ಕಲಿಯುಗದ ಕಾಮಧೇನು, ಇಷ್ಟಾರ್ಥಗಳನ್ನು ಕಲ್ಪಿಸುವ ಕಲ್ಪತರು, ಸಂಗೀತದ ಹರಿಕಾರ, ಪ್ರಖಾಂಡ ಪಂಡಿತರು, ಚತುರ ವಾಗ್ಮೀ, ವಾಗ್ದೇವಿಯ ವರಪುತ್ರ, ಹೀಗೆ ಹಲವಾರು ನಾಮಗಳಿಂದ ಕರೆಯುವ ಭಕ್ತಪರಾಧೀನ, ಆಪದ್ಬಾಂಧವ, ಅನಾಥ ರಕ್ಷಕ, ಭಕ್ತಿಯಿಂದ ಕೂಗಿ ಕರೆದಾಗ ಓಡೋಡಿ ಬರುವ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ಗುರು ರಾಘವೇಂದ್ರರು. ‘ನಾಮಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವ’ ಮಂತ್ರಾಲಯದ ಗುರುವರರು ಹಲವು ಪವಾಡಗಳನ್ನು ಮಾಡಿ ಭಕ್ತರನ್ನು ಸಂಕಷ್ಟಗಳಿಂದ ಪಾರು ಮಾಡಿದ್ದಾರೆ.
ಪ್ರಸನ್ನ ವೆಂಕಟದಾಸರು:- ಬಾಗಲಕೋಟೆಯ ಸಣ್ಣ ಹಳ್ಳಿಯಲ್ಲಿ ಅಣ್ಣ- ತಮ್ಮ ಇದ್ದರು. ಇವರ ಚಿಕ್ಕಂದಿನಲ್ಲಿ ತಂದೆ ತಾಯಿ ಆಗಲಿದ್ದರು. ಅಣ್ಣನಿಗೆ ಸ್ವಲ್ಪ ವಿದ್ಯಾಭ್ಯಾಸ ಮಾಡಿ ವಿವಾಹವಾಗಿತ್ತು. ತಮ್ಮ ವೆಂಕಣ್ಣ ಶಾಲೆಗೆ ಹೋಗಲು ಆಗಲಿಲ್ಲ. ಅಣ್ಣನ ಜೊತೆಗೆ ಇದ್ದನು. ಆದರೆ ಅಣ್ಣನ ಪತ್ನಿ ಅತ್ತಿಗೆ ವೆಂಕಣ್ಣನಿಗೆ
ತುಂಬಾ ಕೆಲಸಗಳನ್ನು ಮಾಡಿಸಿ ಆಹಾರವನ್ನು ಕೊಡದೆ ಹಿಂಸೆ ಕೊಡುತ್ತಿದ್ದಳು. ಇದರಿಂದ ಬೇಸತ್ತ ವೆಂಕಣ್ಣ ಒಂದು ದಿನ ತಾನು ಊರು ಬಿಟ್ಟು ತಿರುಪತಿಗೆ ಹೋಗುವುದಾಗಿ ಹೇಳಿ ಹೋದನು. ತಿರುಪತಿಗೆ ಹೋಗುವಾಗ ಮಾರ್ಗದಲ್ಲಿ ಮಂತ್ರಾಲಯ ಕಂಡಿತು. ಮಂತ್ರಾಲಯದಲ್ಲಿ ರಾಯರ ದರ್ಶನ ಮಾಡಿ ಮೂರು ದಿನ ಉಳಿಯುವುದೆಂದು ಕೊಂಡನು. ಹೀಗೆ ಮೂರು ವರ್ಷ ಅಲ್ಲೇ ಕಳೆಯಿತು. ಮಠದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದನು. ಒಂದು ದಿನ ಕನಸಿನಲ್ಲಿ ಗುರುರಾಯರು ಕಾಣಿಸಿಕೊಂಡು ನೀನು