ಶಿವಮೊಗ್ಗ: ನಗರದಲ್ಲಿ ಕೊಲೆ ಪ್ರಕರಣಗಳು ಮುಂದುವರೆದಿವೆ. ಕೌಟುಂಬಿಕ ಕಲಹದಿಂದಾಗಿ ಯುವಕನೊಬ್ಬನನ್ನು ಸಂಬಂಧಿಕರೇ ಹತ್ಯೆ ಮಾಡಿರುವಂತ ಘಟನೆ ವಿನೋಬನಗರದಲ್ಲಿ ನಡೆದಿದೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಬಳಿಯಲ್ಲಿ ಇಂದು ಸಂಜೆ ಕ್ಷುಲ್ಲಕ ಕಾರಣಕ್ಕಾಗಿ ಯುವನೊಬ್ಬನನ್ನು ಸಂಬಂಧಿಕರೇ ಹತ್ಯೆ ಮಾಡಿರೋ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಅರುಣ್(26) ಎಂಬುದಾಗಿ ಗುರುತಿಸಲಾಗಿದೆ. ವೈವಾಹಿಕ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಈ ಗಲಾಟೆ ತಾರಕಕ್ಕೆ ಏರಿದಂತ ಸಂದರ್ಭದಲ್ಲಿ ಸಂಬಂಧಿಕರೇ ಹತ್ಯೆ ಮಾಡಿರೋದಾಗಿ ಹೇಳಲಾಗುತ್ತಿದೆ.
ವಿಷಯ ತಿಳಿದು ಕೂಡಲೇ ಅಲರ್ಟ್ ಆದಂತ ಶಿವಮೊಗ್ಗ ಪೊಲೀಸರು, ಇಬ್ಬರನ್ನು ಪ್ರಕರಣ ಸಂಬಂಧ ಬಂಧಿಸಿರೋದಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








