ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಏಕಾದಶಿ ದಿನದಂದು ಉಪವಾಸ ಮಾಡಿ ವಿಷ್ಣು ವನ್ನು ಆರಾಧಿಸಿದರೆ ಏಳೇಳು ಜನ್ಮಗಳ ಪಾಪ ಕಳೆದು, ಪಿತೃ ದೋಷ ನಿವಾರಣೆ ಆಗಿ ಮೋಕ್ಷ ಸಂಪಾದಿಸುವ ಪುಣ್ಯ ದಿನವೇ ವೈಕುಂಠ ಏಕಾದಶಿ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮೊದಲು ಪ್ರತಿ ವರ್ಷ ಬರುವ ಈ ಏಕಾದಶಿಯನ್ನು “ವೈಕುಂಠ ಏಕಾದಶಿ” ಎಂದು ಕರೆಯಲಾ ಗುತ್ತದೆ ತಾಯಿ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರಾಗಿ ಮುಕ್ಕೋಟಿ ದೇವತೆಗಳೊಂದಿಗೆ ಗರುಡ ವಾಹನನಾಗಿ ಭೂಲೋಕಕ್ಕೆ ಬಂದು ಭಕ್ತರಿಗೆ ದರ್ಶನ ಕೊಡುವ ಪುಣ್ಯ ದಿನ. ಆದ್ದರಿಂದ ಏಕಾದಶಿಯನ್ನು ‘ಮುಕ್ಕೋಟಿ ಏಕಾದಶಿ’ ಎಂದು ಕರೆಯುತ್ತಾರೆ. ಈ ಶುಭದಿನ ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಈ ‘ಏಕಾದಶಿ’ ಯಂದು ವಿಷ್ಣುಗೆ ಸಂಬಂಧಪಟ್ಟ ದೇವಾಲಯಗಳಲ್ಲಿ ಉತ್ತರ ದ್ವಾರಕ್ಕೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಈ ಮೂಲಕ ಭಕ್ತರಿಗೆ ಉತ್ತರ ದ್ವಾರದ ಮೂಲಕ ಭಗವಂತನ ದರ್ಶನ ಕಲ್ಪಿಸಿರುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಇಂದು ಸೂರ್ಯೋದಯಕ್ಕೂ ಮೊದಲೇ ಎದ್ದು ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿ, ವೆಂಕಟೇಶ್ವರ ಅಥವಾ ಕೃಷ್ಣನ ಫೋಟೋ ಅಥವಾ ವಿಗ್ರಹ ಇಟ್ಟು ಪೂಜೆ ಮಾಡಬೇಕು. ನೈವೇದ್ಯಕ್ಕೆ ತುಪ್ಪ ಸಕ್ಕರೆ ಅಥವಾ ಬೆಲ್ಲ ಹಾಕಿ ಕಾಯಿ ಕಲಸಿದ ಅವಲಕ್ಕಿ, ಅಥವಾ ಸಜ್ಜಿಗೆ, ಪ್ರಸಾದವಾಗಿಯೂ ಹಣ್ಣು- ಏರಿಸಲು ಸುಗಂಧ ಭರಿತ ಬಿಳಿ ಹೂವು ಇರಬೇಕು. ವೈಕುಂಠ ಏಕಾದಶಿಯ ಉಪವಾಸದ ವಿಶೇಷತೆ ಎಂದರೆ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಲ್ಲಿ ವ್ರತ ಉಪವಾಸ ಮಾಡದೆ ಇದ್ದವರು ಈ ಒಂದು ದಿನ ಮಾಡಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಧನುರ್ಮಾಸದಲ್ಲಿ ಬಂದಿರುವುದು ಹೆಚ್ಚಿನ ಮಹತ್ವ ಪಡೆದಿದೆ. ಇಂದು ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧ ದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮ ವನ್ನು ಯುಧಿಷ್ಠಿರನಿಗೆ ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ ಆದ್ದರಿಂದ ಇದನ್ನು ‘ಮೋಕ್ಷದ’ ಮತ್ತು ಪುತ್ರದಾ ಏಕಾದಶಿ ಎಂದೂ ಕರೆಯುತ್ತಾರೆ.