ಮಂತ್ರಾಲಯಕ್ಕೆ ಹೋಗು ಅಲ್ಲಿ ಶ್ರೀನಿವಾಸನು ಕಾದಿದ್ದಾನೆ ಎಂದು ಕನಸಾಯಿತು. ಕನಸಿನಂತೆ ವೆಂಕಣ್ಣ ತಿರುಪತಿಗೆ ಹೊರಟನು. ಇವನು ಹೋಗುವಾಗ ತಿರುಪತಿ ದೇವಾಲಯದ ಬಾಗಿಲಲ್ಲಿ ಅನೇಕರು ಶ್ರೀನಿವಾಸನ ಸಂಕೀರ್ತನೆಗಳನ್ನು ಹಾಡುತ್ತಿದ್ದರು. ಇವನು ಜೊತೆ ಸೇರಿಕೊಂಡನು. ದಿನವೂ ತಿಮ್ಮಪ್ಪನ ದರ್ಶನ ಮಾಡಿ ಬಂದು ಎಲ್ಲರೂ ಸೇರಿ ಹರಿನಾಮ ಸಂಕೀರ್ತನೆ ಭಜನೆಗಳನ್ನು ಮಾಡುತ್ತಿದ್ದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಒಂದು ದಿನ ಭಾರಿ ಮಳೆ ಬಂದು ಎಲ್ಲರೂ ಗರ್ಭಗುಡಿಯ ಹತ್ತಿರ ನಿಂತರು. ವೆಂಕಣ್ಣನು ತದೇಕ ಚಿತ್ತನಾಗಿ ಶ್ರೀನಿವಾಸನ ವಿಗ್ರಹವನ್ನೇ ನೋಡುತ್ತಿದ್ದನು. ಆಗ ಅವನಿಗೆ ಇದ್ದಕ್ಕಿದ್ದಂತೆ ಒಂದು ಕೈನಲ್ಲಿ ತಂಬೂರಿ ಇನ್ನೊಂದು ಕೈಯಲ್ಲಿ ಚಿಟಿಕೆ ಹಿಡಿದುಕೊಂಡು ಭಾವ ಪರವಶರಾಗಿ ಹಾಡುವ ಪುರಂದರದಾಸರು ಕಂಡರು. ದಾಸರ ಹಿಂದೆಯೇ ಶ್ರೀನಿವಾಸನು ಕಂಡನು. ನೋಡು ನೋಡು ತ್ತಿದ್ದಂತೆ ಶ್ರೀನಿವಾಸನೇ ಬಂದು ವೆಂಕಣ್ಣನ ನಾಲಿಗೆ ಮೇಲೆ ‘ಪ್ರಸನ್ನ ವೆಂಕಟ’ ಎಂದು ಬರೆದಂತಾಯಿತು. ಆ ಕೂಡಲೇ ವೆಂಕಣ್ಣನ ಜೋರಾಗಿ ದೇವರ ನಾಮ ಹಾಡತೊಡಗಿದನು. ಎಲ್ಲರಿಗೂ ಆಶ್ಚರ್ಯವಾಯಿತು. ಅಂದು ರಾತ್ರಿ ದೇವಸ್ಥಾನದ ಧರ್ಮದರ್ಶಿಗಳ ಕನಸಿನಲ್ಲಿ ಶ್ರೀನಿವಾಸ ಪ್ರಕಟಗೊಂಡು ಇತ್ತೀಚೆಗೆ ಬಂದ ಬಾಲಕನನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಅಪ್ಪಣೆ ಮಾಡಿದಂತಾಯಿತು. ಆನಂತರದ ದಿನಗಳಿಂದ ‘ಪ್ರಸನ್ನ ವೆಂಕಟ’ ನು ‘ಶ್ರೀನಿವಾಸನ’ ದಾಸನಾಗಿ ಸಾವಿರಾರು ಕೀರ್ತನೆಗಳನ್ನು ರಚಿಸಿ ‘ಪ್ರಸನ್ನ ವೆಂಕಟದಾಸ’ರೆಂದೇ ಪ್ರಸಿದ್ಧರಾದರು.
