ತುಮಕೂರು: ಅರ್ಹತೆ ಇದ್ದರೂ ಇದ್ದ ಜಾತಿ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡದೇ ವಂಚಿಸಲಾಗುತ್ತಿದೆ, ಅರ್ಹತೆ ಇರುವ ಅದೆಷ್ಟು ಮಂದಿ ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಅಸ ಮಾಧಾನ ವ್ಯಕ್ತಪಡಿಸಿದರು.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ “ತಲ್ಲಣ ಸದಿರುವ ಮನವೇ” ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಅನುಭವಿಸುವ ನೋವು, ಸಂಕಷ್ಟಗಳ ಬಗ್ಗೆ ಮಾತನಾಡದಿರುವುದು, ಯಾವ ಭಾ ರತೀಯತೆ ಎಂದು ಪ್ರಶ್ನಿಸಿದರು.
ದೇಶದ ಸ್ವಾತಂತ್ರ, ಸಮಾನತೆಗಾಗಿ ಹೋರಾಟ ಮಾಡಿದ ಗಾಂಧೀಜಿಯ ಹೆಸರನ್ನು ಹೇಳಲು ಹಿಂಜರಿಯು ವಂ ತಹ ಮಟ್ಟಕ್ಕೆ ಇಳಿದಿದ್ದೇವೆ. ಇದು ಯಾವ ಭಾರತ ಬುದ್ದ, ಬಸವ, ಗಾಂಧಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತಿದ್ದೇವೆಯೇ ಹೊರತು ಅದನ್ನು ಅನುಸ ರಿಸುತ್ತಿಲ್ಲ ವಿದ್ಯಾವಂತರು, ಪದವಿಧರರ ಸಂಖ್ಯೆ ಹೆಚ್ಚಾ ದಂತೆ ಅಸಮಾನತೆ ತೊಲಗಬೇಕಿತ್ತು ಆದರೆ ಮತ್ತೊಂದು ರೂಪದಲ್ಲಿ ನಮ್ಮೊಳಗೆ ಬೇರೂರುತ್ತಿದೆ ಎಂದರು.
ಸಮಾಜದಲ್ಲಿ ಸಮಾನತೆತರಲು ಹಲವರು ನಿರಂತರ ವಾಗಿ ಶ್ರಮಿಸಿದ್ದಾರೆ. ಅವರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠ ಸಹ ಒಂದು ಹೆಜ್ಜೆ ಮುಂದಿರಿಸಿದೆ. ಇದು ಕಠಿಣ ಹಾದಿ,ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚ ಬೇಕು.ನಮ್ಮಲ್ಲಿ ಆದರ್ಶಗಳಿಗೆ, ವಿಚಾರಧಾರೆಗಳಿಗೆ ಕೊ ರತೆಯಿಲ್ಲ.ಆದರೆ ಅವುಗಳನ್ನು ಪಾಲಿಸುತ್ತಿಲ್ಲ.ಮನು ಆ್ಯತ್ವ, ಮಾನವೀಯತೆ ಕಲಿಸುವ ಕೆಲಸ ಆಗಬೇಕು. ಸಮಾಜದ ಪರಿವರ್ತನೆಯಲ್ಲಿ ತೊಡಗುವವರನ್ನು ನಾನು ಎಂದಿಗೂ ಗೌರವಿಸುತ್ತೇನೆ.ಹಾಗಾಗಿ ಕಾಗಿನೆಲೆ ಗುರುಪೀಠದ ಎಲ್ಲಾ ಕಾರ್ಯಗಳಿಗೆ ಬೆಂಬಲವಿದೆಎಂದರು.
ಪ್ರಸ್ತುತ ಭಾರತ ಮತ್ತುಗಾಂಧೀ ಚಿಂತನೆಗಳ ಪ್ರಸುತ್ತತೆ ಎಂಬ ವಿಷಯಕುರಿತು ಮಾತನಾಡಿದ ಪತ್ರಕರ್ತ ದಿ ನೇಶ್ ಅಮೀನಮಟ್ಟು, ಒಂದುಕಾಲದಲ್ಲಿ ಭಾರತದ ರಾಜಕೀಯ ಸ್ವಾತಂತ್ರ,ಗ್ರಾಮ ಸ್ವರಾಜ್, ಅಸ್ಪೃಷ್ಯತೆ ನಿ ವಾರಣೆ, ಕೋಮು ಸೌಹಾರ್ಧತೆಗಾಗಿ ಹೋರಾಟ ಮಾಡಿದ ಗಾಂಧೀಜಿ, ಇಂದು ಯಾರಿಗೂ ಬೇಡದ ನಾ ಯಕನಾಗಿದ್ದಾರೆ ಎಂದರು.
1927ರಲ್ಲಿ ಅತಿ ಅಸಮಾನತೆಯಿಂದಕೂಡಿದ ಮನು ಸೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿ, ಅದರ ಸ್ಥಾನ ದಲ್ಲಿ ಸಂವಿಧಾನವನ್ನುತಂದು,ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕನಸು ಕಂಡರು.ಆದರೆ ಮನುಸೃತಿಯನ್ನು ಮತ್ತೆ ಹುಟ್ಟು ಹಾಕುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆಎಂದು ಕಳವಳ ವ್ಯಕ್ತಪಡಿಸಿದರು.
ಕನಕದಾಸರ ಸಾಮಾಜಿಕ ಮತ್ತು ಅಧ್ಯಾತ್ಮಿಕತೆಗಳ ಅನುಸಂಧಾನ ಎಂಬ ವಿಷಯ ಮಂಡಿಸಿ ಮಾತನಾಡಿದ ಪ್ರೊ.ನಾಗೇಂದ್ರಕುಮಾರ್ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಡಾ.ರಮಣ್ ಹುಲಿನಾಯ್ಕರ್ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮಿಜೀ ಆಶೀರ್ವಚನ ನೀಡಿದರು.ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠದ ಶ್ರೀನಿರಂಜನಾನಂದ ಪುರಿ ಸ್ವಾಮೀಜಿಗಳ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತ್ತು. ವೇದಿಕೆಯಲ್ಲಿಡಾ.ಎಂ.ಆರ್ವ.ಹುಲಿನಾಯ್ಕರ್, ಶಾಂತದುರ್ಗಾದೇವಿ ಹುಲಿನಾಯ್ಕರ್, ತಲ್ಲಣಿಸದಿರುವ ಮನವೇ ಕಾರ್ಯಕ್ರಮದ ಸಂಚಾಲಕರಾದ ಡಾ.ಮಂಜಪ್ಪ ಮಾಗೋಡಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಕೃಪೆ: ಪ್ರಜಾಕಹಳೆ ತುಮಕೂರು ಕನ್ನಡ ದಿನ ಪತ್ರಿಕೆ
ಸಂಪಾದಕರು: ರಘು ಎ.ಎನ್








