ಶಿವಮೊಗ್ಗ : ಹಲವು ವರ್ಷಗಳಿಂದ ಸಾಗರಲನ್ನು ಜಿಲ್ಲೆ ಮಾಡಬೇಕು ಎಂಬ ಹಕ್ಕೊತ್ತಾಯವಿದೆ. ಅದಕ್ಕೆ ಪೂರಕವಾಗಿ ಜಿಲ್ಲಾ ಹೋರಾಟ ಸಮಿತಿ ಹೋರಾಟ ಮಾಡುತ್ತಾ ಬರುತ್ತಿದೆ. ಡಿ.31ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸದೆ ಹೋದಲ್ಲಿ, ಸಾಗರ ಜಿಲ್ಲೆ ಮಾಡಬೇಕೆಂಬ ಪ್ರಸ್ತಾಪ ನೆನಗುದಿಗೆ ಬಿದ್ದಂತೆ ಆಗಲಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಸೆಂಬರ್.31ರ ಒಳಗಾಗಿ ಕೇಂದ್ರ ಸರ್ಕಾರ ಹೊಸ ಜಿಲ್ಲೆಯ ಪ್ರಸ್ತಾವನೆ ಸಲ್ಲಿಸಲು ರಾಜ್ಯಗಳಿಗೆ ಪತ್ರ ಬರೆದಿದೆ. ಒಂದೊಮ್ಮೆ ಜಿಲ್ಲೆ ಪ್ರಸ್ತಾಪ ರಾಜ್ಯಗಳಿಂದ ಕಳಿಸದೆ ಹೋದಲ್ಲಿ ಜನಗಣತಿ, ಜಾತಿಗಣತಿ ಮುಗಿಯುವವರೆಗೂ ಹೊಸ ಜಿಲ್ಲೆ ಬಗ್ಗೆ ಚರ್ಚೆ ನಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಗರ ಜಿಲ್ಲೆ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ತಕ್ಷಣ ಕಳಿಸಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆ ಹೊರತುಪಡಿಸಿದರೆ ಜಿಲ್ಲೆಯಾಗುವ ಸಾಧ್ಯತೆ ಇರುವುದು ಸಾಗರ ಉಪವಿಭಾಗ ಕೇಂದ್ರಕ್ಕೆ ಮಾತ್ರ. ಸಾಗರ, ಹೊಸನಗರ, ಸೊರಬ ಸೇರಿ ಮಲೆನಾಡು ಜಿಲ್ಲೆ ಮಾಡಲು ಅಗತ್ಯ ವಾತಾವರಣ ಇದೆ. ಜಿಲ್ಲೆ ಆಗುವುದರಿಂದ ಅಗತ್ಯ ಸೌಲಭ್ಯ ಸಾಗರಕ್ಕೆ ಸಿಗುತ್ತದೆ. ಜಿಲ್ಲಾಸ್ಪತ್ರೆ, ಜಿಲ್ಲಾಮಟ್ಟದ ಕಚೇರಿಗಳು, ಸಾರಿಗೆ ಸಂಪರ್ಕ ಎಲ್ಲವೂ ಅಭಿವೃದ್ದಿ ಹೊಂದುತ್ತದೆ. ಈ ಎಲ್ಲವನ್ನೂ ಮನಗಂಡು ಜಿಲ್ಲೆಯಾಗುವುದರ ಬಗ್ಗೆ ಸರ್ಕಾರದ ಮೇಲೆ ಅಗತ್ಯ ಒತ್ತಡ ತರುವ ಕೆಲಸ ಹೋರಾಟ ಸಮಿತಿ ಮಾಡಿದೆ. ಈ ಹೋರಾಟಕ್ಕೆ ಹಿಂದಿನoದಲೂ ನಾನು ಮತ್ತು ನಮ್ಮ ಪಕ್ಷ ಬೆಂಬಲಿಸಿಕೊoಡು ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಕೊಟ್ರಪ್ಪ ನೇದರವಳ್ಳಿ ಇನ್ನಿತರರು ಹಾಜರಿದ್ದರು.
5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು








