ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪರಸ್ಪರ ಸಹಕಾರದೊಂದಿಗೆ ಮೆಟ್ರೋ ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿವೆ. ಈ ಸೇವೆಗಳು ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿವೆ.
ಬಿಎಂಟಿಸಿ ವತಿಯಿಂದ ಆರಂಭಿಸಲಾದ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರಗಳು ಈ ಕೆಳಗಿನಂತಿವೆ:
- ಜ್ಞಾನಭಾರತಿ ಮೆಟ್ರೋ ನಿಲ್ದಾಣ – ಭಾರತ್ನಗರ 2ನೇ ಹಂತ
ಮಾರ್ಗ: ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಮುದ್ದೈಯನಪಾಳ್ಯ ಜಂಕ್ಷನ್, ಭಾರತ್ನಗರ 1ನೇ ಹಂತ, ಬ್ಯಾಡರಹಳ್ಳಿ ಮೂಲಕ
ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: 06.25, 07.40, 08.50, 10.30, 14.05, 15.05, 16.20, 18.10, 19.35, 20.55
ಭಾರತ್ನಗರ 2ನೇ ಹಂತದಿಂದ ಹೊರಡುವ ಸಮಯ: 05.50, 07.00, 08.15, 09.30, 11.10, 14.30, 15.40, 17.15, 18.50, 20.15
- ಕೆ.ಆರ್. ಪುರ ಮೆಟ್ರೋ ನಿಲ್ದಾಣ – ಸರ್ಜಾಪುರ
ಮಾರ್ಗ: ಮಹಾದೇವಪುರ ಜಂಕ್ಷನ್, ದೊಡ್ಡನೆಕ್ಕುಂದಿ ರೈಲು ನಿಲ್ದಾಣ, ಮಾರತ್ತಹಳ್ಳಿ ಸೇತುವೆ ಜಂಕ್ಷನ್, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ದೊಡ್ಡಕನ್ನಳ್ಳಿ, ಕೊಡತಿ ಗೇಟ್, ಮುತ್ತನಲ್ಲೂರು ಕ್ರಾಸ್, ದೊಮ್ಮಸಂದ್ರ, ಯಮರೆ, ಸೋಂಪುರ ಗೇಟ್
ಕೆ.ಆರ್. ಪುರ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: 05.30, 06.50, 08.00, 08.40, 09.25, 10.10, 11.20, 11.35, 13.15, 14.45, 15.25, 16.05, 16.50, 17.45, 19.10, 20.40
ಸರ್ಜಾಪುರದಿಂದ ಹೊರಡುವ ಸಮಯ: 05.30, 06.50, 07.55, 08.40, 09.30, 10.10, 11.20, 13.40, 14.25, 15.10, 16.00, 16.40, 17.40, 19.10, 20.40
- ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) – ಬಿದರಹಳ್ಳಿ
ಮಾರ್ಗ: ಟಿ ಟಿ.ಸಿ. ಪಾಳ್ಯ ಕ್ರಾಸ್, ಕಿತ್ತಗನೂರು, ಈಸ್ಟ್ ಪಾಯಿಂಟ್ ಕಾಲೇಜ್ ಬ್ಯಾಕ್ ಗೇಟ್
ಟಿನ್ ಫ್ಯಾಕ್ಟರಿಯಿಂದ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಹೊರಡುವ ಸಮಯ: 08.50, 10.50, 12.25, 14.00, 16.00, 17.35
ಬಿದರಹಳ್ಳಿಯಿಂದ ಹೊರಡುವ ಸಮಯ: 08.00, 10.00, 11.35, 13.10, 15.15, 16.45
ಮೆಟ್ರೋ ಪ್ರಯಾಣಿಕರು ಈ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಉಪಯೋಗಿಸಿ ಸುಲಭ, ಸುರಕ್ಷಿತ ಹಾಗೂ ಸಮಯಬದ್ಧ ಪ್ರಯಾಣವನ್ನು ಅನುಭವಿಸುವಂತೆ ವಿನಂತಿಸಲಾಗಿದೆ.
ಬೆಂಗಳೂರು ನಗರದ ಯೋಜನೆಗಳಿಗೆ ಅನುಮೋದನೆ ಹಾಗೂ ಬೆಂಬಲಕ್ಕೆ ಕೇಂದ್ರ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ಹವಾನಿಯಂತ್ರಿತ ವಜ್ರ BMTC ಬಸ್ ಸಂಚಾರ ಆರಂಭ








