ಶಿವಮೊಗ್ಗ: ಅತಿ ಹೆಚ್ಚು ಅಂಕ ಪಡೆದ ಅಂಕ ಪಟ್ಟಿಗಳು ನಮ್ಮ ಎದುರಿಗಿವೆ. ಆದರೆ ಕೌಶಲ್ಯವಿಲ್ಲದೇ ಇದ್ದರೆ ಸ್ಪರ್ಧಾ ಜಗತ್ತನ್ನು ಎದುರಿಸಲು ಸಾಧ್ಯವಿಲ್ಲ ಆ ದೃಷ್ಟಿಯಲ್ಲಿ ಯುವಜನರು ಸಜ್ಜಾಗಬೇಕು. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲೆಯ ಸಂಸದ ಬಿವೈ ರಾಘವೇಂದ್ರ ಕಿವಿಮಾತು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ‘ಸುವರ್ಣ ಸಾಗರ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಸುವರ್ಣ ಮಹೋತ್ಸವ ಅಭಿಯಾನದ ಸಂದರ್ಭ. ನಾವು ಓದಿದ ಶಾಲೆಯನ್ನು ಸದಾ ನೆನಪಿಸಿಕೊಳ್ಳುವ ಮನಸುಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರಿ ಶಾಲಾಕಾಲೇಜುಗಳ ಅಭಿವೃದ್ದಿಗೆ ಸರ್ಕಾರ ಅಗತ್ಯ ಸೌಲಭ್ಯ ಕೊಡುತ್ತದೆ. ಆದರೆ ನಮ್ಮ ಪಾತ್ರ ಏನು ಎನ್ನುವ ಕುರಿತು ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಶಾಲಾ-ಕಾಲೇಜುಗಳು ವ್ಯಕ್ತಿತ್ವ ನಿರ್ಮಾಣದ ಕೇಂದ್ರವಾಗಿರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಅನೇಕ ತಪ್ಪುಗಳು ನಡೆಯುತ್ತದೆ. ಆದರೆ ನಿಮ್ಮ ಭವಿಷ್ಯವನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಾಗ ಅಗತ್ಯ ಶಕ್ತಿ ಕ್ರೋಢಿಕರಣ ಮಾಡಿಕೊಳ್ಳಬೇಕು. ಇತ್ತೀಚಿನ ಕೆಲವು ವಿದ್ಯಮಾನಗಳು ಆತಂಕಕಾರಿಯಾಗಿದೆ. ವೈದ್ಯರು ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದು ಯೋಚಿಸಬೇಕಾದ ವಿಷಯ ಎಂದರು.
ವೈಟ್ಕಾಲರ್ ಟೆರರಿಸಂ ನೋಡಿದಾಗ ನಮ್ಮ ಶಿಕ್ಷಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ಬಗ್ಗೆ ಚಿಂತನೆ ಮಾಡಬೇಕು. ಶಿಕ್ಷಣ ದೇಶ ಕಟ್ಟಲು ಎಷ್ಟು ಸಹಕಾರಿಯೋ, ದೇಶ ಹಾಳು ಮಾಡಲು ಸಹ ಕಾರಣವಾಗುತ್ತದೆ. ಆಯ್ಕೆ ವಿದ್ಯಾರ್ಥಿಗಳ ಕೈನಲ್ಲಿಯೆ ಇರುತ್ತದೆ. ಇಂತಹ ಸುವರ್ಣ ಸಂಭ್ರಮ ಕಾರ್ಯಕ್ರಮ ನಮ್ಮೊಳಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕು. ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕಾಲೇಜಿಗೆ ಸಂಸದರ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದ ಲಿಫ್ಟ್ ಸೌಲಭ್ಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಯುವಜನರು ಓದಿನ ಸಂದರ್ಭದಲ್ಲಿ ಆಧುನಿಕತೆಯ ಸೆಳೆತಕ್ಕೆ ಒಳಗಾಗದೆ ಅಧ್ಯಯನ ಮುಖಿ ಆಗಬೇಕು ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ನಾನು ಓದಿದ ಸರ್ಕಾರಿ ಪದವಿಪೂರ್ವ ಕಾಲೇಜು ಬದುಕು, ಆತ್ಮೀಯತೆ ಕಲಿಸಿದೆ. ರಾಜ್ಯದ ಯಾವ ಕಾಲೇಜಿನಲ್ಲಿಯೂ ಇಲ್ಲದ ಆತ್ಮೀಯತೆ ಇಲ್ಲಿ ಕಾಣಬಹುದು. ಕಾಲೇಜು ಇನ್ನಷ್ಟು ಅಭಿವೃದ್ದಿಯಾಗಬೇಕು. ಸರ್ಕಾರದಿಂದ ಇನ್ನಷ್ಟು ಅನುದಾನ ತರುವ ಅಗತ್ಯವಿದೆ. ನಾನು ಶಾಸಕನಾಗಿದ್ದಾಗ ಒಂದಷ್ಟು ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಇಲ್ಲಿ 2561 ವಿದ್ಯಾರ್ಥಿಗಳು ಓದುತ್ತಿದ್ದು ಕಾಲೇಜಿಗೆ ಪ್ರವೇಶ ಪಡೆಯುವುದೇ ಪ್ರತಿಷ್ಠೆ ಆಗುವ ಮಟ್ಟಕ್ಕೆ ಸರ್ಕಾರಿ ಶಾಲೆ ಬೆಳೆದಿರುವುದು ಹೆಮ್ಮೆಯ ಸಂಗತಿ ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ್ದೇನೆ ಎಂದರು.
