ಶಿವಮೊಗ್ಗ: ಶಾಲಾ-ಕಾಲೇಜಿಗೆ ಒಳ್ಳೆಯ ಹೆಸರು ಬರಲು ಅಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕ ವೃಂದ ಪ್ರಮುಖ ಕಾರಣವಾಗುತ್ತದೆ. ಒಂದು ಕಾಲದಲ್ಲಿ ದೊಡ್ಡಿ ಎಂದು ಕರೆಯುತ್ತಿದ್ದ ಸರ್ಕಾರಿ ಪದವಿಪೂರ್ವ ಕಾಲೇಜು ರಾಜ್ಯದಲ್ಲಿಯೆ ನಂ.1 ಸ್ಥಾನ ಗಳಿಸಲು ಎಲ್ಲರ ಸಹಕಾರ ಇದೆ. 2004ರಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಬಂದಾಗ ಕಾಲೇಜಿನ ಅಭಿವೃದ್ದಿಗೆ ಅರ್ಹನಿಶಿ ಕೆಲಸ ಮಾಡಿದ್ದೇನೆ. ನಮ್ಮ ಕಾಲ ಮತ್ತು ಸಂದರ್ಭದಲ್ಲಿ ಹೆಚ್ಚಿಗೆ ಓದಲು ಸಾಧ್ಯವಾಗಲಿಲ್ಲ ಆದರೆ ಯಾರೇ ಆಗಲಿ ಯಾವ ಸಂದರ್ಭದಲ್ಲಿ ಆಗಲಿ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದರೆ ನನ್ನ ಬಳಿ ಬನ್ನಿ ನಾನು ಎಂದಿಗೂ ಸಹಕಾರ ನೀಡುತ್ತೇನೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರದ ನೆಹರೂ ಮೈದಾನದಲ್ಲಿ ಮಂಗಳವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಅವರು, ನನ್ನ ಜೀವನದಲ್ಲಿಯೇ ಇದೊಂದು ವಿಶೇಷವಾದ ದಿನವಾಗಿದೆ. ನಾನು ಓದಿದ ಈ ಕಾಲೇಜಿಗೆ 50 ವರ್ಷಗಳು ಕಾಲೇಜು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಪಾಲ್ಗೊಳ್ಳುವ ಅವಕಾಶ ನನ್ನದಾಗಿದೆ ಎಂದರು.
ಅಕ್ಷರ ಕಲಿಸಿದ ಗುರು ನಮ್ಮನ್ನು ಮುನ್ನಡೆಸಿದ ತಂದೆ ತಾಯಿಗಳು ಕಷ್ಟಕ್ಕೆ ಜೊತೆಯಾದ ಬಂಧುಗಳನ್ನು ಯಾವತ್ತು ಮರೆಯಬಾರದು. ನಾನು ಓದಿದ ಈ ಕಾಲೇಜಿಗೆ ನನ್ನ ಕೈಲಾದಷ್ಟು ಪ್ರಮಾಣಿಕವಾಗಿ ಸಹಕಾರ ಮಾಡುತ್ತೇನೆ. ಕಾಲೇಜಿಗೆ ಅತ್ಯವಶ್ಯಕ ವಿದ್ದ ಅತ್ಯುತ್ತಮವಾದ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗಿದೆ. ಇಡೀ ಕಾಲೇಜಿಗೆ ಬಣ್ಣ ಮಾಡಿ ಮಾಡಿ ಸಿಂಗಾರ ಗೊಳಿಸಿದ್ದೇವೆ. ಕಳೆದ 50 ವರ್ಷಗಳಲ್ಲಿ 50,000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಇಲ್ಲಿ ಓದಿ ಮುಂದೆ ನಡೆದಿದ್ದಾರೆ ಎಂದು ತಿಳಿಸಿದರು.
ಈ ಕಾಲೇಜಿನಲ್ಲಿ ಓದಿದಂತವರು ಹೆಸರಾಂತ ವೈದ್ಯರಾಗಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ಪತ್ರಕರ್ತರಾಗಿದ್ದಾರೆ. ಶಿಕ್ಷಣ ತಜ್ಞರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಲ್ಲಿ ಓದಿದ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ ಆಗಿದೆ. ಹಳೆಯ ವಿದ್ಯಾರ್ಥಿಗಳನ್ನು ಸಾಕಷ್ಟು ಸಂಪರ್ಕಿಸುವ ಪ್ರಯತ್ನ ಸಮಿತಿಯ ವತಿಯಿಂದ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಅವರೆಲ್ಲರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ರಂಗ ಮಂದಿರ ಆಗಬೇಕು ಒಳಾಂಗಣದ ಕಾರ್ಯಕ್ರಮಗಳಿಗೆ ಕಾರ್ಯಕ್ರಮಗಳಿಗೆ ಒಂದಿಷ್ಟು ವ್ಯವಸ್ಥೆ ಆಗಬೇಕಾಗಿದೆ. ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಪ್ರದೇಶದಲ್ಲಿ ಎಲ್ಲರನ್ನೂ ಒಂದೇ ಕಡೆ ಸೇರಿಸುವಂತಹ ವ್ಯವಸ್ಥೆ ಕಾಲೇಜಿನಲ್ಲಿ ಇಲ್ಲ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಅವಕಾಶ ಮಾಡಿಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿಗೆ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಎಲ್ಲರ ಸಹಕಾರದಿಂದ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ವೇಳೆ ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ,, ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ್, ಸದಸ್ಯರಾದ ಉಮೇಶ್, ಲೋಕೇಶ್, ಭವ್ಯ, ಸಲೀಂ ಯೂಸೂಫ್, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್, ಪ್ರಾಧ್ಯಾಪಕರಾದಂತ ಪರಮೇಶ್ವರಪ್ಪ ಜಿ.. ಸತ್ಯನಾರಾಯಣ ಕೆ.ಸಿ.. ಬಂಗಾರಪ್ಪ ಎಂ. ಎಲ್.ಎಂ.ಹೆಗಡೆ ಇತರರು ಹಾಜರಿದ್ದರು.
BREAKING: ಬಿಕ್ಲು ಶಿವ ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಸಂಕಷ್ಟ: ಜಾಮೀನು ಅರ್ಜಿ ವಜಾ