ಕಥೆ 1.ದ್ವಾಪರದಲ್ಲಿ ಶ್ರೀ ಕೃಷ್ಣನು ಗೋಪಾಲಕರಿಗೆ ವೈಕುಂಠ ದರ್ಶನ ಮಾಡಿಸಿದ.
ಗೋಕುಲದಲ್ಲಿ ಕೃಷ್ಣನ ತಂದೆ ನಂದಗೋಪ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದನು. ಒಮ್ಮೆ ಏಕಾದಶಿ ವ್ರತವನ್ನು ಆಚರಿಸಿ ಮರುದಿನ ದ್ವಾದಶಿ ಪಾರಣೆ ಮಾಡಬೇಕಿತ್ತು. ಅಂದು ದ್ವಾದಶಿ ಸ್ವಲ್ಪವೇ ಇತ್ತು. ಬೇಗ ಸ್ನಾನ ಮಾಡಿ, ಪೂಜಾ ಕಾರ್ಯಗಳನ್ನು ಮುಗಿಸಿ ಪಾರಣೆ ಮಾಡಬೇಕೆಂದು, ಬೆಳಗಿನ ಜಾವಕ್ಕೂ ಮೊದಲೇ ಯಮುನಾ ನದಿಗೆ ಸ್ನಾನಕ್ಕೆ ಹೋದನು. ಅದು ರಾಕ್ಷಸರು ಸಂಚಾರ ಮಾಡುವ ಸಮಯವಾಗಿತ್ತು. ನಂದಗೋಪ ನೀರಿನಲ್ಲಿ ಮುಳುಗಿದಾಗ ‘ವರುಣ’ ಎಂಬ ರಾಕ್ಷಸನ ಸೇವಕ ನಂದಗೋಪನನ್ನು ಹೊತ್ತೊಯ್ದು ವರುಣನಿಗೆ ಒಪ್ಪಿಸು ತ್ತಾನೆ. ಇತ್ತ ಗೋಕುಲದಲ್ಲಿ ಯಮುನೆಯಲ್ಲಿ ಸ್ನಾನಕ್ಕೆ ಹೋಗಿದ್ದ ನಂದಗೋಪಾಲ ಇನ್ನೂ ಬಂದಿಲ್ಲವೆಂದು ಊರು ತುಂಬಾ ಹರಡಿತು. ಚಿಂತಿತರಾದ ಗೋಪಾಲಕರು ಬಲರಾಮನಿಗೆ ಹೇಳಿದರು.
ಈ ವಿಷಯ ಶ್ರೀ ಕೃಷ್ಣನಿಗೆ ತಿಳಿಯಿತು. ಗೋಪಾಲಕರಿಗೆ ಚಿಂತೆ ಮಾಡಬೇಡಿ ನನ್ನ ತಂದೆಯನ್ನು ಕರೆದು ತರುತ್ತೇನೆ ಎಂದು ವಚನ ಕೊಡುತ್ತಾನೆ. ನಂತರ ವರುಣ ಲೋಕಕ್ಕೆ ಬರುತ್ತಾನೆ. ವರುಣ ಲೋಕದಲ್ಲಿ ಶ್ರೀ ಕೃಷ್ಣನನ್ನು ಕಂಡ ವರುಣ ಮತ್ತು ರಾಕ್ಷಸರೆಲ್ಲ ನಮಸ್ಕಾರ ಮಾಡಿ, ಪ್ರಾರ್ಥಿಸಿ, ಶ್ರೀ ಕೃಷ್ಣನಿಗೆ ವಿಶೇಷ ಆಧಾರಾಥಿತ್ಯ ಮಾಡಿ ಗೌರವಿಸಿದರು. ಹಾಗೆ ವರುಣ ರಾಕ್ಷಸ ತನ್ನ ಸೇವಕನು ತಿಳಿಯದೆ ಮಾಡಿದ ಕೃತ್ಯಕ್ಕಾಗಿ ಕೃಷ್ಣ ನಲ್ಲಿ ಕ್ಷಮೆ ಯಾಚಿಸುತ್ತಾನೆ. ತೃಪ್ತಿ ಹೊಂದಿದ ಕೃಷ್ಣನು ತನ್ನ ವಿವಿಧ ರೂಪಗಳಲ್ಲಿ ದರ್ಶನ ಕೊಟ್ಟು ವರುಣನನ್ನು ಕ್ಷಮಿಸಿ ಆಶೀರ್ವದಿಸಿ ತನ್ನ ತಂದೆ ಯನ್ನು ಕರೆದುಕೊಂಡು ಯಮನೆಯ ದಡಕ್ಕೆ ಬಂದನು.
