ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆ ಸುವ್ಯವಸ್ಥೆ ಕುರಿತು ಸರ್ಕಾರ ಕೈಗೊಂಡ ಸರಳ ಕ್ರಮಗಳು ಈ ಕೆಳಕಂಡಂತಿವೆ.
1) ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದು ಸಕಾಲ ಸೇವೆಯ ಕಾರ್ಯ ವ್ಯಾಪ್ತಿಗೆ ಸೇರ್ಪಟ್ಟಿದ್ದು, 45 ದಿನಗಳೊಳಗೆ ಅರ್ಜಿದಾರರು ದಾಖಲಾತಿಗಳನ್ನು ನಿಯಮಗಳ ಪಕಾರ ಎಲ್ಲಾ ನೀಡಬೇಕಾಗಿರುತ್ತದೆ. ಅವರು ಒದಗಿಸಿದ್ದಲ್ಲಿ
2) ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು (ತೆರಿಗೆ ನಿರ್ಧರಣೆ ಪಟ್ಟಿ) ವಿತರಿಸಲು ಗ್ರಾಮ ಪಂಚಾಯತಿ ಸಭೆಯ ಅನುಮೋದನೆ ಅಗತ್ಯವಿದ್ದು, ಮೊದಲು ಬಂದ ಅರ್ಜಿಯನ್ನು ಸ್ವೀಕೃತಿ ದಿನಾಂಕದ ಆಧಾರದ ಮೇಲೆ ជ ជ (First In First Out-FIFO) ಕ್ರಮ ವಹಿಸುವಂತೆ ಹಾಗೂ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸುವುದು ಮತ್ತು ವಿಲೇ ಇಡದಂತೆ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ.
3) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಅವಶ್ಯಕವಾಗಿರುವ ದಾಖಲೆಗಳ ಚೆಕ್ಲಿಸ್ಕೃಳನ್ನು ಗ್ರಾಮ ಪಂಚಾಯತಿಗಳ ಸೂಚನಾ ಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಬಗ್ಗೆ ಕ್ರಮ ವಹಿಸುವಂತೆ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದೆ.
4) ತಂತ್ರಾಂಶದ ಬಳಕೆ ಬಗ್ಗೆ ಗ್ರಾಮ ಪಂಚಾಯಿತಿಗಳ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.
5) ಸರ್ಕಾರದ ಆದೇಶ ಸಂಖ್ಯೆ: RDPR 370 GPA 2025, 2:17-05-2025 0 2025-26 ಆಯವ್ಯಯ ಭಾಷಣದ ಕಂಡಿಕೆ 272(i) ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿರುವ ಕ್ರಮಬದ್ಧ ಆಸ್ತಿಗಳಿಗೆ ನಿಗಧಿತ ನಮೂನೆ 9 ಹಾಗೂ 11 ಎ ಮತ್ತು ಕ್ರಮ ಬದ್ಧವಲ್ಲದ ಆಸ್ತಿಗಳಿಗೆ ನಿಗಧಿತ ನಮೂನೆ-11 ಬಿ ಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸಲು ‘ಇ-ಸ್ವತ್ತು ಅಭಿಯಾನ’ ವನ್ನು ಹಮ್ಮಿಕೊಳ್ಳಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.