ಮಂತ್ರದಿಂದ ಮಳೆ ಸುರಿಸಿದ್ದು:- ಲೋಕೋದ್ಧಾರಕ್ಕಾಗಿ ಅವತರಿಸಿದ ಶ್ರೀ ಗುರು ರಾಘವೇಂದ್ರರನ್ನು ಹಲವರು ಪರೀಕ್ಷೆ ಮಾಡಿ ಸೋತು ಗುರುಗಳ ಶಿಷ್ಯರಾಗುತ್ತಿದ್ದರು. ಒಮ್ಮೆ ತಮಿಳುನಾಡಿನ ಕುಂಭಕೋಣಂ ನಲ್ಲಿ, 12 ವರ್ಷ ಗಳ ಕಾಲ ಬರಗಾಲ ಬಂದಿತು. ನಾಯಕರ ಆಳ್ವಿಕೆ ಕಾಲ ‘ಸೇವಪ್ಪ ನಾಯಕ’ ರಾಜನಾಗಿದ್ದನು. ಭೀಕರ ಬರಗಾಲದ ಪರಿಹಾರಕ್ಕಾಗಿ ಮಠಕ್ಕೆ ಹೋಗಿ ಶ್ರೀ ರಾಘವೇಂದ್ರ ಗುರುಗಳಲ್ಲಿ ಮಂತ್ರ ಸಿದ್ಧಿಯಿಂದ ಮಳೆ ಬರಿಸುವಂತೆ ಪ್ರಾರ್ಥಿಸಿದನು. ಅದಕ್ಕೆ ಒಪ್ಪಿದ ಗುರುಗಳು ಅರಮನೆಗೆ ಬಂದು ಶಾಸ್ತ್ರೋಕ್ತ ವಾಗಿ ಯಾಗ – ಯಜ್ಞ ಮಾಡಿದರು ಮತ್ತು ವಿಧಿ ವಿಧಾನಗಳ ಸಹಿತ ಅನೇಕ ಪೂಜಾ ಕಾರ್ಯಗಳನ್ನು ಮಾಡಿದರು. ‘ಮಂತ್ರಕ್ಕೆ ಮಾವಿನ ಕಾಯಿ’ ಎಂಬಂತೆ ಗುರುಗಳ ಅನುಗ್ರಹದಿಂದ ಎಡೆಬಿಡದಂತೆ ಕುಂಭ ದ್ರೋಣ ಮಳೆ ಸುರಿದು
ಕೆರೆ- ಕುಂಟೆ -ಕಾಲುವೆ- ನದಿಗಳೆಲ್ಲ ತುಂಬಿ ಹರಿಯಿತು. ಆನಂತರ ರಾಜ್ಯವು ಹಿಂದೆಂದೂ ಕಾಣದಂತ ಅಭಿವೃದ್ಧಿಯನ್ನು ಕಂಡಿತು.
ರಾಜನಿಗೆ ಬಹಳ ಸಂತೋಷವಾಯಿತು. ಮಠಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ರತ್ನಹಾರವನ್ನು ತಂದು ಗುರುಗಳಿಗೆ ಕೊಟ್ಟನು. ಗುರುಗಳು
ಪುನಃ ಅವನಿಗೆ ಅದನ್ನು ಪ್ರಸಾದವಾಗಿ ಕೊಟ್ಟರು. ಇದರಿಂದ ರಾಜನಿಗೆ ಅವಮಾನವಾದಂತಾಗಿ ಸಿಟ್ಟಿನಿಂದ ರತ್ನಹಾರವನ್ನು ಹೋಮಕುಂಡದಲ್ಲಿ ಹಾಕಿದನು. ಆಗ ಗುರುಗಳೇ ಶಾಂತ ಚಿತ್ತರಾಗಿ ಅಗ್ನಿಕುಂಡದೊಳಗೆ ಕೈ ಹಾಕಿ ರತ್ನಹಾರವನ್ನು ತೆಗೆದು ರಾಜನಿಗೆ ಕೊಟ್ಟರು. ನಿಗಿ ನಿಗಿ ಪ್ರಜ್ವಲಿಸುತ್ತಿರುವ ಅಗ್ನಿಕುಂಡದೊಳಗೆ ಹಾಕಿದ ರತ್ನ ಹಾರವು ಕಿಂಚಿತ್ತು ಬದಲಾಗದೆ ಕೊಟ್ಟಂತೆಯೇ ಇತ್ತು. ಹಾಗೂ ಅಗ್ನಿ ಯೊಳಗೆ ಕೈ ಹಾಕಿದ ಗುರುಗಳ ಕೈಯನ್ನು ಬೆಂಕಿ ಮುಟ್ಟಿರಲಿಲ್ಲ. ಈ ದೃಶ್ಯವನ್ನು ಕಂಡ ರಾಜನು ತನ್ನ ಅಹಂಕಾರಕ್ಕೆ ತಾನೇ ನಾಚಿ ಗುರುಗಳಲ್ಲಿ ಕ್ಷಮೆ ಬೇಡಿದನು. ಮುಂದೆ ಗುರುಗಳ ಭಕ್ತ ವೃಂದದಲ್ಲಿ ಒಬ್ಬನಾದನು.
