ಬೆಂಗಳೂರು: ಸಾಮಾಜಿ ಜಾಲತಾಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಬರುತ್ತಿರುವ ಹಿನ್ನಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇಂದು ಬೆಂಗಳೂರು ಪೊಲೀಸ್ ಅಯುಕ್ತರ ಕಚೇರಿಗೆ ಅವರು ಇಂದು ಮಧ್ಯಾಹ್ನ ಭೇಟಿ ನೀಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಅವುಗಳನ್ನು ಪಟ್ಟಿ ಮಾಡಿ ದೂರು ನೀಡಿದ್ದರು ಎನ್ನಲಾಗಿದೆ.
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವಾರ್: ಸುದೀಪ್ ನೀಡಿದ್ದ ಹೇಳಿಕೆಯೊಂದು ಬಾರಿ ಬಿರುಗಾಳಿಯನ್ನು ಎಬ್ಬಿಸಿತ್ತು, ಬಳಿಕ ವಿಜಯಲಕ್ಷ್ಮಿಕೂಡ ಹೆಸರನ್ನು ಉಲ್ಲೇಖಸದೇ ಸುದೀಪ್ ಅವರಿಗೆ ಅವಾಜ್ ಹಾಕಿದ್ದಾರೆ ಆಂತ ಸುದೀಪ್ ಅಭಿಮಾನಿಗಳು ಗುಟುರು ಹಾಕುತ್ತ ಇದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿಸಾಂಸಾರಿಕ ಜೀವನ ಕೆಟ್ಟಾಗಿ ನೆರವಿಗೆ ಬಂದದ್ದು ಸುದೀಪ್ ಅಂತ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಈ ನಡುವೆ ವಿಜಯಲಕ್ಷ್ಮಿ ಹೇಳಿದ್ದ ಹೇಳಿಕೆಗೆ ಅವರು ನನಗೆ ಹೇಳಿದ್ದರೆ, ನಾನು ನಲಪಾಡ್ ಮತ್ತು ರಾಜುಗೌಡ ಆ ಬಗ್ಗೆ ಹೇಳುತ್ತೇನೆ ಅಂತ ಹೇಳಿದ್ದರು.