ನಂದಗೋಪನು ವರುಣ ಲೋಕದಲ್ಲಿ ಕಂಡ ದೃಶ್ಯವನ್ನು, ಹಾಗೆ ಕೃಷ್ಣ ವಿವಿಧ ರೂಪಗಳ ದರ್ಶನ ಕೊಟ್ಟಿದ್ದು, ಅಲ್ಲಿನ ಅತಿಥಿಸತ್ಕಾರ- ಕೃಷ್ಣನಿಗೆ ಮಾಡಿದ ಉಪಚಾರ ಎಲ್ಲವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವುದನ್ನು ಭಕ್ತಿಯಿಂದ ಕೇಳಿದ ಗೋಪಾಲಕರು, ತಮಗೆ ಮಾತ್ರ ಕೃಷ್ಣನ ವಿವಿಧ ರೂಪದ ದರ್ಶನ ಭಾಗ್ಯ ಇಲ್ಲ ವಾಯಿತು ಎಂದು ಬೇಸರಿಸಿಕೊಂಡರು. ಇದನ್ನು ತಿಳಿದ ಶ್ರೀ ಕೃಷ್ಣ ಗೋಪಾಲ ಕರಿಗೆ ಹೇಳಿದ ಯಮುನಾ ತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರಲು ಹೇಳಿದನು. ಎಲ್ಲಾ ಗೋಪ ಬಾಲಕರು ಯಮುನೆಯ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬಂದರು ಕೃಷ್ಣ ಗೋಪ ಬಾಲಕರಿಗೆಲ್ಲ ತನ್ನ ವಿವಿಧ ರೂಪಗಳ ದರ್ಶನ ಮಾಡಿಸಿದನು. ಹೀಗೆ ಗೋಪ ಬಾಲಕರು ಶ್ರೀ ಕೃಷ್ಣನ ದಿವ್ಯ ರೂಪದ ದರ್ಶನವನ್ನು ತೋರಿಸಿದ್ದು, ಇಂದಿನ ‘ಭೂ ವೈಕುಂಠ ಎಂದು ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ತಿರುಪತಿಯಲ್ಲಿ. ಗೋಪಾಲಕ ರಿಗೆ ಶ್ರೀ ಕೃಷ್ಣನು ದಿವ್ಯ ದರ್ಶನ ತೋರಿದ್ದು “ವೈಕುಂಠ ಏಕಾದಶಿ” ಯಂದು, ಹೀಗಾಗಿ ಭೂ ವೈಕುಂಠದಲ್ಲಿ ನೆಲೆಸಿರುವ ತಿರುಪತಿ ತಿಮ್ಮಪ್ಪ (ಶ್ರೀನಿವಾಸನ) ದರ್ಶನದ ಪುಣ್ಯ ಪಡೆದವರಿಗೆ ಪುತ್ರ-ಪೌತ್ರಾದಿ-ಸಂಪತ್ತು ಅಭಿವೃದ್ಧಿ- ಆರೋಗ್ಯ- ಭಾಗ್ಯ ಸೇರಿದಂತೆ ಸಕಲವನ್ನು ಕರುಣಿಸುವನು.