ಚಲನಚಿತ್ರ ನಟ ಕಾಲೇಜಿನ ಹಳೆಯ ವಿದ್ಯಾರ್ಥಿ ಅರುಣ್ ಸಾಗರ್ ಮಾತನಾಡಿ ಸಾಗರದ ಮಣ್ಣಿನಲ್ಲಿಯೇ ಒಂದು ವಿಶೇಷವಾದ ಗುಣವಿದೆ ಸ್ನೇಹ ಎಂಥವರನ್ನು ತಡೆಯುತ್ತದೆ ಶಿಕ್ಷಣ ಎಂಬುದು ಇವತ್ತು ಬರೆ ವ್ಯಾಪಾರಿಕರಣವಾಗುತ್ತಿದೆ ನಿಜವಾಗಿಯೂ ಅದು ಮನುಷ್ಯತ್ವವನ್ನು ಬೆಳೆಸುವ ಕೇಂದ್ರವಾಗಿ ನಿರ್ಮಾಣವಾಗಬೇಕು ಸುವರ್ಣ ಮಹೋತ್ಸವವನ್ನು ಅತ್ಯಂತ ಅಚ್ಚುಗಟ್ಟಾಗಿ ಕಟ್ಟಿಕೊಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ ಅವುಗಳ ಜೊತೆಯಲ್ಲಿ ಹೊಂದಿಕೊಳ್ಳುವ ಶಿಕ್ಷಣವನ್ನು ಮುನ್ನಡೆಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಬರೆ ವಿದ್ಯಾವಂತರಾದರೆ ಏನು ಸಾಧ್ಯವಿಲ್ಲ ಬುದ್ಧಿವಂತರಾಗಿಯು ಬದುಕು ಕಟ್ಟಿಕೊಳ್ಳಬೇಕು ಎಂದರು.
ಈ ವೇಳೆ ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ,, ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ್, ಸದಸ್ಯರಾದ ಉಮೇಶ್, ಲೋಕೇಶ್, ಭವ್ಯ, ಸಲೀಂ ಯೂಸೂಫ್, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಸಾಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್, ಪ್ರಾಧ್ಯಾಪಕ ಪರಮೇಶ್ವರಪ್ಪ ಜಿ.. ಸತ್ಯನಾರಾಯಣ ಕೆ.ಸಿ.. ಬಂಗಾರಪ್ಪ ಎಂ. ಎಲ್.ಎಂ.ಹೆಗಡೆ ಇತರರು ಹಾಜರಿದ್ದರು.
ಶಾಲಾ-ಕಾಲೇಜಿಗೆ ಒಳ್ಳೆಯ ಹೆಸರು ಬರಲು ಅಧ್ಯಾಪಕ ವೃಂದ ಪ್ರಮುಖ ಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ಸಾಗರದಲ್ಲಿ ಟಿಸಿ ಸರಬರಾಜು ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಿ ಮೆಸ್ಕಾಂ ಎದುರು ಗ್ರಾಮಸ್ಥರು ಪ್ರತಿಭಟನೆ








