ಬೆಂಗಳೂರು : ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಹಾಗೂ ಕೃಷಿಯೇತರ ಆಸ್ತಿಗಳಿಗೆ ನಮೂನೆ 11ಎ ಮತ್ತು ನಮೂನೆ 11ಬಿ ನೀಡಲಾಗುತ್ತದೆ. ನಾಗರಿಕರು ಮನೆಯಲ್ಲೇ ಕುಳಿತು https://eswathu.karnataka.gov.in/ ಇ- ಸ್ವತ್ತು ತಂತ್ರಾಂಶ 2.0 ಮುಖಾಂತರ ಅರ್ಜಿ ಸಲ್ಲಿಸಿ.
ಇ – ಸ್ವತ್ತು ಪಡೆಯಲು ಇರುವ ಎಲ್ಲಾ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಇ – ಸ್ವತ್ತು ಸಹಾಯವಾಣಿ ಸಂಖ್ಯೆ 9483476000ಗೆ ನಾಗರಿಕರು ಕರೆ ಮಾಡಿ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025 ಜಾರಿ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಕೃಷಿಯೇತರ ಭೂಮಿಗಳಿಗೆ ಇ-ಸ್ವತ್ತು ಯೋಜನೆಯಡಿ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ ಪಡೆಯಲು ಅವಕಾಶ.
ಗ್ರಾಮೀಣ ಸ್ವತ್ತುಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣಪತ್ರ
ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆ ಸುಗಮ
ಪ್ರಮುಖ ಚಟುವಟಿಕೆಗಳು
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡದ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಏಕ ರೂಪದ/ಮಾದರಿಯ ತೆರಿಗೆ ಹಾಗೂ ಶುಲ್ಕಗಳು
ಮಾಲೀಕರು ಅಥವಾ ಅಧಿಬೋಗದಾರರ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯಿಂದ ದಾಖಲೆಗಳನ್ನು ಒದಗಿಸುವುದು.









