ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಗುಂಡು ಹಾರಿಸಿ ಪತ್ನಿಯನ್ನೇ ಪತಿಯೊಬ್ಬ ಹತ್ಯೆಗೈದ ಘಟನೆ ನಡೆದಿದೆ.
ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿಯಲ್ಲಿ ಈ ದುಷ್ಕೃತ್ಯವನ್ನು ನಡೆಸಲಾಗಿದೆ. ಏಕಾಏಕಿ ಗನ್ ತೆಗೆದು ಪತ್ನಿ ಮೇಲೆ ಪತಿ ಫೈರಿಂಗ್ ಮಾಡಿದ್ದಾನೆ. ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪತ್ನಿಯನ್ನು ಬಾಲಮುರುಗನ್ ಎಂಬಾತ ಹತ್ಯೆಗೈದಿದ್ದಾನೆ.
ಅಂದಹಾಗೇ ಕೋರ್ಟ್ ನಲ್ಲಿ ದಂಪತಿಗಳ ವಿವಾಹ ವಿಚ್ಚೇಧನ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಇಬ್ಬರೂ ವಿಚಾರಣೆ ಮುಗಿಸಿಕೊಂಡು ಬಂದಿದ್ದರು. ಈ ವೇಳೆಯಲ್ಲಿ ಬಾಲಮುರುಗನ್ ಹಾಗೂ ಪತ್ನಿ ನಡುವೆ ಜಗಳ ಉಂಟಾಗಿದೆ.
ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಬಾಲಮುರುಗನ್ ತನ್ನ ಬಳಿಯಿದ್ದಂತ ಗನ್ ತೆಗೆದು ಪತ್ನಿಗೆ ಹೊಡೆದಿದ್ದಾರೆ. ಇದರಿಂದಾಗಿ ಬಾಲಮುರುಗನ್ ಪತ್ನಿ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾಗಡಿರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ: ಹೊಸನಗರದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಕಲಗೋಡು ರತ್ನಾಕರ್ ಆಯ್ಕೆ
ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯ ವೈದ್ಯರಿಂದ ಭಾರತದ ಮೊದಲ ಟೆಲಿ- ರೊಬೋಟಿಕ್ ಸರ್ಜರಿ ಪ್ರೋಗ್ರಾಂ ಆರಂಭ








