ಬೆಂಗಳೂರು : ನಿವೃತ್ತ ರಾಜ್ಯ ಸರ್ಕಾರಿ ನೌಕರರೇ 2016ರ ಪರಿಷ್ಕೃತ ಪಿಂಚಣಿ ಪ್ರಸ್ತಾವನೆ ಹಾಗೂ ಸೈಪಿಂಗ್-ಆಪ್ ನ್ನು ನೀಡಿರುವ ಅನುಬಂಧದಲ್ಲಿ ಭರ್ತಿ ಮಾಡಿ ಸಲ್ಲಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಪತ್ರದಲ್ಲಿ 2016ರ ಪರಿಷ್ಕೃತ UGC/ICAR/AICTE ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ:01-07-2022 ಹಾಗೂ ನಂತರದಲ್ಲಿ ನಿವೃತ್ತರಾಗಿರುವ ಬೋಧಕ ಮತ್ತು ತತ್ಸಮಾನ ವೃಂದದ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ ಪುನರ್ ನಿಗಧಿ ಮತ್ತು ಹಿರಿಯ ನೌಕರರ ನಿವೃತ್ತ ವೇತನದಲ್ಲಿ ಅಸಮಾನತೆಯನ್ನು ಸರಿಪಡಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ.
ಸರ್ಕಾರಿ/ ಖಾಸಗಿ ಅನುದಾನಿತ ಕಾಲೇಜುಗಳ ಮಾಹಿತಿಯನ್ನು ಈ ಪತ್ರಕ್ಕೆ ಲಗತ್ತಿಸಿರುವ ಅನುಬಂಧದಲ್ಲಿ ಭರ್ತಿ ಮಾಡಿ ದಿನಾಂಕ:24-12-2025 ರೊಳಗಾಗಿ ಕೇಂದ್ರ ಕಛೇರಿಗೆ ಸಾಫ್ಟ್ ಕಾಫಿಯನ್ನು ಇ-ಮೇಲ್ ವಿಳಾಸ: dce.pension@gmail.com ಕ್ಕೆ ಮೇಲ್ ಮಾಡುವಂತೆ ಹಾಗೂ ಹಾರ್ಡ್ ಕಾಪಿಯನ್ನು ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.