ಹಾವು ಬಂಗಾರವಾಯಿತು:- ಒಬ್ಬ ಬಡವನಿದ್ದ. ಜೀವನದಲ್ಲಿ ಬಳಲಿದ್ದ ಬಡತನ ನಿವಾರಿಸಿಕೊಳ್ಳಲು ಏನು ಮಾಡಬೇಕು ಎಂದು ಚಿಂತಿಸುತ್ತಿರು ವಾಗಲೇ, ರಾಘವೇಂದ್ರ ಸ್ವಾಮಿಗಳನ್ನು ಆರಾಧಿಸಿದರೆ ಬಡತನ ನಿವಾರಣೆ ಯಾಗುತ್ತದೆ ಎಂಬ ಸುದ್ದಿ ತಿಳಿದು, ಆತ ಮಂತ್ರಾಲಯಕ್ಕೆ ಬಂದು ಗುರುರಾಯ ರನ್ನು ಆರಾಧಿಸುತ್ತಾನೆ. ಇಂತಿಷ್ಟು ದಿನ ಅಂತ ಭಕ್ತಿಯಿಂದ ಸೇವೆ ಮಾಡಲು ಆರಂಭಿಸಿದನು. ವ್ರತ ಮುಗಿಯಲು ಎರಡೇ ದಿನ ಉಳಿದಿತ್ತು. ಅಂದು ರಾತ್ರಿ ಬೆಳಗಿನ ಜಾವ ಕನಸಿನಲ್ಲಿ ರಾಘವೇಂದ್ರರು ಪ್ರಕಟರಾಗಿ, ನೋಡಪ್ಪ ನಿನ್ನ ಬಡತನ ಹೋಗಲು ಕೊಡಲು ನನ್ನಲ್ಲಿ ಏನೂ ಇಲ್ಲ. ನಾನು ಹೇಳಿದಂತೆ ನೀನು ಮಾಡು ನಿನ್ನ ಬಡತನ ನಿವಾರಣೆಯಾಗುತ್ತದೆ ಎಂದರು. ಮುಂಜಾನೆ ಮಠದ ಬಾಗಿಲು ತೆಗೆದ ಕೂಡಲೇ ನಿನ್ನ ಕಣ್ಣಿಗೆ ಮೊದಲು ಏನು ಕಾಣುತ್ತದೋ ಅದನ್ನು ತೆಗೆದುಕೋ ನಿನಗೆ ಒಳ್ಳೆಯದಾಗುತ್ತದೆ ಎಂದರು. ತಕ್ಷಣ ಎಚ್ಚರ ವಾಯಿತು.ರಾಘವೇಂದ್ರರು ಅನುಗ್ರಹ ಮಾಡಿ ದ್ದಾರೆ ಎಂಬ ಸಂತಸದಲ್ಲಿದ್ದ. ಬೆಳಿಗ್ಗೆ ಅಕಸ್ಮಾತ್ ಎಚ್ಚರ ಆಗದಿದ್ದರೆ, ಯೋಚಿಸಿದನು ಮುಂಜಾನೆ ಮಠದ ಮುಂದಿನ ಹೆಬ್ಬಾಗಿಲು ತೆಗೆಯಲು ಬಂದವರು ಬಾಗಿಲು ತೆಗೆಯುವ ಸಲುವಾಗಿ ತನ್ನನ್ನು ಎಬ್ಬಿಸುತ್ತಾರೆ ಎಂದುಕೊಂಡು ಮುಖ್ಯದ್ವಾರದ ಬಳಿಯೇ ಮಲಗಿದನು.
