ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಸರ್ಕಾರ ಆರಂಭಿಸಿತ್ತು. ಮೊದಲ ದಿನವೇ ಬರೋಬ್ಬರಿ 60.16 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದ್ದು, ಡಿ.21ರ ಇಂದು 62.40 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕೋದಕ್ಕೆ ಗುರಿಯನ್ನು ಹೊಂದಲಾಗಿತ್ತು. ಆದರೇ 60.16 ಲಕ್ಷ ಮಕ್ಕಳಿಗೆ ಹಾಕಲು ಸಾಧ್ಯವಾಗಿದೆ ಎಂದಿದೆ.
62,40,114 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಗುರಿಯಲ್ಲಿ 60,16,322 ಲಕ್ಷ ಮಕ್ಕಳಿಗೆ ಪೋಲಿಯೋ ಹನಿಯನ್ನು ಹಾಕಲಾಗಿದೆ. ಮೊದಲ ದಿನವೇ ಶೇ.96ರಷ್ಟು ಗುರಿಯನ್ನು ಸಾಧಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದೆ.
ಅಂದಹಾಗೇ ಬಾಗಲಕೋಟೆಯಲ್ಲಿ 2,14,962 ಮಕ್ಕಳಿಗೆ, ಬಳ್ಳಾರಿಯಲ್ಲಿ 1,91,995, ಬೆಂಗಳೂರು ಗ್ರಾಮಾಂತರದಲ್ಲಿ 1,01,358, ಬಿಬಿಎಂಪಿ ವ್ಯಾಪ್ತಿಯಲ್ಲಿ 10,77,134, ಶಿವಮೊಗ್ಗ ಜಿಲ್ಲೆಯಲ್ಲಿ 1,32,196 ಮಕ್ಕಳು ಸೇರಿದಂತೆ ರಾಜ್ಯಾಧ್ಯಂತ 60,16,322 ಮಂದಿ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಿರುವುದಾಗಿ ತಿಳಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು..
BIG Alert: ರಾಜ್ಯದಲ್ಲಿ ತೀವ್ರ ‘ಶೀತಗಾಳಿ’ ಹಿನ್ನಲೆ: ಈ ಸಲಹೆಗಳನ್ನು ಪಾಲಿಸುವಂತೆ ಸರ್ಕಾರ ಸೂಚನೆ | Cold wave
ದರ್ಶನ್ ಜೈಲಲ್ಲಿದ್ದಾಗ ಮಾತಾಡ್ತಾರೆ, ಹೊರಗಡೆ ಇದ್ದಾಗ ಇದ್ದು ಇಲ್ಲದ ಹಾಗೆ ಇರ್ತಾರೆ : ಕಿಚ್ಚಗೆ ದಾಸನ ಪತ್ನಿ ಟಾಂಗ್!








