ಮೈಸೂರು: ಕೆಂಗೇರಿ ಮತ್ತು ಹೆಜ್ಜಾಲ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 16ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಹಾಗೂ ತೆರವುಗೊಳಿಸುವ ಕಾಮಗಾರಿಗಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ, ಈ ಕೆಳಗಿನ ರೈಲು ಸೇವೆಗಳನ್ನು ರದ್ದು ಮತ್ತು ಭಾಗಶಃ ರದ್ದುಗೊಳಿಸಲಾಗಿದೆ.
ರದ್ದು: ಡಿಸೆಂಬರ್ 25, 2025 ಮತ್ತು ಜನವರಿ 8, 2026 ರಂದು ಅರಸೀಕೆರೆ–ಮೈಸೂರು ದೈನಂದಿನ ಪ್ಯಾಸೆಂಜರ್ (56265), ಮೈಸೂರು–ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್ (06269) ಹಾಗೂ ಎಸ್ಎಂವಿಟಿ ಬೆಂಗಳೂರು–ಮೈಸೂರು ಪ್ಯಾಸೆಂಜರ್ ಸ್ಪೆಷಲ್ (06270) ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ.
ಡಿಸೆಂಬರ್ 26, 2025 ಮತ್ತು ಜನವರಿ 9, 2026 ರಂದು ಮೈಸೂರು–ಅರಸೀಕೆರೆ ಪ್ಯಾಸೆಂಜರ್ (56266) ಮತ್ತು ಕೆಎಸ್ಆರ್ ಬೆಂಗಳೂರು–ಚನ್ನಪಟ್ಟಣ ಮೆಮು (66535) ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ.
ಭಾಗಶಃ ರದ್ದು: ಡಿಸೆಂಬರ್ 25, 2025 ಮತ್ತು ಜನವರಿ 8, 2026 ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣವನ್ನು ಭಾಗಶಃ ರದ್ದುಗೊಳಿಸಲಾಗುವುದು:
ರೈಲು ಸಂಖ್ಯೆ 06526 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು ಚನ್ನಪಟ್ಟಣ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರದ್ದಾಗಲಿದ್ದು, ಚನ್ನಪಟ್ಟಣದಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 16022 ಅಶೋಕಪುರಂ– ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ಅಶೋಕಪುರಂ ಮತ್ತು ಬೆಂಗಳೂರು ನಡುವೆ ರದ್ದಾಗಿದ್ದು, ನಿಗದಿತ ಸಮಯಕ್ಕೆ ಅಶೋಕಪುರಂ ಬದಲಿಗೆ ಕೆಎಸ್ಆರ್ ಬೆಂಗಳೂರಿನಿಂದಲೇ ಪ್ರಯಾಣ ಆರಂಭಿಸಲಿದೆ.
ರೈಲು ಸಂಖ್ಯೆ 66580 ಅಶೋಕಪುರಂ–ಕೆಎಸ್ಆರ್ ಬೆಂಗಳೂರು ಮೆಮು ರೈಲು ರಾಮನಗರಂ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರದ್ದಾಗಲಿದ್ದು, ರಾಮನಗರಂದಲ್ಲಿ ತನ್ನ ಸಂಚಾರ ಮೊಟಕುಗೊಳಿಸಲಿದೆ.
ಡಿಸೆಂಬರ್ 26, 2025 ಮತ್ತು ಜನವರಿ 9, 2026 ರಂದು ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು ಕೆಎಸ್ಆರ್ ಬೆಂಗಳೂರು ಮತ್ತು ರಾಮನಗರಂದ ನಡುವೆ ಭಾಗಶಃ ರದ್ದಾಗಲಿದ್ದು, ಬೆಂಗಳೂರಿನ ಬದಲಿಗೆ ರಾಮನಗರಂದಿಂದಲೇ ನಿಗದಿತ ಸಮಯದಲ್ಲಿ ಹೊರಡಲಿದೆ.
BREAKING: ಎಲ್ಲಾ ಮಾದರಿಯ ಕ್ರಿಕೆಟಿಗೆ ಕರ್ನಾಟಕದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ನಿವೃತ್ತಿ ಘೋಷಣೆ
ಮಹಾತ್ಮ ಗಾಂಧಿ ಹೆಸರನ್ನು ತೆಗೆದ ಬಿಜೆಪಿ ಸರ್ಕಾರಕ್ಕೆ ಕೊನೆಯ ದಿನಗಳು ಪ್ರಾರಂಭ: ಡಿಸಿಎಂ ಡಿ.ಕೆ ಶಿವಕುಮಾರ್