ಅವನು ಅಂದುಕೊಂಡಂತೆ ಬೆಳಗ್ಗೆ ಬಾಗಿಲು ತೆಗೆಯಲು ಬಂದವರು ಆತನನ್ನು ಎಬ್ಬಿಸಿ ಬಾಗಿಲು ತೆಗೆದರು. ಗುರುಗಳ ಆದೇಶದಂತೆ ಹೊರಗೆ ಬಂದು ನೋಡಿ ದನು ದೊಡ್ಡ ಹಾವು ಹರಿದು ಬರುತ್ತಿತ್ತು ಅದನ್ನು ನೋಡಿ ಭಯವಾಗಿ ಎದೆ ದಸಕ್ಕೆಂದಿತು. ಹಾವು ಹಿಡಿಯಲು ಹೋಗಿ ಕಚ್ಚಿದರೆ ಏನು ಗತಿ ಎಂದುಕೊಂಡ ನು. ಕೊನೆಗೆ ಇಲ್ಲ ಗುರುಗಳು ಹೇಳಿದ್ದಾರೆ ಎಂದು ಗುರು ವಾಕ್ಯ ನಂಬಿ ಗುರುವಿನ ಮೇಲೆ ವಿಶ್ವಾಸವಿಟ್ಟು ಹಾವು ಹಿಡಿದುಕೊಳ್ಳಲು ಹೋದನು ಆದರೆ ಅಷ್ಟರೊಳಗೆ ಅದು ಹತ್ತಿರದಲ್ಲಿದ್ದ ಬಿಲದೊಳಗೆ ಹೋಗುತ್ತಿತ್ತು. ಗುರುಗಳ ಮೇಲಿನ ದೃಢ ವಿಶ್ವಾಸದಿಂದ ಬಿಲ ದೊಳಗೆ ಹೋಗುತ್ತಿದ್ದ ಹಾವಿನ ಬಾಲ ಬಿಲದಿಂದ ಹೊರಗೆ ಒಂದಷ್ಟು ಇತ್ತು ಹಾಗೆ ಉಳಿದಿದ್ದ ಹಾವಿನ ಬಾಲವನ್ನೇ ಕೈಲಿ ಹಿಡಿದುಕೊಂಡನು. ಕೈಗೆ ಸಿಕ್ಕ ಹಾವಿನ ಬಾಲ ಬಂಗಾರವಾಯ್ತು. ಆಗ ಅನ್ನಿಸಿತು , ಅಯ್ಯೋ ನಾನು ರಾಯರನ್ನು ನಂಬಲಿಲ್ಲ ಎಂಥ ಕೆಲಸವಾಯ್ತು ಹಿಡಿದುಕೊಂಡಿದ್ದರೆ ಇಡೀ ಹಾವು ಬಂಗಾರ ವಾಗುತ್ತಿತ್ತು. ರಾಯರ ಮೇಲೆ ಎಷ್ಟು ವಿಶ್ವಾಸವಿಟ್ಟನೋ, ಅಷ್ಟನ್ನು ಮಾತ್ರ ರಾಯರು ಅನುಗ್ರಹಿಸಿದರು.
