಿಂದ ಸಾವು ಆಗಿದೆ ಅನ್ನೋದನ್ನ ಸ್ಪಷ್ಟಪಡಿಸಿ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಪೊಲೀಸ್ ಅಧಿಕಾರಿಗಳಿಗೆ ನಾನು ಮಾಡಿಕೊಳ್ಳುತ್ತೇನೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಯಾರೇ ತಪ್ಪು ಮಾಡಿದರು ಕೂಡ ಕ್ರಮ ಆಗಲಿ ಎಂದು ತಿಳಿಸಿದರು.
ಬಳ್ಳಾರಿ ಸುಟ್ಟು ಭಸ್ಮ ಮಾಡುತ್ತೇನೆ ಎಂದು ಭರತ್ ರೆಡ್ಡಿ ಹೇಳುತ್ತಾರೆ ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಸಹ ತಂದಿದ್ದರು ಶಾಸಕ ಜನಾರ್ಧನ ರೆಡ್ಡಿ ಮನೆ ಸುಡುತ್ತಿದೆ ಅಂತ ಹೇಳುತ್ತಾರೆ ವಾಲ್ಮೀಕಿ ಪುತ್ತಳಿ ಅನಾವರಣಕ್ಕೆ ಬಿಡುತ್ತಿಲ್ಲ ಎಂದು ಹೇಳುತ್ತಾರೆ. ಪುತ್ತಳಿ ಅನಾವರಣಕ್ಕೆ ಬರುತ್ತೇವೆ ಇದರಲ್ಲಿ ರಾಜಕೀಯ ಏಕೆ? ಬಳ್ಳಾರಿ ಶಾಂತಿಯುತವಾಗಿದೆ ಅದನ್ನು ಹಾಳು ಮಾಡಬೇಡಿ ಎಂದು ಶ್ರೀರಾಮುಲು ತಿಳಿಸಿದರು.








