Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾಖಲೆ ಬರೆದ ನರೇಂದ್ರ ಮೋದಿ: ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ‘ಚುನಾಯಿತ ಸರ್ಕಾರಿ ಮುಖ್ಯಸ್ಥ’ ಎಂಬ ಹೆಗ್ಗಳಿಕೆ

23/03/2026 6:58 AM

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ; ‘ನೀರಿನ ಬಾಟಲಿ’ಗಳ ಬೆಲೆಯೂ ಏರಿಕೆ!

23/03/2026 6:55 AM

​’ಇರಾನ್ ಶತ್ರುಗಳಿಗೆ’ ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆಗೆ ಇರಾನ್ ತಿರುಗೇಟು

23/03/2026 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ದೂರಿನ ಅಬಲವಾಡಿಯ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ: ಗ್ರಾಮಸ್ಥರಿಂದ ಆಕ್ರೋಶ
KARNATAKA

ಮದ್ದೂರಿನ ಅಬಲವಾಡಿಯ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ: ಗ್ರಾಮಸ್ಥರಿಂದ ಆಕ್ರೋಶ

By kannadanewsnow0929/12/2025 9:51 PM

ಮಂಡ್ಯ : ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ.

ಹಲವು ವರ್ಷಗಳಿಂದ ಶ್ರೀ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್, ಆಡಳಿತ ಮಂಡಳಿ ದೇಗುಲದ ನಿರ್ವಹಣೆಯನ್ನು ಮಾಡಿಕೊಂಡು ಬರುತ್ತಿದ್ದರು. ಏಕಾಏಕಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ಅಧಿಕಾರಿಗಳು ಮುಜರಾಯಿ ಇಲಾಖೆಗೆ ದೇಗುಲವನ್ನು ಒಳಪಡಿಸಿಕೊಂಡು ಹುಂಡಿಯನ್ನು ದೇಗುಲದಲ್ಲಿ ಇಡಲು ಮುಂದಾದಾಗ ದೇಗುಲದ ಆವರಣದಲ್ಲಿ ನೂರಾರು ಮಂದಿ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಸುಮಾರು 3 ಗಂಟೆಗಳ ಕಾಲ ಅಡ್ಡಗಟ್ಟಿ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ತಹಶೀಲ್ದಾರ್ ಹಾಗೂ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬಳಿಕ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಗ್ರಾಮಸ್ಥರ ಜೊತೆ ಮಾತನಾಡಿ, ಈ ದೇವಾಲಯವು ಸಿ ಶ್ರೇಣಿಗೆ ಸೇರಿದ್ದು, ಇದನ್ನು ಮುಜರಾಯಿ ಇಲಾಖೆಗೆ ವಶಕ್ಕೆ ತೆಗೆದುಕೊಳ್ಳುವಂತೆ ಕೆಲ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು.

ಈ ವಿಚಾರವಾಗಿ ಸತತ ವಿಚಾರಣೆ ನಡೆದು ನ. 18 ರಂದು ಹೈಕೋರ್ಟ್ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಕೊರ್ಟ್ ಆದೇಶದ ಮೇರೆಗೆ ಇಲಾಖೆ ವಶಕ್ಕೆ ತೆಗೆದುಕೊಳ್ಳಲು ಆಗಮಿಸಿದ್ದೇವೆ‌. ಇನ್ನೆರಡು ದಿನಗಳ ಕಾಲಾವಕಾಶ ನೀಡಲಾಗುವುದು ಅಷ್ಟರೊಳಗೆ ಭಕ್ತಾದಿಗಳು ಹಾಗೂ ಗ್ರಾಮಸ್ಥರು ದೇಗುಲವನ್ನು ಮುಜರಾಯಿ ಇಲಾಖೆಗೆ ಸುಪರ್ದಿಗೆ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ನಾರಾಯಿಣಿ, ಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವರದಿ : ಗಿರೀಶ್ ರಾಜ್, ಮಂಡ್ಯ

ವೇಣುಗೋಪಾಲ್ ಸಲಹೆ ನೀಡಿದ್ದಾರೆ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

23/03/2026 6:50 AM1 Min Read

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM2 Mins Read

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM1 Min Read
Recent News

ದಾಖಲೆ ಬರೆದ ನರೇಂದ್ರ ಮೋದಿ: ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ‘ಚುನಾಯಿತ ಸರ್ಕಾರಿ ಮುಖ್ಯಸ್ಥ’ ಎಂಬ ಹೆಗ್ಗಳಿಕೆ

23/03/2026 6:58 AM

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ; ‘ನೀರಿನ ಬಾಟಲಿ’ಗಳ ಬೆಲೆಯೂ ಏರಿಕೆ!

23/03/2026 6:55 AM

​’ಇರಾನ್ ಶತ್ರುಗಳಿಗೆ’ ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆಗೆ ಇರಾನ್ ತಿರುಗೇಟು

23/03/2026 6:52 AM

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

23/03/2026 6:50 AM
State News
KARNATAKA

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

By kannadanewsnow5723/03/2026 6:50 AM KARNATAKA 1 Min Read

ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಸಾರ್ವಜನಿಕರು ಖಾತೆ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ‘ಆಟೋ ಮ್ಯುಟೇಷನ್’ (ಸ್ವಯಂ…

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.