ಚಿಗುರೊಡೆದ ಮುಸಲ :- ರಾಘವೇಂದ್ರ ಗುರುಗಳು ಪರ್ಯಟನೆ ಮಾಡುತ್ತಿದ್ದರು ಹೋದಲ್ಲೆಲ್ಲ ಭಕ್ತರಿಗೆ ಧರ್ಮ ಉಪದೇಶ ಮಾಡುತ್ತಿದ್ದರು, ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಿದ್ದರು. ಗುರುಗಳು ಹೋದಲ್ಲೆಲ್ಲ ಭಕ್ತರ ದಂಡು ಗುರುಗಳ ಆಶೀರ್ವಾದ ಪಡೆಯಲು ಬರುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ಒಂದು ಗ್ರಾಮ ಸಿಕ್ಕಿತು ಆ ಗ್ರಾಮದಲ್ಲಿ ಒಬ್ಬ ದುರಹಂಕಾರಿ ಜಮೀನ್ದಾರ ಇದ್ದನು. ಅವನು ದೇವರು- ಪೂಜೆ- ಸೇವೆ- ಮಂತ್ರ ಇವುಗಳನ್ನು ನಂಬುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣರನ್ನು ತಿರಸ್ಕಾರವಾಗಿ ಕಾಣುತ್ತಾ ಹಿಂಸೆ ಕೊಡುತ್ತಿದ್ದನು. ಇದನ್ನೆಲ್ಲಾ ತಿಳಿದ ಗುರುಗಳು ಸರಿ ಮಾಡಬೇಕು ಎಂದೇ ಆ ಗ್ರಾಮದ ದೇವಸ್ಥಾನದಲ್ಲಿ ತಂಗಿದರು. ಒಂದೆರಡು ದಿನಗಳಲ್ಲಿ ದೊಡ್ಡ ಯಜ್ಞವನ್ನು ಹಮ್ಮಿಕೊಂಡರು.
ಊರಿನ ಜನರೆಲ್ಲರೂ ಸೇರಿದರು. ಯಜ್ಞ ಬಹಳ ಚೆನ್ನಾಗಿ ನಡೆಯುತ್ತಿತ್ತು.
ಊರಿನ ಜಮೀನ್ದಾರರುಗು ತಿಳಿದು ಆತ ಅಹಂಕಾರದಿಂದಲೇ ಅಲ್ಲಿಗೆ ಬಂದನು. ಗುರುಗಳ ಮುಂದೆ ನಿಂತು, ನೀವು ಹೇಳುವ ದೇವರು-ವಿಗ್ರಹ- ಮಂತ್ರ- ವೇದ – ನೈವೇದ್ಯ -ಪ್ರಾರ್ಥನೆ ಇವುಗಳೆಲ್ಲ ಇದೆ ಸತ್ಯವಾದದ್ದು ಎಂಬುದಕ್ಕೆ ಸಾಕ್ಷಿ ಸಹಿತ ತೋರಿಸಿ ಆಗ ನಾನು ನಂಬುತ್ತೇನೆ ಎಂದು ಸವಾಲು ಹಾಕಿದ. ಹಾಗೂ ಕೂಡಲೇ ಒಂದು ಮುಸಲವನ್ನು ತರಿಸಿ, ನೀವು ಹೇಳುವು ದೆಲ್ಲ ಸತ್ಯ ಎನ್ನುವುದೇ ಆದರೆ ಈ ಮುಸಲವನ್ನು ಚಿಗುರೊಡೆಯುವಂತೆ ಮಾಡಿ ನೋಡೋಣ ಎಂದನು.
ಅಲ್ಲಿದ್ದವರಿಗೆಲ್ಲ ಇದು ಅಸಾಧ್ಯ ಇವನಂತ ಮೂರ್ಖ. ಮರ ಕಡಿದು ಸಾಧನ ವನ್ನಾಗಿ ಮಾಡಿದ ಮುಸಲವನ್ನು ಚಿಗುರಿಸು ಎಂದರೆ ಅದು ಸಾಧ್ಯವೇ? ಕುಟ್ಟಲು ಮಾಡಿದ ಮುಸಲವನ್ನು ಮತ್ತೆ ಚಿಗುರಿಸಲು ಸಾಧ್ಯವೇ ಎಂದರು. ಆಗ ಗುರುಗಳು ಎಲ್ಲರಿಗೂ ಸಮಾಧಾನವಾಗಿ ಮೂಲ ರಾಮನು ಎಲ್ಲವನ್ನು ನೋಡಿಕೊಳ್ಳುತ್ತಾನೆ ಆತ ಎಲ್ಲವನ್ನು