ನವದೆಹಲಿ : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ನೀವು ಇದನ್ನು ಸಿಗರೇಟ್ ಪ್ಯಾಕೆಟ್’ಗಳಲ್ಲಿ ಓದಿರಬಹುದು. ಆದ್ರೆ, ಈಗ, ಹೊಸ ಸುದ್ದಿ ಏನೆಂದರೆ ಸಿಗರೇಟ್ ಸೇದುವುದು ಹಾನಿಕಾರಕ ಮಾತ್ರವಲ್ಲ ಬಡತನಕ್ಕೆ ಕಾರಣವಾಗಬಹುದು. ಹೌದು, ಸಿಗರೇಟ್ ದುಬಾರಿಯಾಗಲಿದೆ. 2026ರಲ್ಲಿ ಸಿಗರೇಟ್ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಕಂಡು ಬರಬಹುದು. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಬಹುದೆಂದರೆ ಒಂದೇ ಸಿಗರೇಟಿನ ಬೆಲೆ 72 ರೂಪಾಯಿಗಳಿಗೆ ಏರಬಹುದು.
ಸಂಸತ್ತು ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನುಮೋದಿಸಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ, ಮಸೂದೆಯನ್ನ ಲೋಕಸಭೆಗೆ ಹಿಂತಿರುಗಿಸಲಾಗಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಡಿಸಿದ ಈ ಮಸೂದೆಯು ಸಿಗರೇಟ್ ಸೇರಿದಂತೆ ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್’ನಲ್ಲಿ ಗಮನಾರ್ಹ ಹೆಚ್ಚಳಕ್ಕೆ ಅವಕಾಶ ನೀಡುತ್ತದೆ. ಬೆಲೆ ಏರಿಕೆಯು ಯುವಕರು ಮತ್ತು ವಿದ್ಯಾರ್ಥಿಗಳು ಸಿಗರೇಟ್’ಗಳನ್ನು ತ್ಯಜಿಸಲು, ಧೂಮಪಾನಿಗಳನ್ನು ಧೂಮಪಾನ ಬಿಡಲು ಮತ್ತು ಆರೋಗ್ಯ ವೆಚ್ಚಗಳನ್ನ ಕಡಿಮೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಸರ್ಕಾರ ನಂಬುತ್ತದೆ.
ಸಿಗರೇಟಿಗೆ 54 ರೂ. ಹೆಚ್ಚಳ.!
ಇದರ ಆಧಾರದ ಮೇಲೆ, ಈ ಹಿಂದೆ ಸಿಗರೇಟಿಗೆ ₹18 ಬೆಲೆಯಿದ್ದ ಸಿಗರೇಟಿನ ಬೆಲೆ ಈಗ ₹72 ಆಗಲಿದೆ. ಇದು ಪ್ರತಿ ಸಿಗರೇಟಿಗೆ ₹54 ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೊಸ ದರಗಳನ್ನು ಮುಂದಿನ ವರ್ಷ, 2026 ರಲ್ಲಿ ಜಾರಿಗೆ ತರಬಹುದು. ಪ್ರಸ್ತುತ ಕಾನೂನಿನಡಿಯಲ್ಲಿ (ಕೇಂದ್ರ ಅಬಕಾರಿ ಕಾಯ್ದೆ, 1944), ಸಿಗರೇಟಿನ ಮೇಲಿನ ಸುಂಕವು 1,000 ಸ್ಟಿಕ್‌ಗಳಿಗೆ ₹200 ರಿಂದ ₹735 ರವರೆಗೆ ಇತ್ತು. ಆದಾಗ್ಯೂ, ಹೊಸ ತಿದ್ದುಪಡಿಯು ಈ ಸುಂಕವನ್ನು 1,000 ಸಿಗರೇಟಿಗೆ ₹2,700 ರಿಂದ ₹11,000 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಇದು ಚಿಲ್ಲರೆ ಬೆಲೆಯಲ್ಲಿ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣವಾಗಬಹುದು.
ತಂಬಾಕು ಉತ್ಪನ್ನಗಳ ಮೇಲೂ ಪರಿಣಾಮ.!
ಹೊಸ ಮಸೂದೆ ಸಿಗರೇಟ್‌ಗಳಿಗೆ ಸೀಮಿತವಾಗಿಲ್ಲ. ಇತರ ತಂಬಾಕು ಉತ್ಪನ್ನಗಳ ಮೇಲೂ ಭಾರೀ ತೆರಿಗೆ ವಿಧಿಸಲಾಗುವುದು. ಇವುಗಳಲ್ಲಿ ಜಗಿಯುವ ತಂಬಾಕು 25% ರಿಂದ 100% ಕ್ಕೆ, ಹುಕ್ಕಾ ತಂಬಾಕು 25% ರಿಂದ 40%ಕ್ಕೆ ಮತ್ತು ಪೈಪ್ ಮತ್ತು ಸಿಗರೇಟ್ ಸೇದುವ ಮಿಶ್ರಣಗಳು 60% ರಿಂದ 325% ಕ್ಕೆ ಹೆಚ್ಚಾಗುತ್ತವೆ. ಜರ್ದಾ, ಸುವಾಸನೆಯ ತಂಬಾಕು ಮತ್ತು ಸಿಗಾರ್‌ಗಳು ಸಹ ಇದರ ವ್ಯಾಪ್ತಿಗೆ ಬರುತ್ತವೆ.
ಪ್ರವಾಸಿಗರೇ ಗಮನಿಸಿ : ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದ್ದೀರಾ? : ಹಾಗಾದ್ರೆ ಈ ಸುದ್ದಿಯನ್ನೊಮ್ಮೆ ಓದಿ
ಪ್ರವಾಸಿಗರೇ ಗಮನಿಸಿ : ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದ್ದೀರಾ? : ಹಾಗಾದ್ರೆ ಈ ಸುದ್ದಿಯನ್ನೊಮ್ಮೆ ಓದಿ








