ಬೆಂಗಳೂರು : ಬೆಂಗಳೂರಿನ ಎಸ್‌ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಮುಖ್ಯ ರಸ್ತೆಯಲ್ಲಿ ಹಲವಾರು ಕಿಲೋಮೀಟರ್‌ಗಳ ಕಾಲ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಅಭಿನವ್ ವಾಸುದೇವನ್ ಅವರು ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಡಿಸೆಂಬರ್ 24ರ ರಾತ್ರಿ ಸಿಲ್ಕ್ ಬೋರ್ಡ್ ಜಂಕ್ಷನ್’ನಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನ ಸ್ಕೂಟಿಯಲ್ಲಿದ್ದ ಮೂವರು ಪುರುಷರು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡುತ್ತಿರುವುದನ್ನ ಕಾಣಬಹುದು. ಗೇರ್‌ಲೆಸ್ ಸ್ಕೂಟರ್’ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದ ಯುವಕರು ಮಹಿಳಾ ವಾಹನ ಚಾಲಕಿಯ ಬಳಿ ಅಪಾಯಕಾರಿಯಾಗಿ ಚಲಿಸುತ್ತಿರುವುದನ್ನ ದೃಶ್ಯಗಳು ತೋರಿಸುತ್ತವೆ.
regarding this post-
Suitable legal action has been taken. An FIR has been registered, the accused persons have been arrested and remanded to judicial custody.— SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ (@sgpalyaps) December 27, 2025
BIG NEWS : ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮೀ’ ಹಣ ಜಮೆಯಾಗದಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!