ಎಲ್ಲಾ ಏಕಾದಶಿಯಂತೆ ದಿನಪೂರ್ತಿ ಉಪವಾಸ ಆಗದೆ ಇದ್ದವರು, ಒಪ್ಪತ್ತು ಫಲಹಾರ-ರಾತ್ರಿ ಹಣ್ಣು- ಹಾಲು ಸೇವಿಸಬಹುದು. ಇನ್ನೊಂದು ವಿಷಯ ಅಂದರೆ ‘ಏಕಾದಶಿ’ ಆಚರಣೆ ಮಾಡದೇ ಇದ್ದವರು ಸಹ “ಆಷಾಡ ಮಾಸ”ದಲ್ಲಿ ಬರುವ “ಪ್ರಥಮ ಏಕಾದಶಿ” ಮತ್ತು (ಈಗ ಬಂದಿರುವ) ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದಲ್ಲಿ ಬಂದಿರುವ, ಪುತ್ರದಾ- ಮೋಕ್ಷದ ಅಥವಾ ವೈಕುಂಠ ಏಕಾದಶಿಯನ್ನು ತಪ್ಪದೇ ಆಚರಿಸುತ್ತಾರೆ. ಮಹಾವಿಷ್ಣುವನ್ನು ಹೂವು ತುಳಸಿ ಪತ್ರೆಗಳಿಂದ ಪೂಜಿಸಿ ಹಣ್ಣುಗಳನ್ನು ನಿವೇದನೆ ಮಾಡಬೇಕು. ವಿಷ್ಣು ಸಹಸ್ರನಾಮ ಓದಬೇಕು. (ವಿಷ್ಣು ಅಂದರೆ ವಿಷ್ಣು- ರಾಮ- ಕೃಷ್ಣ- ನರಸಿಂಹ ಯಾವುದೇ ಫೋಟೋ ಅಥವಾ ವಿಗ್ರಹಕ್ಕೆ ಪೂಜಿಸುತ್ತಾರೆ. “ ಓಂ ನಮೋ ಭಗವತೇ ವಾಸುದೇವಾಯ” ಈ ತಾರಕ ಮಂತ್ರವನ್ನು ಎಷ್ಟು ಸಾಧ್ಯವೊ ಅಷ್ಟು ಪಠಿಸಬೇಕು. ಉಳಿದ ನಿಯಮಗಳು ಎಲ್ಲಾ ಏಕಾದಶಿಯಂತೆ ಆಚರಿಸಬೇಕು.
ಕಥೆ 2. ‘ಪುತ್ರದ’ ಏಕಾದಶಿ ಪೌರಾಣಿಕ ಕತೆ:- ಪುತ್ರದ ಏಕಾದಶಿ ಅಂದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ಒಮ್ಮೆ ಯುಧಿಷ್ಠಿರ ಹೀಗೆ ವೈಕುಂಠ ಏಕಾದಶಿ ಕುರಿತಾಗಿ ತಿಳಿಸುವಂತೆ ಕೃಷ್ಣನನ್ನು ಕೇಳಿದ. ಪುಷ್ಯ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಈ ಏಕಾದಶಿಯನ್ನು ಪುತ್ರದ ಏಕಾದಶಿ ಎಂದು ಕರೆಯುತ್ತಾರೆ. ಇದಕ್ಕೆ ಪುರಾಣ ಕಥೆ
ಒಂದಿದೆ. ಹಿಂದೆ ಭದ್ರಾಪುರ ಎಂಬ ನಗರದಲ್ಲಿ ಸುಕೇತು ಎಂಬ ರಾಜ ಇದ್ದನು ಅವನ ಹೆಂಡತಿ ಚಂಪಕ. ಇವರಿಗೆ ವಿವಾಹವಾಗಿ ಬಹಳ ಕಾಲವಾದರೂ ಮಕ್ಕಳಾ ಗಲಿಲ್ಲ. ಬಹಳಷ್ಟು ವ್ರತ ಪೂಜೆ ನಿಯಮಗಳನ್ನು ಮಾಡಿದರೂ ಮಕ್ಕಳಾಗಲಿಲ್ಲ. ಒಮ್ಮೆ ರಾಜ ಪಿತೃ ತರ್ಪಣ ಬಿಡುವಾಗ ನೀರು ಬಿಸಿ ಎನಿಸಿತು. ರಾಜನಿಗೆ ಮಕ್ಕಳಿಲ್ಲ ದ ಮೇಲೆ ಮುಂದೆ ತರ್ಪಣ ಬಿಡುವವರು ಇಲ್ಲದೆ ಹಿರಿಯರು ಪ್ರೇತಗಳಾಗಿ ಸಂಚರಿ ಸುತ್ತಾರೆ ಎಂಬ ಚಿಂತೆ ಕಾಡಿತು. ಒಬ್ಬ ವಾರಸುದಾರ ಇರಬೇಕಿತ್ತು ಎಂದು ಚಿಂತಿಸಿ ಪ್ರಾಣ ಕಳೆದುಕೊಳ್ಳಲು ಹೊರಟಿದ್ದ . ಆದರೆ ವಿವೇಕ ಅವನನ್ನು ತಡೆಯಿತು. ಕೊನೆಗೆ ಬೇಸತ್ತು ಆತ ರಾಜ್ಯ ಸಂಪತ್ತು ಎಲ್ಲವನ್ನು ಬಿಟ್ಟು ಕುದುರೆ ಹತ್ತಿ ಒಬ್ಬನೇ ಕಾಡಿಗೆ ಹೋದನು. ದಿಕ್ಕು ಕೆಟ್ಟವನಂತೆ ಕಾಡಿನೊಳಗೆ ಹೋಗುತ್ತಿದ್ದನು. ಪ್ರಾಣಿ- ಪಕ್ಷಿಗಳು ಅವುಗಳ ಮರಿಗಳೊಂದಿಗೆ ಸುಖವಾಗಿ ಜೀವಿಸುವುದನ್ನು ನೋಡಿದನು ತನಗೆ ಮಕ್ಕಳ ಸೌಭಾಗ್ಯ ಇಲ್ಲ ಎಂದು ಮರುಗಿದನು. ಕಾಡಿನ ಸಮೀಪ ಬಂದನು. ಅವನಿಗೆ ಬಹಳ ಬಾಯಾರಿಕೆ ಆಗಿತ್ತು. ಕಣ್ಣಾಡಿಸಿದಾಗ ಒಂದು ಆಶ್ರಮ ಇದ್ದು ಅಲ್ಲಿಗೆ ಹೋಗಲು ಹೊರಟನು ಹೋಗುವಾಗ ಒಂದು ಪುಷ್ಕರಣಿ ಇದ್ದು ಅಲ್ಲಿ
ಕೆಲವು ಋಷಿಗಳು ಸ್ನಾನ ಧ್ಯಾನ ತಪ ಮಾಡುತ್ತಿದ್ದರು.
ಅವರ ಮುಂದೆ ಹೋಗಿ ಕುಳಿತನು. ಅವರಿಗೆ ನಮಸ್ಕರಿಸಿ ತಾವೆಲ್ಲ ಯಾರು ಎಲ್ಲಿಂದ ಬಂದಿರುವಿರಿ ಎಂದು ಕೇಳಿದನು.
ಅವರು ಹೇಳಿದರು ನಾವು ಒಟ್ಟು 10 ಜನ ನಮ್ಮನ್ನು ‘ವಿಶ್ವ’ ದೇವತೆಗಳು ಎನ್ನುತ್ತಾರೆ. ‘ಧರ್ಮ’ ಎಂಬ ಮುನಿಯ ಮಕ್ಕಳು. ದಕ್ಷನ ಪುತ್ರಿ ‘ವಿಶ್ವ’ ನಮ್ಮ ತಾಯಿ. ಇಂದು ಏಕಾದಶಿ ನಾವು ಭೂಲೋಕದಲ್ಲಿ ಈ ಪುಷ್ಕರಣಿಯಲ್ಲಿ ಸ್ನಾನ ಮಾಡಲು ಬಂದಿದ್ದೇವೆ. ಆಗ ರಾಜ, ಮಹರ್ಷಿಗಳಲ್ಲಿ ಸ್ವಾಮಿ ನನಗೆ ಸಂತಾನವಿಲ್ಲ ನಾನು ಬೇಸರದಿಂದ ಇಲ್ಲಿಗೆ ಕಾಡಿಗೆ ಬಂದಿರುವೆ ಎಂದವು. ಋಷಿಗಳೆಲ್ಲ ರಾಜನಿಗೆ ಆಶೀರ್ವದಿಸಿ, ನೀನು ಈ ದಿನ ನಮ್ಮೊಂದಿಗೆ ಏಕಾದಶಿ ವ್ರತ ಮಾಡು ಎಂದರು. ಅದರಂತೆ ಸುಕೇತು ರಾಜ ಅವರ ಜೊತೆಗೂಡಿ ಪುತ್ರದ ಏಕಾದಶಿ ವ್ರತವನ್ನು ನಿಷ್ಠೆಯಿಂದ ಮಾಡಿ ರಾತ್ರಿ ಜಾಗರಣೆ ಮಾಡಿ ದನು. ಮರುದಿನ ದ್ವಾದಶಿ ಪಾರಣೆಯನ್ನು ಅಲ್ಲೇ ಮಾಡಿದನು. ಅವರ ಆಶೀರ್ವಾದ ಪಡೆದು ರಾಜ್ಯಕ್ಕೆ ಬಂದನು.
