ಮೆಕ್ಸಿಕೋ ನಗರ: ಪೂರ್ವ ಮೆಕ್ಸಿಕೋದಲ್ಲಿ ಬಸ್ ಅಪಘಾತಕ್ಕೀಡಾದ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 32 ಜನರು ಗಾಯಗೊಂಡಿದ್ದಾರೆ ಎಂದು ವೆರಾಕ್ರಜ್ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಸ್ ಮಸ್ ಹಬ್ಬದಂದು ಜೋಂಟೆಕೊಮಾಟ್ಲಾನ್ ಪಟ್ಟಣದಲ್ಲಿ ಮೆಕ್ಸಿಕೋ ನಗರದಿಂದ ಚಿಕಾಂಟೆಪೆಕ್ ಗ್ರಾಮಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಝೊಂಟೆಕೊಮಾಟ್ಲಾನ್ ಮೇಯರ್ ಕಚೇರಿಯ ಹೇಳಿಕೆಯ ಪ್ರಕಾರ, ಬಲಿಯಾದವರಲ್ಲಿ ಒಂಬತ್ತು ವಯಸ್ಕರು ಮತ್ತು ಒಂದು ಮಗು ಸೇರಿದ್ದಾರೆ ಎಂದು ದೃಢಪಡಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಪಟ್ಟಿಯನ್ನು ಸಹ ಪ್ರಕಟಿಸಿದ್ದಾರೆ.