ಬಲ್ಲ ಎಂದು ಅವರನ್ನೆಲ್ಲ ಸಮಾಧಾನ ಪಡಿಸಿದರು ಹಾಗೂ ತಮ್ಮ ಕಮಂಡಲದಲ್ಲಿದ್ದ ನೀರನ್ನು ತೆಗೆದು ಕೊಂಡು ಮಂತ್ರಗಳನ್ನು ಜಪಿಸುತ್ತಾ, ಶ್ರೀರಾಮನನ್ನು ಧ್ಯಾನಿಸಿ ಒಣಗಿದ ಮುಸಲದ ಮೇಲೆ ನೀರನ್ನು ಪ್ರೋಕ್ಷಿಸಿದರು. ಮಂತ್ರ ಸಿದ್ಧಿ ನೀರನ್ನು ಪ್ರೋಕ್ಷಿಸಿದ ಸ್ವಲ್ಪ ಹೊತ್ತಿನಲ್ಲೇ ಒನಕೆಯಲ್ಲಿ ಚಿಗುರೊಡೆದು ಹಸಿರು ಎಲೆಗಳು ಮೂಡಿದವು ಇದನ್ನು ಕಂಡು ಜಮೀನ್ದಾರನಿಗೆ ತನ್ನ ತಪ್ಪಿನ ಅರಿವಾಯಿತು. ಗುರುಗಳ ಮಹಿಮೆಗೆ ತಲೆದೂಗಿ, ತನ್ನ ಅಪರಾಧ ಮನ್ನಿಸಿರೆಂದು ಗುರುಗಳಲ್ಲಿ ಕ್ಷಮೆ ಯಾಚಿಸಿ ಆತನು ಅವರ ಭಕ್ತನಾದನು.
ರಾಘವೇಂದ್ರ ಗುರುಗಳು ಇಂಥ ಲೆಕ್ಕವಿಲ್ಲದಷ್ಟು ಪವಾಡ ಸದೃಶಗಳನ್ನು ಮಾಡಿ ಭಕ್ತರ ಅಭಿಷ್ಟವನ್ನು ನೆರವೇರಿಸಿದ್ದಾರೆ. ಅಂದಿನಿಂದ ಇಂದಿಗೂ ರಾಯರನ್ನು ನಂಬಿ ಬಂದ ಭಕ್ತರನ್ನು ಎಂದೆಂದಿಗೂ ಕೈ ಬಿಟ್ಟಿಲ್ಲ ‘ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ’ ಎಂಬ ಪ್ರಾರ್ಥನೆಯಂತೆ ರಾಘವೇಂದ್ರರನ್ನು ಭಕ್ತಿಯಿಂದ ಸೇವಿಸಿ ಪ್ರಾರ್ಥಿಸಿದರೆ ಸಕಲ ಇಷ್ಟಾರ್ಥ ಗಳನ್ನು ಪೂರೈಸುವ ಕಲ್ಪವೃಕ್ಷ ದಂತೆ, ತಡ ಮಾಡದೆ ಕೊಡುವ ದೇವಲೋಕದ ಕಾಮಧೇನುವಿನಂತೆ ಅವರವರ ಯೋಗ್ಯತೆಗೆ ತಕ್ಕಂತೆ ಬಯಸಿದ್ದನ್ನೆಲ್ಲ ಕೊಡುವ ಕಲ್ಪತರು ಗುರು ರಾಘವೇಂದ್ರರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಸರ್ವಯಾತ್ರಾ ಫಲವಾಪ್ತ್ಯೈ
ಯಥಾಶಕ್ತಿ ಪ್ರದಕ್ಷಿಣಂ!
ಕರೋಮಿ ತವ ಸಿದ್ಧಸ್ಯ ಬೃಂದಾವನ ಗತಂ ಜಲಂ!
ಶಿರಸಾ ದಾರಯಾಮ್ಯದ್ಯ ಸರ್ವ ತೀರ್ಥ ಪಲಾಪ್ತಯೇ!!
ಸರ್ವಾ ಬೀಷ್ಟಾರ್ಥ ಸಿದ್ಧ್ಯರ್ಥಂ
ನಮಸ್ಕಾರಂ ಕರೋಮ್ಯಹಂ!
ತವ ಸಂಕೀರ್ತನಂ ವೇದ ಶಾಸ್ತ್ರಾರ್ಥ
ಜ್ಞಾನ ಸಿದ್ದಯೇ!
ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯ ತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರ ತಮಾಶ್ರಯೇ!
!ಹರೇ ಶ್ರೀನಿವಾಸ ಗುರು ರಾಘವೇಂದ್ರ!