ಕೆಲ ಕಾಲದಲ್ಲಿ ಅವನಿಗೆ ಮಗ ಜನಿಸಿ, ರಾಜ ದಂಪತಿಗಳು ಸಂತೋಷದಿಂದ ಇದ್ದರು. ಮುಂದೆ ಅವರು ಮಗನಿಗೆ ರಾಜ್ಯದ ಜವಾಬ್ದಾರಿ ವಹಿಸಿದರು. ಸತ್ಯ ಧರ್ಮ ನಿಷ್ಠನಾಗಿ ರಾಜ್ಯಭಾರ ಮಾಡಿದನು. ಅವನು ಸಹ ತಂದೆಯಂತೆ ಪುತ್ರದ ಏಕಾದಶಿ ವ್ರತವನ್ನು ಆಚರಿಸುತ್ತಾ ಬಂದನು. ಏಕಾದಶಿ ವ್ರತದಿಂದ ಇಹಪರದಲ್ಲಿ ಸುಖದಿಂದ ಬದುಕಿ ಮುಂದೆ ಮೋಕ್ಷ ಪಡೆವರು.
ಈ ಕಾರಣದಿಂದಲೇ ಇದಕ್ಕೆ “ಪುತ್ರದಾ” ಏಕಾದಶಿ ಎಂದು ಕರೆಯಲಾಗಿದೆ. ಇಂಥ ಕಥೆ ಹೇಳಿದನು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವೈಕುಂಠ ಏಕಾದಶಿ ದಿನ ಏಕಾದಶಿ ವ್ರತ ಮಾಡುವವರು, ಅಲ್ಪ ಉಪಹಾರ ಸೇವಿಸುವವರು, ಅನಿವಾರ್ಯವಾಗಿ ಮಾಡದೆ ಇದ್ದವರೂ ‘ವ್ರತ ಕಥೆ’ ಕೇಳಿದರೆ “ಅಶ್ವಮೇಧಯಾಗದ” ಪುಣ್ಯ ದೊರೆಯುವುದು. ವೈಕುಂಠ ಏಕಾದಶಿ – ಪಾಪಕ್ಷಯ, ಪಿತೃ ತೃಪ್ತಿ ಮತ್ತು ಮೋಕ್ಷದ ದ್ವಾರ ತೆರೆಯುವ ಅಪೂರ್ವ ಪುಣ್ಯದಿನ.
ಒಂದು ತುಳಸಿ ಪತ್ರೆಯೊಂದಿಗೆ ಮಾಡಿದ ಭಕ್ತಿಪೂಜೆಯೂ ಸಾವಿರ ಯಾಗಗಳ ಫಲ ನೀಡುತ್ತದೆ ಎಂಬ ನಂಬಿಕೆ ಇದೆ.
ಈ ಪವಿತ್ರ ದಿನ ನಿಮ್ಮ ಜೀವನದಲ್ಲಿ ಶಾಂತಿ, ಆರೋಗ್ಯ, ಸೌಭಾಗ್ಯ ಮತ್ತು ವಿಷ್ಣುಕೃಪೆ ಸದಾ ನೆಲೆಸಲಿ.
ಸಂಕಷ್ಟ ನಾಶನ ವಿಷ್ಣು ಸ್ತೋತ್ರಂ:-
(ಪದ್ಮ ಪುರಾಣಾಂತರ್ಗತಂ)
ನಾರದ ಊವಾಚ !
ಪುನರ್ದೈತ್ಯಂ ಸಮಾಯಾಂತಂ
ದೃಷ್ಟ್ವಾ ದೇವಾ: ಸವಾಸವಾ: !
ಭಯಪ್ರಕಂಪಿತಾ: ಸರ್ವೇ
ವಿಷ್ಣು ಸ್ತೋತುಂ ಪ್ರಚಕ್ರಮು:
ದೇವಾ: ಊಚೂ: !









