ಮಂಡ್ಯ: ಚಿತ್ರದುರ್ಗದಲ್ಲಿ ಭೀಕರ ಬಸ್ ಅಪಘಾತ ಘೋರ ದುರಂತದಲ್ಲಿ ಮಂಡ್ಯ ಮೂಲದ ಯುವತಿ ಸಜೀವ ದಹನಗೊಂಡಿದ್ದಾಳೆ. ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ನವ್ಯ ಎಂಬಾಕೆಯೇ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.
ಮಂಡ್ಯ ಜಿಲ್ಲೆ ಕೆ .ಆರ್ .ಪೇಟೆ ತಾ ಅಂಕನಹಳ್ಳಿ ಗ್ರಾಮದ ನವ್ಯ ಘೋರ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಯುವತಿ ನವ್ಯ ಕುಟುಂಬ ಹಾಲಿ ಚನ್ನರಾಯಪಟ್ಟಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನವ್ಯ ಕಾರ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನಿಂದ ನೆನ್ನೆ ಬಸ್ ಹತ್ತಿ ಹೊರಟಿದ್ದರು. ರಾತ್ರಿ ನಡೆದ ಘೋರ ಬಸ್ ಅಪಘಾತದಲ್ಲಿ ನವ್ಯ ಸಜೀವ ದಹನಗೊಂಡಿದ್ದಾಳೆ. ನವ್ಯ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ; ಗಿರೀಶ್ ರಾಜ್, ಮಂಡ್ಯ
ಬೆಂಗಳೂರಿನಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು








