Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ಜನವರಿಯಲ್ಲಿ 81 ಲಕ್ಷಕ್ಕೂ ಅಧಿಕ `Whats App’ ಖಾತೆಗಳು ಬ್ಯಾನ್ ! ಕಾರಣವೇನು ಗೊತ್ತಾ?

02/03/2026 11:50 AM

ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತ: ಇರಾನ್ ಯುದ್ಧಕ್ಕೆ 7.8 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು | Share market crashes

02/03/2026 11:42 AM

ಉದ್ಯೋಗಾವಕಾಶ: ‘ಕನ್ನಡ ನ್ಯೂಸ್ ನೌ’ನಲ್ಲಿ ವೆಬ್ ಸ್ಟೋರಿ ತಯಾರಕರು ಬೇಕಾಗಿದ್ದಾರೆ

02/03/2026 11:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಸಿದ್ಧಗೊಂಡಿರೋರಿಗೆ ಗುಡ್ ನ್ಯೂಸ್
KARNATAKA

ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಸಿದ್ಧಗೊಂಡಿರೋರಿಗೆ ಗುಡ್ ನ್ಯೂಸ್

By kannadanewsnow0929/12/2025 7:24 PM

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ ರೆಡಿಯಾಗಿರೋರಿಗೆ ಗುಡ್ ನ್ಯೂಸ್ ಎನ್ನುವಂತೆ ಬಿಎಂಟಿಸಿ ಬಸ್, ನಮ್ಮ ಮೆಟ್ರೋ ರೈಲು ಸಂಚಾರವನ್ನು ಮುಂಜಾನೆಯವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿ ಎಲ್ ಮಾಹಿತಿ ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹೊಸ ವರ್ಷದ ಸಂಭ್ರಮ–2026ರ ಅಂಗವಾಗಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ.

ಕೊನೆಯ ರೈಲುಗಳು ಹೊರಡುವ ಸಮಯ: 31 ಡಿಸೆಂಬರ್ 2025ರ ಮಧ್ಯರಾತ್ರಿಯ ನಂತರ, ಅಂದರೆ 1ನೇ ಜನವರಿ 2026ರಂದು ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ಮೆಟ್ರೋ ರೈಲುಗಳ ಸಮಯ ಈ ಕೆಳಕಂಡಂತಿದೆ:

 ನೇರಳೆ ಮಾರ್ಗ: ವೈಟ್‌ಫೀಲ್ಡ್        ನಿಂದ ಚಲ್ಲಘಟ್ಟದ ವರೆಗೆ: ಬೆಳಗಿನಜಾವ 1:45ಗಂಟೆಗೆ

 ಚಲ್ಲಘಟ್ಟ ದಿಂದ ವೈಟ್‌ಫೀಲ್ಡ್ ವರೆಗೆ: ಬೆಳಗಿನಜಾವ 2:00ಗಂಟೆಗೆ

ಹಸಿರು ಮಾರ್ಗ: ಮಾದಾವರ ದಿಂದ ರೇಷ್ಮೆ ಸಂಸ್ಥೆಯ ವರೆಗೆ: ಬೆಳಗಿನಜಾವ 2:00ಗಂಟೆಗೆ

 ರೇಷ್ಮೆ ಸಂಸ್ಥೆ ಯಿಂದ ಮಾದಾವರದ ವರೆಗೆ: ಬೆಳಗಿನಜಾವ 2:00ಗಂಟೆಗೆ

ಹಳದಿ ಮಾರ್ಗ: ಆ.ರ್‌ವಿ ರಸ್ತೆ ಯಿಂದ ಬೊಮ್ಮಸಂದ್ರದ ವರೆಗೆ: ಬೆಳಗಿನಜಾವ 3:10ಗಂಟೆಗೆ

 ಬೊಮ್ಮಸಂದ್ರ ದಿಂದ ಆರ್‌ವಿ ರಸ್ತೆಯ ವರೆಗೆ: ಬೆಳಗಿನಜಾವ 1:30ಗಂಟೆಗೆ

 ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣ: ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ಬೆಳಗಿನಜಾವ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಹೊರಡಲಿದೆ.

 ರೈಲು ಸಂಚಾರದ ಅವಧಿ: 31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ವಿಸ್ತರಿತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಎಂ.ಜಿ ರಸ್ತೆ ನಿಲ್ದಾಣ ಮುಚ್ಚುವಿಕೆ: ಎಂ.ಜಿ ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ, 31ನೇ ಡಿಸೆಂಬರ್ 2025ರ ರಾತ್ರಿ 10:00ರಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪ್ರಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು.

 ಟಿಕೆಟ್ ಸಂಬಂಧಿತ ಸೂಚನೆ: ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11:00ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11:00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ, ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸುವಂತೆ ಅಥವಾ ಸಾಕಷ್ಟು ನಗದುವಿರುವ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

 ಸಾರ್ವಜನಿಕರಿಗೆ ಮನವಿ: ಹೊಸ ವರ್ಷದ ಸಂಭ್ರಮದ ವೇಳೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಗಡವಾಗಿ ಯೋಜಿಸಿ, ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಮೆಟ್ರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ನಿಗಮವು ಮನವಿ ಮಾಡಿದೆ.

ಮುಂಜಾನೆ 2 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ದಿನಾಂಕ: 31.12.2025 ರಂದು ಬೆಂಗಳೂರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಜಾನೆ 2 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನಾಂಕ: 31.12.2025 ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆ/ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.

ಕ್ರ. ಸಂ ಮಾರ್ಗ ಸಂಖ್ಯೆ        ಎಲ್ಲಿಂದ        ಎಲ್ಲಿಗೆ  ಬಸ್ಸುಗಳ ಸಂಖ್ಯೆ      ವಲಯ

1       G-3    ಬ್ರಿಗೇಡ್ ರಸ್ತೆ  ಎಲೆಕ್ಟ್ರಾನಿಕ್ಸ್ ಸಿಟಿ

6       ಪೂರ್ವ

2       G-4           ಜಿಗಣಿ  6       ದಕ್ಷಿಣ

3       G-2    ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ    6       ದಕ್ಷಿಣ

4      G-6            ಕೆಂಗೇರಿ KHB ಕ್ವಾರ್ಟ್ರ್ಸ್

4      ಪಶ್ಚಿಮ

5       G-7            ಜನಪ್ರಿಯ ಟೌನ್ ಶಿಪ್ 4      ವಾಯುವ್ಯ

6       G-8            ನೆಲಮಂಗಲ   4      ವಾಯುವ್ಯ

7       G-9            ಯಲಹಂಕ ಉಪನಗರ 5ನೇ ಹಂತ    4      ಉತ್ತರ

8       G-10           ಯಲಹಂಕ     4      ಈಶಾನ್ಯ

9       G-11           ಬಾಗಲೂರು   4      ಈಶಾನ್ಯ

10      317-G              ಹೊಸಕೋಟೆ  6       ಈಶಾನ್ಯ

11      SBS-13K                      ಚನ್ನಸಂದ್ರ     6       ಪೂರ್ವ

12      SBS-1K                        ಕಾಡುಗೋಡಿ  4      ಪೂರ್ವ

13      13              ಬನಶಂಕರಿ    4      ದಕ್ಷಿಣ

14      139            ಜೀವನ್ ಭೀಮಾನಗರ

2       ಪೂರ್ವ

15      MF-5  S.V. ಮೆಟ್ರೋ ನಿಲ್ದಾಣ ಸೆಂಟ್ರಲ್ ಸಿಲ್ಕ್ ಬೋರ್ಡ್

4      ಪೂರ್ವ

16      171-G   ಕೆಬಿಎಸ್       ಕೋರಮಂಗಲ 2       ಪೂರ್ವ

ಅಲ್ಲದೆ, ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ಜಂಕ್ಷನ್ ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು  ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

BREAKING: ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಕೇಸ್: ಮೂವರು ಇನ್ಸ್ ಪೆಕ್ಟರ್ ಸಸ್ಪೆಂಡ್

ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

ಉದ್ಯೋಗಾವಕಾಶ: ‘ಕನ್ನಡ ನ್ಯೂಸ್ ನೌ’ನಲ್ಲಿ ವೆಬ್ ಸ್ಟೋರಿ ತಯಾರಕರು ಬೇಕಾಗಿದ್ದಾರೆ

02/03/2026 11:42 AM1 Min Read

ALERT : `MRP’ಗಿಂತ ಹೆಚ್ಚಿನ ಬೆಲೆಗೆ ವಸ್ತು ಮಾರಾಟ ಮಾಡಿದ್ರೆ ಬೀಳುತ್ತೆ ಭಾರಿ ದಂಡ : ಗ್ರಾಹಕರೇ ಜಸ್ಟ್ ಹೀಗೆ ದೂರು ನೀಡಿ !

02/03/2026 10:51 AM1 Min Read

ರಾಜ್ಯದ ಜನರೇ ಎಚ್ಚರ : ಹೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ಹಣ ವಸೂಲಿ : ನಕಲಿ ಬಿಲ್ ಕಲೆಕ್ಟರ್‌ ಗೆ ಸಾರ್ವಜನಿಕರಿಂದ ಧರ್ಮದೇಟು!

02/03/2026 10:43 AM1 Min Read
Recent News

ಭಾರತದಲ್ಲಿ ಜನವರಿಯಲ್ಲಿ 81 ಲಕ್ಷಕ್ಕೂ ಅಧಿಕ `Whats App’ ಖಾತೆಗಳು ಬ್ಯಾನ್ ! ಕಾರಣವೇನು ಗೊತ್ತಾ?

02/03/2026 11:50 AM

ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತ: ಇರಾನ್ ಯುದ್ಧಕ್ಕೆ 7.8 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು | Share market crashes

02/03/2026 11:42 AM

ಉದ್ಯೋಗಾವಕಾಶ: ‘ಕನ್ನಡ ನ್ಯೂಸ್ ನೌ’ನಲ್ಲಿ ವೆಬ್ ಸ್ಟೋರಿ ತಯಾರಕರು ಬೇಕಾಗಿದ್ದಾರೆ

02/03/2026 11:42 AM

ಯುದ್ಧದ ಭೀತಿ: ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ಪ್ರಜೆಗಳಿಗೆ ಕೇಂದ್ರದಿಂದ ತುರ್ತು ಭದ್ರತಾ ಸಲಹೆ

02/03/2026 11:29 AM
State News
KARNATAKA

ಉದ್ಯೋಗಾವಕಾಶ: ‘ಕನ್ನಡ ನ್ಯೂಸ್ ನೌ’ನಲ್ಲಿ ವೆಬ್ ಸ್ಟೋರಿ ತಯಾರಕರು ಬೇಕಾಗಿದ್ದಾರೆ

By kannadanewsnow5702/03/2026 11:42 AM KARNATAKA 1 Min Read

ಬೆಂಗಳೂರು: ಪ್ರತಿಷ್ಠಿತ ಸುದ್ದಿ ಸಂಸ್ಥೆಯಾದ ‘ಕನ್ನಡ ನ್ಯೂಸ್ ನೌ’ (Kannada News Now) ತನ್ನ ವೆಬ್‌ಸೈಟ್‌ಗಾಗಿ ಅರೆಕಾಲಿಕ (Part-time) ಕೆಲಸ…

ALERT : `MRP’ಗಿಂತ ಹೆಚ್ಚಿನ ಬೆಲೆಗೆ ವಸ್ತು ಮಾರಾಟ ಮಾಡಿದ್ರೆ ಬೀಳುತ್ತೆ ಭಾರಿ ದಂಡ : ಗ್ರಾಹಕರೇ ಜಸ್ಟ್ ಹೀಗೆ ದೂರು ನೀಡಿ !

02/03/2026 10:51 AM

ರಾಜ್ಯದ ಜನರೇ ಎಚ್ಚರ : ಹೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ಹಣ ವಸೂಲಿ : ನಕಲಿ ಬಿಲ್ ಕಲೆಕ್ಟರ್‌ ಗೆ ಸಾರ್ವಜನಿಕರಿಂದ ಧರ್ಮದೇಟು!

02/03/2026 10:43 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.