ಬೆಂಗಳೂರು : ಪಿ.ಎಂ. ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್-ಸೆಟ್ಗಾಗಿ ಅರ್ಜಿ ಸಲ್ಲಿಸಿರುವ ರೈತರ ಗಮನಕ್ಕೆತಾಂತ್ರಿಕ ಕಾರ್ಯಸಾಧ್ಯತೆ ಹೊಂದಿರುವ ಅರ್ಜಿಗಳ ರೈತರುಗಳಿಗೆ ಈಗಾಗಲೇ ಮೊಬೈಲ್ ಸಂದೇಶಗಳನ್ನು ರವಾನಿಸಲಾಗಿದೆ/ರವಾನಿಸಲಾಗುತ್ತಿದೆ. ಈ ಸಂಬಂಧ ರೈತರು ತಮ್ಮ ಪಾಲಿನ ವಂತಿಗೆಯನ್ನು ದಿನಾಂಕ: 30.12.2025 ರೊಳಗೆ ಪಾವತಿಸಲು ಅಂತಿಮ ಗಡುವು ನಿಗಧಿಪಡಿಸಲಾಗಿದೆ. ಸದರಿ ಗಡುವಿನ ಒಳಗಾಗಿ ಪಾವತಿಸಲು ವಿಫಲವಾದಲ್ಲಿ, ಅಂತಹ ಅರ್ಜಿಗಳನ್ನು ರದ್ದುಪಡಿಸಲಾಗುವುದು.
ಆನ್ಲೈನ್ ಮುಖಾಂತರ ವಂತಿಗೆಯನ್ನು ಪಾವತಿಸಲು www.souramitra.com ดู “PAY FARMER SHARE”ನ್ನು ಕ್ಲಿಕ್ ಮಾಡಿ ತಮ್ಮ ಅರ್ಜಿ ಸಂಖ್ಯೆ / ಮೊಬೈಲ್ ಸಂಖ್ಯೆ ನಮೂದಿಸಿ ಪಾವತಿಸಬಹುದಾಗಿರುತ್ತದೆ. ಹಣಪಾವತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು KREDL ನ ಸಹಾಯವಾಣಿ : 080-22202100 & 8095132100 ಮುಖಾಂತರ ಪಡೆದುಕೊಳ್ಳಲು ಸೂಚಿಸಲಾಗಿದೆ.









